ಟೊಕಿಯೋ: ಈಗಾಗಲೇ ಕುಸ್ತಿಯಲ್ಲಿ ಒಂದು ಪದಕ ಗೆದ್ದಿರುವ ಭಾರತ ಮತ್ತೊಂದು ಪದಕ ಪಡೆಯುಲು ಹೊಸ್ತಿಲಲ್ಲಿ ನಿಂತಿದೆ. ಭಾರತದ ಕುಸ್ತಿಪಟು ಬಜರಂಗ್ ಪುನಿಯಾ ಟೊಕಿಯೋ ಒಲಂಪಿಕ್ಸ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು, ಈ ಮೂಲಕ ಪದಕದ ನಿರೀಕ್ಷೆ ಹುಟ್ಟಿಸಿದ್ದಾರೆ.
ಪುರುಷರ 65 ಕೆ.ಜಿ. ಫ್ರೀಸ್ಟೈಲ್ ವಿಭಾಗದ ಕ್ವಾರ್ಟರ್ಫೈನಲ್ನಲ್ಲಿ ಬಜರಂಗ್ ಪೂನಿಯಾ ಇರಾನ್ನ ಮೊರ್ತೆಜಾ ಗಿಯಾಸಿ ವಿರುದ್ದ ಗೆಲುವು ದಾಖಲಿಸಿ ಸೆಮಿಫೈನಲ್ ಗೆ ಟಿಕೆಟ್ ಪಡೆದಿದ್ದಾರೆ.
ಮೊದಲ ಸುತ್ತಿನಿಂದಲೂ ಎದುರಾಳಿಯ ಮೇಲೆ ಆಕ್ರಮಣಕಾರಿ ಆಟವಾಡಿದ ಬಜರಂಗ್ ಪುನಿಯಾ, ಮೊದಲ ರೌಂಡ್ನಲ್ಲಿ 1-0 ಮುನ್ನಡೆ ಸಾಧಿಸಿ, ಎರಡನೇ ರೌಂಡ್ನಲ್ಲಿ 2-1 ರಿಂದ ಮುನ್ನಡೆ ಸಾಧಿಸಿದರು. ಕೊನೆಗೆ ಬಜರಂಗ್ 2-1 ಅಂತರದಿಂದ ಗೆಲವು ಸಾಧಿಸಿದರು. ಸೆಮಿಫೈನಲ್ನಲ್ಲಿ ಅಜೆರ್ಬೈಜಾನ್ನ ಹಾಜಿ ಅಲಿಯೇವ್ ವಿರುದ್ಧ ಪುನಿಯಾ ಸೆಣಸಾಡಲಿದ್ದಾರೆ.
Discussion about this post