ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ವಿಹಾನ್ ಅಪ್ಪನ ಸಿನಿಮಾದಲ್ಲೇ ಮಿಂಚಲು ಸಜ್ಜಾಗಿದ್ದಾರೆ. ಈ ಹಿಂದೆ ಗಾಳಿಪಟ 2 ಸಿನಿಮಾದಲ್ಲಿ ವಿಹಾನ್ ನಟಿಸಿದ್ದು ಈಗ ಅಪ್ಪನ ಮತ್ತೊಂದು ಸಿನಿಮಾದಲ್ಲಿ ವಿಹಾನ್ ಬಣ್ಣ ಹಚ್ಚುತ್ತಿದ್ದಾರೆ.ಗಣೇಶ್ ಅವರ ಮಗಳು ಈಗಾಲೇ ತನ್ನ ಅಪ್ಪನ ಸಿನಿಮಾದಲ್ಲೇ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಈಗ ಮಗನ ಸರದಿ.
ಗಣೇಶ್ ಅಭಿನಯಿಸುತ್ತಿರುವ ಸಖತ್ ಸಿನಿಮಾದಲ್ಲಿ ಗಣೇಶ್ ಅವರ ಚಿಕ್ಕ ವಯಸ್ಸಿನ ಪಾತ್ರದಲ್ಲಿ ವಿಹಾನ್ ಅಭಿನಯಿಸುತ್ತಿದ್ದು ಮಗನ ಹುಟ್ಟುಹಬ್ಬದ ಪ್ರಯುಕ್ತ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಖತ್ ಸಿನಿಮಾದ ಪೋಸ್ಟರ್ ಶೇರ್ ಮಾಡಿದ್ದಾರೆ.
ಜೊತೆಗೆ, ಮೊಳಕೆಯ ಬೆಳೆಯುವ ಸಿರಿಯನು ತೆರೆಯ ಮೇಲೆ ನೀವೇ ನೋಡಿ ಹರಸಿ ಹಾರೈಸಿ ಆಶೀರ್ವದಿಸಿ. ಜ್ಯೂನಿಯರ್ ವಿಹಾನ್ ಗಣೇಶ್ ಸಖತ್ ಸಿನಿಮಾದಲ್ಲಿ ಬಾಲು ಆಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಮಗನೇ ಎಂದು ಕ್ಯಾಪ್ಷನ್ನಲ್ಲಿ ಬರೆಯುವ ಮೂಲಕ ವಿಶ್ ಮಾಡಿದ್ದಾರೆ.
Discussion about this post