ಬೆಳ್ಳಗ್ಗೆ ಎದ್ದು ಟಿವಿ ಆನ್ ಮಾಡಿದರೆ ಸಾಕು ಕುರುಕಲು ತಿಂಡಿಗಳ ಜಾಹೀರಾತು ರಾರಾಜಿಸುತ್ತಿರುತ್ತದೆ. ಅದನ್ನು ನೋಡಿದ ಮಕ್ಕಳು, ಹಲ್ಲುಜ್ಜುವ ಮುನ್ನವೇ ಅಂಗಡಿ ಬಾಗಿಲ ಮುಂದೆ ನಿಂತಿರುತ್ತಾರೆ.
ಹೀಗೆ ಜಂಕ್ ಫುಡ್ ಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿ ಎಂದು ಗೊತ್ತಿದ್ದರೂ ಮಕ್ಕಳ ಹಠದ ಮುಂದೆ ಪೋಷಕರು ಶರಣಾಗಲೇಬೇಕಾಗುತ್ತದೆ.ಹಾಗಂತ ಟಿವಿಗಳಲ್ಲಿ ಜಂಕ್ ಫುಡ್ ಜಾಹೀರಾತಿಗೆ ಬ್ರೇಕ್ ಹಾಕಲು ನಮಗೆ ಸಾಧ್ಯವಾಗಿಲ್ಲ.
ಈ ನಡುವೆ ಅನಾರೋಗ್ಯಕರ ತಿಂಡಿಗಳ ಜಾಹೀರಾತು ವಿಚಾರದಲ್ಲಿ ಬ್ರಿಟನ್ ಸರ್ಕಾರ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಮಕ್ಕಳ ಆರೋಗ್ಯದ ಕಾರಣದಿಂದ ಇನ್ನು ಮುಂದೆ ಕುರುಕಲು ತಿಂಡಿಗಳ ಜಾಹೀರಾತು ರಾತ್ರಿ 9 ಗಂಟೆಯಿಂದ ಮಾತ್ರ ಕಡ್ಡಾಯವಾಗಿ ಪ್ರಸಾರವಾಗಬೇಕು ಎಂದು ಬ್ರಿಟನ್ ಸರ್ಕಾರ ಆದೇಶಿಸಿದೆ.
ಮುಂದಿನ ವರ್ಷದಿಂದ ಈ ಆದೇಶ ಜಾರಿಗೆ ಬರಲಿದ್ದು, ದೇಶದ ಮಕ್ಕಳಲ್ಲಿ ಬೊಜ್ಜು ಸಮಸ್ಯೆ ಹೆಚ್ಚಾಗುತ್ತಿದೆ ಅನ್ನುವ ಕಾರಣದಿಂದ ಈ ನಿರ್ಧಾರಕ್ಕೆ ಅಲ್ಲಿನ ಸರ್ಕಾರ ಬಂದಿದೆ. ನಮ್ಮ ಸರ್ಕಾರಕ್ಕೆ ಅಂತಹ ಧೈರ್ಯ ಇದೆಯೇ..?
Discussion about this post