ಕನ್ನಡದ ವರ ನಟ ರಾಜ್ ಕುಮಾರ್ ಮತ್ತು ಅವರ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ಅರಸಿಕೊಂಡು ಬಂದಿತ್ತು.
ಇದನ್ನು ಪಾರ್ವತಮ್ಮ ಅವರ ಸಹೋದರ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ಹೇಳಿದ್ದಾರೆ.
ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಬೆಳ್ಳಿ ಹೆಜ್ಜೆ’ ಕಾರ್ಯಕ್ರಮದ ಅತಿಥಿಯಾಗಿ ಅವರು ಮಾತನಾಡಿದ ಅವರು, ಅದು ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದ ಅವಧಿ. ಆ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ರಾಜಶೇಖರ ಮೂರ್ತಿಯವರು, ತಮ್ಮನ್ನ ಭೇಟಿಯಾಗಿ MLCಯಾಗಲು ಡಾ.ರಾಜ್‌ಕುಮಾರ್ ಅವರನ್ನು ಒಪ್ಪಿಸಿ, ನಮಗೆ ಅವರನ್ನು ವಿಧಾನ ಪರಿಷತ್ತಿಗೆ ಕಳುಹಿಸಬೇಕೆಂಬ ಇಚ್ಛೆಯಿದೆ ಅಂದರು.

ಈ ವಿಚಾರವನ್ನು ರಾಜ್‌ಕುಮಾರ್ ಅವರಿಗೆ ತಿಳಿಸಿದಾಗ ‘ಅವರಿಗೆ ಬೇರೆ ಕೆಲಸ ನೋಡಿಕೊಳ್ಳಲು ಹೇಳಿ ಎಂದು ತಮಗೆ ಬಂದ ಅವಕಾಶವನ್ನು ತಿರಸ್ಕರಿಸಿದರು ಎಂದರು.
ಇದಾದ ನಂತ್ರ ಪಾರ್ವತಮ್ಮ ಅವರಿಗೆ ಈ ಅವಕಾಶ ಕೊಡಲು ನಿರ್ಧರಿಸಲಾಯಿತಂತೆ. ಆಗ್ಲೂ ಅದೇ ಅವಕಾಶವನ್ನು ಪಾರ್ವತಮ್ಮ ಕೂಡ ತಿರಸ್ಕರಿಸಿದರು. ಬಳಿಕ ಅದೇ ಆಫರ್ ಚಿನ್ನೇಗೌಡರಿಗೆ ಬಂತು.

ಅಕ್ಕಹಾಗೂ ಭಾವ ಅವರಿಗೆ ಬೇಡವಾಗಿದ್ದ ರಾಜಕೀಯ ಪದವಿ ನನಗ್ಯಾಕೆ ಎಂದು ತಾವೂ ಕೂಡಾ ಶಾಸಕರಾಗುವ ಅವಕಾಶವನ್ನು ನಿರಾಕರಿಸಿದರಂತೆ.
ಡಾ.ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಅವರು ಮನಸ್ಸು ಮಾಡಿದ್ದರೆ ಎಂದೋ ಶಾಸಕರಾಗಬಹುದಿತ್ತು. ಆದರೆ ರಾಜಕೀಯ ಅಂದ್ರೆ ಏನು ಅನ್ನುವುದರ ಅರಿವಿದ್ದ ದೊಡ್ಮನೆ ಮಂದಿ ಆಫರ್ ಗಳನ್ನು ನಯವಾಗಿಯೇ ನಿರಾಕರಿಸಿದ್ದಾರೆ. ಈ ಮೂಲಕ ಕನ್ನಡ ನಾಡಿಗೆ ಒಂದು ಆದರ್ಶವಾಗಿ ಹೊರ ಹೊಮ್ಮಿದ್ದು ವರನಟರ ಕುಟುಂಬ.
Discussion about this post