ಮತ್ತೆ ನೀರು ಕೊಡುವ ಅವಕಾಶ ಸಿಕ್ಕಿದ್ದು ನನಗೆ & ಸಿದ್ದರಾಮಯ್ಯ ಅವರಿಗೆ ಸಿಕ್ಕಿರೋದು ನಮ್ಮ ಭಾಗ್ಯ
“ತುಂಗಭದ್ರಾ ಜಲಾಶಯಕ್ಕೆ ನೂತನ ಕ್ರೆಸ್ಟ್ ಗೇಟ್ ಗಳನ್ನು ಒಂದು ವರ್ಷದೊಳಗೆ ಅಳವಡಿಸಲಾಗುವುದು” ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.
ತುಂಗಭದ್ರಾ ಜಲಾಶಯ ಬಾಗಿನ ಸಮರ್ಪಣೆ ನಂತರ ಮುನಿರಾಬಾದ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಆಂಧ್ರಪ್ರದೇಶ, ತೆಲಂಗಾಣ ಮತ್ತು ತುಂಗಭದ್ರಾ ಬೋರ್ಡ್ ಬಳಿ ಚರ್ಚೆ ನಡೆಸಿ ನೂತನ ಗೇಟ್ ಅಳವಡಿಕೆ ಮಾಡಲಾಗುವುದು.
ಈ ಮೂಲಕ ನಮ್ಮ ರೈತರ ರಕ್ಷಣೆ ಮಾಡಲು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗುವುದು” ಎಂದು ಹೇಳಿದರು. ಆಗಸ್ಟ್ 10 ನೇ ತಾರೀಕಿನಂದು 19ನೇ ಗೇಟ್ ಕಿತ್ತು ಹೋದಾಗ ಜಿಲ್ಲಾ ಮಂತ್ರಿಗಳು, ಎಂಡಿಯವರು ಕರೆ ಮಾಡಿ ಡ್ಯಾಮ್ ಅಪಾಯದಲ್ಲಿದೆ ಎಂದು ಪರಿಸ್ಥಿತಿಯ ಬಗ್ಗೆ ತಿಳಿಸಿದರು.
ನಾನು ಆತಂಕ ಪಡಬೇಡಿ ಎಂದು ಹೇಳಿ ಮಾರನೇ ದಿನವೇ ಸ್ಥಳಕ್ಕೆ ಭೇಟಿ ನೀಡಿದೆ. ಅಧಿಕಾರಿಗಳು ಹಾಗೂ ತಾಂತ್ರಿಕ ಪರಿಣಿತರ ಹತ್ತಿರ ಮಾತನಾಡಿ ಎಲ್ಲಾ ಗೇಟ್ ಗಳಿಂದ ನೀರನ್ನು ಹರಿಸಿ ಎಂದು ಹೇಳಿ ತಕ್ಷಣ ಗೇಟ್ ತಯಾರು ಮಾಡುವ ಸಂಸ್ಥೆಗಳ ಜೊತೆ ಚರ್ಚೆ ನಡೆಸಿ ಗೇಟ್ ತಯಾರಿಗೆ ಆದೇಶ ನೀಡಿದೆ” ಎಂದರು.
ಡ್ಯಾಮಿನ ಗೇಟ್ ಕಿತ್ತು ಹೋದಂತಹ ಕಷ್ಟಕಾಲದಲ್ಲಿ ನಾವು ಎದೆಗುಂದದೆ ರೈತರ ಜಮೀನಿಗೆ ಮತ್ತೆ ನೀರನ್ನು ಕೊಡುವಂತಹ ಅವಕಾಶ ನನಗೆ ಹಾಗೂ ಸಿದ್ದರಾಮಯ್ಯ ಅವರಿಗೆ ಸಿಕ್ಕಿರುವುದು ನಮ್ಮ ಭಾಗ್ಯ” ಎಂದು ತಿಳಿಸಿದರು.
Deputy Chief Minister D.K. Shivakumar, who also holds the Department of Water Resources portfolio, has said that all 33 crest gates at the Tungabhadra reservoir will be replaced within a year.