ಕೊರೋನಾ ಲಸಿಕೆಯು ಒಂದು ಡೋಸ್ ಸೋಂಕಿನಿಂದ ಆಗಬಹುದಾದ ಸಾವಿನ ಅಪಾಯದಿಂದ ಶೇ 92ರಷ್ಚು ರಕ್ಷಣೆ ನೀಡಲಿದೆ. ಅದೇ ಎರಡು ಡೋಸ್ ಲಸಿಕೆ ಪಡೆದರೆ ಸಾವಿನ ಅಪಾಯದಿಂದ ಶೇ 98ರಷ್ಟು ರಕ್ಷಣೆ ಸಿಗಲಿದೆ ಎಂದು ಅಧ್ಯಯನವೊಂದು ಹೇಳಿದೆ.
ಪಂಜಾಬ್ ಸರ್ಕಾರದ ಸಹಾಯದೊಂದಿಗೆ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸ್ನಾತಕೋತ್ತರ ಸಂಸ್ಥೆ ಪಂಜಾಬ್ ಪೊಲೀಸರ ಮೇಲೆ ನಡೆಸಿದ ಅಧ್ಯಯನ ಮಾಹಿತಿಯನ್ನು ನೀತಿ ಆಯೋಗ ಸದಸ್ಯ ಡಾ. ವಿಕೆ. ಪೌಲ್ ಹಂಚಿಕೊಂಡಿದ್ದಾರೆ.

ಈ ವರದಿಯ ಪ್ರಕಾರ ಲಸಿಕೆ ಪಡೆಯದಿದ್ದವರಲ್ಲಿ ಸಾವಿರಕ್ಕೆ ಶೇ3ರಷ್ಟು ಜನ ಕೊರೋನಾದಿಂದ ಮೃತಪಟ್ಟಿದ್ದಾರೆ. ಒಒಂದು ಡೋಸ್ ಲಸಿಕೆ ಪಡೆದವರ ಪೈಕಿ ಸಾವಿನ ಪ್ರಮಾಣ ಶೇ.0.25ನಷ್ಟಿದ್ದು, ಎರಡು ಡೋಸ್ ಲಸಿಕೆ ಪಡೆದುಕೊಂಡವರಲ್ಲಿ ಸಾವಿನ ಪ್ರಮಾಣ ಸಾವಿರಕ್ಕೆ ಶೇ0.05 ಮಾತ್ರ ಎಂದು ಹೇಳಲಾಗಿದೆ.
ಲಸಿಕೆ ಪಡೆಯದ 4868 ಪೊಲೀಸ್ ಸಿಬ್ಬಂದಿಯಲ್ಲಿ 15 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಮೊದಲ ಡೋಸ್ ಪಡೆದಿದ್ದ 35 856 ಪೊಲೀಸ್ ಸಿಬ್ಬಂದಿಗಳ ಪೈಕಿ 9 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. 2 ಡೋಸ್ ಲಸಿಕೆ ಪಡೆಕೊಡಂದಿದ್ 42,720 ಸಿಬ್ಬಂದಿಯ ಪೈಕಿ ಇಬ್ಬರು ಕೊರೋನಾದಿಂದ ಮೃತಪಟ್ಟಿದ್ದಾರೆ.
ಒಟ್ಟಿನಲ್ಲಿ ಮೂರನೇ ಅಲೆಯ ಹೊತ್ತಿಗೆ ಸಾಕಷ್ಟು ಮಂದಿಗೆ ಎರಡು ಡೋಸ್ ಲಸಿಕೆ ವಿತರಣೆಯಾದರೆ ದೊಡ್ಡದೊಂದು ಅಪಾಯದಿಂದ ಭಾರತ ಪಾರಾಗಲಿದೆ.

Discussion about this post