ಒಡಿಶಾದ ಬಾಲಸೋರ್ ನಲ್ಲಿ ವ್ಯಕ್ತಿಯೊಬ್ಬರು ಇತ್ತೀಚೆಗೆ ಟೊಯೋಟ ಫಾರ್ಚುನರ್ ಕಾರು ಖರೀದಿಸಿದ್ದರು. ಒಂದು ದಿನ ನೆಟ್ಟಗೆ ಪ್ರಯಾಣ ಮಾಡುವ ಮುನ್ನವೇ ಕಾರಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹೀಗಾಗಿ ಹೊಸ ಕಾರು ಖರೀದಿಸಿದ ಖುಷಿಯಲ್ಲಿದ್ದವರು ಬೇಸರದಿಂದ ಡೀಲರ್ ಬಳಿ ಒಯ್ದು ರಿಪೇರಿ ಮಾಡಿಸಿಕೊಂಡು ಬಂದಿದ್ದಾರೆ.
ಹೊಸ ಕಾರು ರಿಪೇರಿ ಬಂತಲ್ಲ ಎಂದು ರಿಪೇರಿ ಮಾಡಿಸಿಕೊಂಡು ಮನೆಗೆ ಬಂದ್ರೆ ಕಾರಿನ ಬ್ರೇಕ್ ಕೈಕೊಟ್ಟಿತ್ತು. ಹೀಗಾಗಿ ಇದ್ಯಾಕೋ ಕಾರು ಸರಿ ಇಲ್ಲ ಎಂದು ಹೊಸ ಕಾರು ಕೊಡಿ ಎಂದು ಮನವಿ ಮಾಡಿದ್ದಾರೆ. ಆದರೆ ಹೊಸ ಕಾರು ಕೊಡಲು ಒಪ್ಪದ ಡೀಲರ್ ರಿಪೇರಿ ಮಾಡಿಕೊಡುವುದಾಗಿ ಹೇಳಿದ್ದಾರೆ.
ಇವರು ಮನವಿಗೆಲ್ಲಾ ಬಗ್ಗುವುದಿಲ್ಲ ಎಂದು ಅರಿತ ಗ್ರಾಹಕ, ಗ್ರಾಹಕ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ.
ಕೋರ್ಟ್ ಮೆಟ್ಟಿಲು ಹತ್ತುತ್ತಿದ್ದಂತೆ ಎಚ್ಚೆತ್ತುಕೊಂಡ ಡೀಲರ್ ಹೊಸ ಕಾರು ಕೊಡುತ್ತೇವೆ ಆದರೆ ಕೇಸು ಹಿಂಪಡೆಯಿರಿ ಅಂದಿದ್ದಾರೆ. ಡೀಲರ್ ಮಾತು ಕೇಳಿದ ಗ್ರಾಹಕ ಕೇಸು ವಾಪಾಸ್ ಪಡೆದಿದ್ದಾರೆ. ಆದರೆ ಹೊಸ ಕಾರು ಕೊಡಲು ಮತ್ತೆ ನಕ್ರ ಶುರು ಮಾಡಿದ ಡೀಲರ್ ಕಾರು ಬಂದಿಲ್ಲ, ಕಂಪನಿ ವಿಚಾರಣೆ ನಡೆಯುತ್ತಿದೆ ಹೀಗೆ ದಿನಕ್ಕೊಂದು ಕಾರಣ ಹೇಳತೊಡಗಿದ.
ಇನ್ನು ಡೀಲರ್ ನನ್ನು ಹೀಗೆ ಬಿಟ್ಟರೆ ಕಷ್ಟ ಅಂದ ಗ್ರಾಹಕ ಶೋರೂಂ ನಲ್ಲಿದ್ದ ಡೆಮೋ ಕಾರನ್ನೇ ಮನೆಗೆ ತೆಗೆದುಕೊಂಡು ಬಂದಿದ್ದಾರೆ. ಮೊದಲು ಹೊಸ ಕಾರು ಕೊಡಿ ಆಮೇಲೆ ಡೆಮೋ ಕಾರು ಒಯ್ಯಿರಿ ಅಂದಿರುವ ಗ್ರಾಹಕ, ಪೊಲೀಸ್ ದೂರು ಬೇಕಾದ್ರೆ ದಾಖಲಿಸಿ ಮತ್ತೆ ಗ್ರಾಹಕರ ನ್ಯಾಯಾಲಯ ಹೋಗುತ್ತೇನೆ ಅಂದಿದ್ದಾರೆ.
ಅಂದ ಹಾಗೇ ಈ ಘಟನೆ ಜೂನ್ ನಲ್ಲಿ ನಡೆದಿತ್ತು. ಹಲವು ತಿಂಗಳ ಹೋರಾಟದ ಬಳಿಕ ಇದೀಗ ಸಮಸ್ಯೆ ಬಗೆ ಹರಿದಿದ್ದು, ಗ್ರಾಹಕನಿಗೆ ಹೊಸ ಕಾರು ನೀಡಿರುವ ಕಂಪನಿ ಪ್ರಕರಣವನ್ನು ಇತ್ಯರ್ಥಗೊಳಿಸಿದೆ.
Discussion about this post