Saturday, May 15, 2021
spot_img

ಈ ಫೋಟೋದ ಅಸಲಿ ಕಥೆಯೇ ಬೇರೆ… ಮುಂಬೈನ ಶ್ರೀಸ್ವಾಮಿನಾರಾಯಣ ದೇವಸ್ಥಾನ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆಯಾಗಿದೆ ಅನ್ನೋದು ಪಕ್ಕಾ ಸುಳ್ಳು ಸುದ್ದಿ….

Must read

- Advertisement -
- Advertisement -

ಮುಂಬೈನ ಶ್ರೀ ಸ್ವಾಮಿ ನಾರಾಯಣ ದೇವಸ್ಥಾನವನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. ಅಲ್ಲಿ ಚಿಕಿತ್ಸೆ ಪಡೆಯುವ ಎಲ್ಲಾ ರೋಗಿಗಳ ವೆಚ್ಚವನ್ನು ದೇವಾಲಯದ ಆಡಳಿತ ಮಂಡಳಿಯೇ ಭರಿಸಲಿದೆ ಅನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಜನ ಸಾಮಾನ್ಯರು ಮಾತ್ರ ರಾಜಕಾರಣಿಗಳು ತಮ್ಮ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶೇರ್ ಮಾಡುತ್ತಿದ್ದಾರೆ.

ಕರ್ನಾಟಕದ ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ಮುಖಂಡ ಬಿಎಲ್ ಸಂತೋಷ್ ಸೇರಿದಂತೆ ಅನೇಕು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಕೇವಲ ಬಿಜೆಪಿಯವರು ಮಾತ್ರ ಅಲದ್ದೆ ಕಾಂಗ್ರೆಸ್ ಮಂದಿಯೂ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಅಷ್ಟೇ ಯಾಕೆ ಮೋದಿಯ ವಿರುದ್ಧ ಸದಾ ಗುಡುಗುವ ಸ್ವರ ಭಾಸ್ಕರ್ ಸೇರಿದಂತೆ ಪತ್ರಕರ್ತರಾದ ಪದ್ಮಾನ್ ಜೋಶಿ, ರಾಹುಲ್ ಪಂಡಿತ್ ಕೂಡಾ ಮುಂಬೈ ನ ದೇವಸ್ಥಾನ ಆಸ್ಪತ್ರೆಯಾಗಿ ಪರಿವರ್ತನೆಯಾಗಿದೆ ಅಂದಿದ್ದಾರೆ.

ಆದರೆ ಮುಂಬೈನಲ್ಲಿ ಇಂತಹುದೊಂದು ಕೆಲಸ ನಡೆದೇ ಇಲ್ಲ. ಮುಂಬೈನಲ್ಲಿರುವ ಶ್ರೀಸ್ವಾಮಿ ನಾರಾಯಣ ದೇವಸ್ಥಾನ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆಯಾಗಿಲ್ಲ. ಬದಲಾಗಿ ಮುಂಬೈ ಅನ್ನೋ ಜಾಗದಲ್ಲಿ ವಡೋದರ ಎಂದು ಬರೆದರೆ ಸರಿಯಾಗುತ್ತದೆ.

BAPS Shri Swaminarayan Mandir – London Our global efforts to combat the effects of #COVID19 continue in India with a…

Posted by Friends of BAPS Poland on Thursday, April 15, 2021

ಹೌದು ಗುಜರಾತ್ ನಲ್ಲಿ ಅಟ್ಟಹಾಸಗೈಯುತ್ತಿರುವ ಕೊರೋನಾ ಸೋಂಕು ನಿಯಂತ್ರಣಕ್ಕೆ ಕೈ ಜೋಡಿಸಿರುವ  ಶ್ರೀಸ್ವಾಮಿ ನಾರಾಯಣ ದೇವಸ್ಥಾನ ( bochasanwasi akshar purushottam swaminarayan sanstha (baps) ಸಂಸ್ಥೆ ವಡೋದರದ ತನ್ನ ದೇವಸ್ಥಾನವನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿದೆ. ಈ ಬಗ್ಗೆ ಟಿವಿ9 ಗುಜರಾತ್ ವರದಿಯೊಂದನ್ನು ಪ್ರಸಾರ ಕೂಡಾ ಮಾಡಿದೆ.

ಪ್ರಸ್ತುತ 300 ಬೆಡ್ ಗಳು ಸಿದ್ದವಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಇದು 500 ಬೆಡ್ ಸಾಮರ್ಥ್ಯ ಹೊಂದಲಿದೆ. ಇನ್ನು ಸೋಂಕಿತರಿಗಾಗಿ 13 ಸಾವಿರ ಲೀಟರ್ ಅಕ್ಸಿಜನ್, 30 ಟಾಯ್ಲೆಟ್, 40 ಬಾತ್ ರೂಮ್ ಗಳನ್ನು ಸಿದ್ದಗೊಳಿಸಲಾಗಿದೆ.

ಜೊತೆಗೆ ವೆಂಟಿಲೇಟರ್ ಹಾಗೂ ಐಸಿಯು ವ್ಯವಸ್ಥೆಗಳನ್ನು ಕೂಡಾ ದೇವಸ್ಥಾನ ಆಡಳಿತ ಮಂಡಳಿಯೇ ಮಾಡಿದೆ.

ಅಲ್ಲಿಗೆ ಇದು ಮುಂಬೈನಲ್ಲಿ ನಿರ್ಮಾಣವಾಗಿರುವ ಆಸ್ಪತ್ರೆಯಲ್ಲ, ಬದಲಾಗಿ ವಡೋದರದಲ್ಲಿ ಅನ್ನುವುದು ಸ್ಪಷ್ಟವಾಗಿದೆ. ಇಷ್ಟು ದಿನಗಳ ದೇವಸ್ಥಾನಗಳು ಯಾಕೆ ನಿರ್ಮಾಣವಾಗಬೇಕು ಎಂದು ಕೊಂಕು ತೆಗೆಯೋ ಮಂದಿ ಇದೀಗ ಖಂಡಿತಾ ಉತ್ತರ ಸಿಕ್ಕಿರುತ್ತದೆ.

- Advertisement -
- Advertisement -spot_img
- Advertisement -spot_img

Latest article