ಗುವಾಹಟಿ : ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ ಎರಡು ದೋಣೆಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ದೋಣಿಯೊಂದು ಬುಧವಾರ ಮುಳುಗಿದ್ದು, ಸುಮಾರು ನೂರು ಜನರು ಜಲಸಮಾಧಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ NDRF ಮತ್ತು SDRF ತಂಡ ದೌಡಾಯಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಈವರೆಗೆ 41 ಜನರನ್ನು ರಕ್ಷಿಸಲಾಗಿದ್ದು, ಇನ್ನುಳಿದವರಿಗಾಗಿ ಶೋಧ ನಡೆದಿದೆ. ಕೆಲವರು ಈಜಿ ದಡ ಸೇರಿದ್ದಾರೆ ಎನ್ನಲಾಗಿದೆ. ಜೊರ್ಹಾತ್ ಜಿಲ್ಲಾಧಿಕಾರಿ ಅಶೋಕ ಬರ್ಮನ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
120ಕ್ಕೂ ಹೆಚ್ಚು ಪ್ರಯಾಣಿಕರಿದ್ದ ದೋಣಿಯು ನಿಮತಿ ಘಾಟ್‌ನಿಂದ ಮಾಜುಲಿ ದ್ವೀಪದತ್ತ ತೆರಳುತ್ತಿತ್ತು. ಸರ್ಕಾರದ ಒಡೆತನದ ಸ್ಟೀಮ್ ದೋಣಿಯು ಮಾಜುಲಿಯಿಂದ ವಾಪಸ್ಸಾಗುತ್ತಿತ್ತು. ಎಂದು ಗೊತ್ತಾಗಿದೆ.
Discussion about this post