ಟೋಕಿಯೊ : ಈ ಬಾರಿಯ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಸ್ಪರ್ಧಿಗಳು ಅದ್ಭುತ ಸಾಧನೆ ತೋರುತ್ತಿದ್ದಾರೆ. ಈ ತನಕ ಬಂದಿರುವ ಪದಕಗಳೇ ಸಾಕ್ಷಿ. ಇದೀಗ ಅರ್ಚರಿಯಲ್ಲಿ ಭಾರತಕ್ಕೆ ಮೊದಲ ಪದಕ ಲಭಿಸಿದ್ದು, ಹರ್ವಿಂದರ್ ಸಿಂಗ್ ಕಂಚಿನ ಪದಕ ಬಾಚಿದ್ದಾರೆ.
ಶುಕ್ರವಾರ ನಡೆದ ಪುರುಷರ ವೈಯಕ್ತಿಕ ರಿಕರ್ವ್ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ದಕ್ಷಿಣ ಕೊರಿಯಾದ ಕಿಮ್ ಮಿನ್ ಸು ವಿರುದ್ಧ ಗೆಲುವು ಸಾಧಿಸಿದ ಹರ್ವಿಂದರ್ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.2018ರಲ್ಲಿ ನಡೆದ ಏಷ್ಯಾನ್ ಗೇಮ್ಸ್ ಕ್ರೀಡಾಕೂಟದಲ್ಲಿ ಸಿಂಗ್ ಚಿನ್ನದ ಪದಕ ಗೆದಿದ್ದರು.
ಒಂದೂವರೆ ವರ್ಷವಿದ್ದಾಗ ಸಿಂಗ್ ಅವರಿಗೆ ಡೆಂಗ್ಯೂ ತಗುಲಿತ್ತು. ಈ ವೇಳೆ ಸ್ಥಳೀಯ ವೈದ್ಯರು ಕೊಟ್ಟ ರಾಂಗ್ ಇಂಜೆಕ್ಷನ್ ನೀಡಿದ್ದರು, ಇದರಿಂದ ಸಿಂಗ್ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದಾರೆ.
Discussion about this post