ಉತ್ತರ ಪ್ರದೇಶ : ರಾಯಬರೇಲಿ ಬೋಜಿಪುರದ ಜಗನ್ ಲಾಲ್ ತನ್ನ 35ನೇ ವರ್ಷಕ್ಕೆ 10 ಮದುವೆಯಾಗಿದ್ದ. ಮಕ್ಕಳಾಗಲಿಲ್ಲ ಅನ್ನುವ ಕಾರಣಕ್ಕೆ ಜಗನ್ ಲಾಲ್ ನ ಸರಣಿ ಮದುವೆ ಕಾರ್ಯ ಮುಂದುವರಿದಿತ್ತು. 10 ಮದುವೆಯಾದರೂ ಸಂತಾನ ಭಾಗ್ಯ ಆತನಿಗೆ ಕೂಡಿ ಬರಲೇ ಇಲ್ಲ.
ಹೀಗಾಗಿ 10 ಜನ ಪತ್ನಿಯರ ಪೈಕಿ ಕೆಲವರು ಮೃತಪಟ್ಟಿದ್ರೆ ಮತ್ತೆ ಕೆಲವರು ಆತನಿಂದ ದೂರವಾಗಿದ್ದರು. ಹೀಗಾಗಿ ಅವನೊಂದಿಗೆ ಉಳಿದದ್ದು ಇಬ್ಬರು ಪತ್ನಿಯರು ಮಾತ್ರ.
ಇದನ್ನೂ ಓದಿ : ಪಾಪ ಅದೇನೂ ಸಂಕಷ್ಟವಿತ್ತೋ… ಗಂಡನಿಗೆ 1248 ಕೋಟಿ ರೂಪಾಯಿ ಪರಿಹಾರ ಕೊಟ್ಟ ಗಾಯಕಿ
ಈ ನಡುವೆ ಜಗನ್ ಲಾಲ್ ಜನವರಿ 20 ರಂದು ಕೊಲೆಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಕೊಲೆಗಾರರ ಸುಳಿವು ಸಿಕ್ಕಿರಲಿಲ್ಲ. ಮೊದಲಿಗೆ ಜಗನ್ ಲಾಲ್ ನ ಪತ್ನಿಯರ ಮೇಲೆ ಸಂಶಯವಿತ್ತು. ಆದರೆ ಅದಕ್ಕೆ ಸಾಕ್ಷಿಗಳೇ ಇರಲಿಲ್ಲ. ಹೀಗಾಗಿ ಮತ್ತೊಂದು ಆಯಾಮದಲ್ಲಿ ತನಿಖೆ ನಡೆಸಿದಾಗ 3 ಜನ ಕೊಲೆಗಾರರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಅವರನ್ನು ವಿಚಾರಣೆ ನಡೆಸಿದಾಗ ಗೊತ್ತಾಗಿದ್ದು ಈ ಕೊಲೆಯ ಹಿಂದೆ ಲಾಲ್ ಅತ್ತಿಗೆಯೇ ನೆರಳಿದೆ ಎಂದು. ಅತ್ತಿಗೆ ಮುನ್ನಿದೇವಿಯೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದು ಗೊತ್ತಾಗಿದೆ.
ಕೊಲೆಗೆ ಕಾರಣ
ಮಕ್ಕಳಾಗಲಿಲ್ಲ ಎಂಬ ಕೊರಗಿನಲ್ಲಿದ್ದ ಜಗನ್ ಲಾಲ್ ಮುಂದಿನ ಭವಿಷ್ಯದ ಬಗ್ಗೆ ಚಿಂತಿತನಾಗಿದ್ದ. ಹೀಗಾಗಿ ಮುಂದೆ ತಮ್ಮನ್ನು ನೋಡಿಕೊಳ್ಳುವ ಸಲುವಾಗಿ ತನ್ನ ಬಳಿಯಿದ್ದ ಕೋಟಿ ಕೋಟಿ ಮೊತ್ತದ 14 ಎಕರೆ ಜಮೀನನ್ನು ಸಂಬಂಧಿ ಯುವಕನೊಬ್ಬ ಹೆಸರಿಗೆ ಬರೆಯಲು ನಿರ್ಧರಿಸಿದ್ದ.
ಜಗನ್ ಲಾಲ್ ನಿರ್ಧಾರ ಅತ್ತಿಗೆ ಮುನ್ನಿದೇವಿಯ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಎಲ್ಲಿ ಜಮೀನು ನಮ್ಮ ಕೈ ತಪ್ಪುತ್ತದೋ ಎಂದು ಮೂರು ಮಂದಿ ಯುವಕರಿಗೆ ಸುಪಾರಿ ಕೊಟ್ಟಿದ್ದಳು. ಅದರಂತೆ ಕತ್ತು ಹಿಸುಕಿ ಉಸಿರುಗಟ್ಟಿಸಿ ಜಗನ್ ನನ್ನು ಕೊಲೆ ಮಾಡಲಾಗಿತ್ತು.
ಇದೀಗ ಕೊಲೆಗಾರರು ಮತ್ತು ಮುನ್ನಿದೇವಿ ಜೈಲು ಸೇರಿದ್ದಾರೆ.