ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಬಿದ್ದಿದ್ದ ಚಿರತೆ ಜೊತೆ ಕಪಿ ಚೇಷ್ಟೆ ಮಾಡಲು ಹೋದ ವ್ಯಕ್ತಿಯೊಬ್ಬರು ಆಸ್ಪತ್ರೆ ಸೇರಿದ ಘಟನೆ ತುಮಕೂರು ಜಿಲ್ಲೆಯ ತಿಪಟೂರು, ಹೊನ್ನವಳ್ಳಿಯ ಮಂಜುನಾಥ್ ನಗರದಲ್ಲಿ ನಡೆದಿದೆ.
ಕಾಡಿನಿಂದ ನಾಡಿಗೆ ಬಂದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇಟ್ಟಿದ್ದರು. ಬೋನಿಗೆ ಬಿದ್ದಿದ್ದ ಚಿರತೆಯ ಜೊತೆ ಚೇಷ್ಟೆ ಮಾಡಲು ಹೋದ ದಾಸನಕಟ್ಟೆ ಗ್ರಾಮದ ನಿವಾಸಿ ರಮೇಶ್ ಮುಖ ಕೈಗಳಿಗೆ ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ.
ಬೋನಿಗೆ ಬಿದ್ದ ಚಿರತೆಯನ್ನು ರೊಚ್ಚಿಗೆಬ್ಬಿಸಲು ಹೋದ ರಮೇಶ್ ಕಡಿಯಿಂದ ತಿವಿದಿದ್ದಾರೆ. ಈ ವೇಳೆ ಕೋಪಗೊಂಡ ಚಿರತೆ ರಮೇಶ್ ರನ್ನು ಕಡ್ಡಿ ಸಮೇತ ಎಳೆದುಕೊಂಡಿದೆ.
ಮಾತ್ರವಲ್ಲದೆ ರಮೇಶ್ ಅವರ ಕೈ ಮುಖವನ್ನು ಪರಚಿ ಹಾಕಿದೆ. ತಕ್ಷಣ ಸ್ಥಳೀಯರು ರಮೇಶ್‍ನನ್ನು ಚಿರತೆಯಿಂದ ರಕ್ಷಿಸಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
Discussion about this post