ತಿರುಪತಿ : ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ( TTD ) ವೆಂಕಟೇಶ್ವರನ ದರ್ಶನದ ಅವಧಿಯನ್ನು ವಿಸ್ತರಿಸಿದೆ. ಇನ್ನು ಮುಂದೆ ಭಕ್ತರು ರಾತ್ರಿ 11.30ರ ತನಕ ತಿಮ್ಮಪ್ಪನ ದರ್ಶನ ಪಡೆಯಬಹುದಾಗಿದೆ. ಇದಾದ ಬಳಿಕ ಕಲಿಯುಗದ ಪ್ರತ್ಯಕ್ಷ ದೈವ ತಿರುಮಲೇಶ್ವರಿಗೆ ಏಕಾಂತ ಸೇವೆ ನಡೆಯಲಿದೆ.
ಭಕ್ತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಟಿಟಿಡಿ ದರ್ಶನ ಅವಧಿಯನ್ನು ಹೆಚ್ಚಿಸಿದ್ದು ಈ ಹಿಂದೆ ರಾತ್ರಿ 10 ಗಂಟೆಯ ತನಕ ಮಾತ್ರ ಭಕ್ತರಿಗೆ ದೇವರ ದರ್ಶನ ಕಲ್ಪಿಸಲಾಗಿತ್ತು.
ಆದರೆ ಈ ಬಗ್ಗೆ ಕೆಲ ಪಂಡಿತರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. ಟಿಟಿಡಿಯ ಈ ನಿರ್ಧಾರದಿಂದ ತಿಮ್ಮಪ್ಪನಿಗೆ ನಿದ್ರಾಭಂಗವಾಗಲಿದೆ ಅಂದಿದ್ದಾರೆ. ಮಾತ್ರವಲ್ಲದೆ ಏಕಾಂತ ಸೇವೆಗೂ ಅಪಚಾರ ಮಾಡಿದಂತಾಗುತ್ತದೆ. ಭಕ್ತ ಕೋಟಿಗೆ ದರ್ಶನ ನೀಡಬೇಕು ಅನ್ನುವ ಕಾರಣಕ್ಕೆ ಶಾಸ್ತ್ರಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು ಸರಿಯಲ್ಲ.
ಸಪ್ತಗಿರಿವಾಸನ ಪೂಜೆಗ ತನ್ನದೇ ಆದ ನಿಯಮಗಳಿದೆ. ಕನಿಷ್ಟ ಪಕ್ಷ ರಾತ್ರಿ 12 ಗಂಟೆಗೆ ಮುಂಚೆ ಏಕಾಂತ ಸೇವೆಯನ್ನು ಮುಗಿಸಬೇಕು. ಆದರೆ ಈಗಾಗಲೇ ಏಕಾಂತ ಸೇವೆ ಮುಗಿಯುವಾಗ 1.30 ಆಗುತ್ತದೆ ಕಳೆಯುತ್ತದೆ. ಇನ್ನು 11.30ರ ತನಕ ಭಕ್ತರ ದರ್ಶನಕ್ಕೆ ಅವಕಾಶ ನೀಡಿದರೆ ದೇವರು ಯೋಗ ನಿದ್ರೆಗೆ ಜಾರುವುದು ಯಾವಾಗ. ಮತ್ತೆ 2.30ಕ್ಕೆ ಸುಪ್ರಭಾತ ಸೇವೆಯೊಂದಿಗೆ ದೇವರನ್ನು ಎಬ್ಬಿಸಲಾಗುತ್ತದೆ ಅಂದರೆ ದೇವರಿಗೆ ಸಿಗುವ ಯೋಗ ನಿದ್ರೆಯ ಅವಧಿ ಕೇವಲ 1 ಗಂಟೆ.
ಯೋಗನಿದ್ರೆಯ ಅವಧಿಯಲ್ಲಿ ಶ್ರೀವೆಂಕಟೇಶ್ವರನ ದರ್ಶನಕ್ಕೆ ಮುಕ್ಕೋಟಿ ದೇವರುಗಳು ಆಗಮಿಸುತ್ತಾರೆ ಅನ್ನುವುದು ನಂಬಿಕೆ.

Discussion about this post