ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅವನಿ ಲೇಖರ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಜಯಗಳಿಸುವ ಮೂಲಕ ಭಾರತಕ್ಕೆ ಚಿನ್ನದ ಪದಕವನ್ನು ಅವರು ತಂದುಕೊಟ್ಟಿದ್ದಾರೆ.
ಈ ಮೂಲಕ ಈ ಬಾರಿಯ ಪ್ಯಾರಲಿಂಪಿಕ್ ನಲ್ಲಿ ಭಾರತ ಇತಿಹಾಸ ಸೃಷ್ಟಿಸಿದೆ. 19 ವರ್ಷದ ಅವನಿ ಲೆಖರ ಚಿನ್ನದ ಪದಕ ಗಳಿಸುವ ಮೂಲಕ ಪ್ಯಾರಲಿಂಪಿಕ್ ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಪ್ಯಾರಲಿಂಪಿಕ್ ನಲ್ಲಿ ಇದುವರೆಗೆ ಚಿನ್ನ ಗೆದ್ದ ಭಾರತೀಯ ಆಟಗಾರರಲ್ಲಿ ಅವನಿ ಲೆಖರಿ ನಾಲ್ಕನೆಯವರಾಗಿದ್ದಾರೆ. ಈ ಹಿಂದೆ ಪ್ಯಾರಲಿಂಪಿಕ್ ನಲ್ಲಿ ಭಾರತದ ಕ್ರೀಡಾಪಟುಗಳಾದ ಈಜುಗಾರ ಮುರಳಿಕಾಂತ್ ಪೆಟ್ಕರ್(1972), ಜಾವೆಲಿನ್ ಥ್ರೋವರ್ ದೇವೇಂದ್ರ ಜಾಜರಿಯಾ(2004 ಮತ್ತು 2016) ಮತ್ತು ಹೈಜಂಪ್ ನಲ್ಲಿ 2016ರಲ್ಲಿ ತಂಗವೇಲು ಮರಿಯಪ್ಪನ್ ಚಿನ್ನದ ಪದಕ ಗಳಿಸಿದ್ದರು.
ಅವನಿಲೇಖರ ಅವರದ್ದು ಅಸಾಧಾರಣ ಪ್ರದರ್ಶನ, ಕಷ್ಟಪಟ್ಟು ಗಳಿಸಿದ ಮತ್ತು ಅರ್ಹವಾದ ಚಿನ್ನವನ್ನು ಗೆದ್ದ ನಿಮಗೆ ಅಭಿನಂದನೆಗಳು,ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು ಎಂದು ಪ್ರಧಾನಿ ಶುಭಾಶಯ ತಿಳಿಸಿದ್ದಾರೆ.
Discussion about this post