ಕೊಚ್ಚಿ : ಪ್ರಾದೇಶಿಕ ಪಕ್ಷಗಳೇ ಅಧಿಕಾರ ನಡೆಸುತ್ತಿರುವ ಕೇರಳ ಹಾಗೂ ತಮಿಳುನಾಡು ಮೇಲೆ ಕಣ್ಣಿಟ್ಟಿರುವ ಬಿಜೆಪಿ ಅಧಿಕಾರದ ಸಮೀಪಕ್ಕೆ ಸಾಗಬೇಕು ಎಂದು ನಿರ್ಧರಿಸಿದೆ.
ಈ ಹಿನ್ನಲೆಯಲ್ಲಿ ತಮಿಳುನಾಡಿನಲ್ಲಿ ಈಗಾಗಲೇ ಹಲವು ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ.
ಮುಂದುವರಿದ ಭಾಗವಾಗಿ ಕೇರಳದಲ್ಲಿ ಮೆಟ್ರೋ ಖ್ಯಾತಿಯ ಶ್ರೀಧರನ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ.
ಇದರ ಬೆನ್ನಲ್ಲೇ ಕೇರಳ ಹೈಕೋರ್ಟ್ ನ ನಿವೃತ ನ್ಯಾಯಾಧೀಶರಾದ ಪಿ ಎನ್. ರವೀಂದ್ರನ್ ಹಾಗೂ ವಿ.ಚಿತ್ತಂಬರೀಸ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಇಬ್ಬರನ್ನೂ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ವಿ.ಚಿತ್ತಂಬರೀಸ್ ಉಪಸ್ಥಿತರಿರಲಿಲ್ಲ. ಬಿಜೆಪಿ ನಾಯಕರ ಭೇಟಿ ಸಲುವಾಗಿ ದೆಹಲಿಗೆ ತೆರಳಿದ್ದ ಅವರನ್ನು ಹೆಸರನ್ನು ಉಲ್ಲೇಖಿಸಲಾಗಿದೆ.
ತಾವು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ಕುರಿತಂತೆ ಪತ್ರಿಕೆಯೊಂದಕ್ಕೆ ಮಾತನಾಡಿರುವ ವಿ.ಚಿತ್ತಂಬರೀಸ್, ನಾನು ಕಾಲೇಜು ದಿನಗಳಲ್ಲಿ ಎಬಿವಿಪಿಯ ನಿಷ್ಟಾವಂತ ಕಾರ್ಯಕರ್ತನಾಗಿದ್ದೆ ಅಂದಿದ್ದಾರೆ.

ಇನ್ನು ಇದೇ ಕಾರ್ಯಕ್ರಮದಲ್ಲಿ ಮಹಿಳಾ ಕಾಂಗ್ರೆಸ್ ನ ಅನೇಕ ನಾಯಕಿಯರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಜೊತೆಗೆ ನಿವೃತ ಡಿಜಿಪಿ ವೇಣುಗೋಪಾಲ್ ನಾಯರ್, ಅಡ್ಮಿರಲ್ ಬಿ ಆಪ್ ಮೇನನ್, ಬಿಪಿಸಿಎಲ್ ನ ನಿವೃತ ಜನರಲ್ ಮ್ಯಾನೇಜರ್ ಸೋಮಚೂಡನ್ ಮತ್ತು ಮಹಿಳಾ ಕಾಂಗ್ರೆಸ್ ನ ಶಿಜ್ಜಿ ರಾಯ್ ಸೇರಿ 12 ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಮೋದಿ ಕೆಲಸ ಮೆಚ್ಚಿ ಬಿಜೆಪಿ ಸೇರಿದ್ದಾರೆ
Discussion about this post