ಕೊನೆಯ ಪ್ರಯತ್ನದಲ್ಲಿ ಕಂಚು ಗೆಲ್ಲುತ್ತೇವೆ ಎಂದು ಕಣಕ್ಕಿಳಿದ ಭಾರತದ ಮಹಿಳಾ ಹಾಕಿ ತಂಡ ವಿರೋಚಿತ ಸೋಲು ಕಂಡಿದೆ. ಬ್ರಿಟನ್ ವಿರುದ್ಧ 3-4 ಗೋಲುಗಳ ಅಂತರದ ಸೋಲು ಅನುಭವಿಸಿದ ಭಾರತ ಮಹಿಳಾ ಹಾಕಿ ತಂಡ ಪದಕ ತಾರದೆ ನಿರಾಶೆ ಮೂಡಿಸಿರಬಹುದು ಆದರೆ ಅವರ ಆಟ ಭಾರತೀಯ ಹೃದಯ ಗೆದ್ದಿದೆ.
ಇನ್ನು ಸೋಲಿನ ನೋವು ತಾಳಲಾರದೆ ಭಾರತ ಮಹಿಳಾ ತಂಡದ ಆಟಗಾರ್ತಿಯರು ಮೈದಾನದಲ್ಲೇ ಕಣ್ಣೀರಿಟ್ಟ ದೃಶ್ಯ ಪ್ರತಿಯೊಬ್ಬ ಕ್ರೀಡಾ ಪ್ರೇಮಿಯಲ್ಲೂ ಬೇಸರ ಮೂಡಿಸಿದೆ.
1980ರ ಮಾಸ್ಕೊ ಒಲಿಂಪಿಕ್ಸ್ನಲ್ಲಿ ಭಾರತ ಮಹಿಳಾ ಹಾಕಿ ತಂಡವು ನಾಲ್ಕನೇ ಸ್ಥಾನ ಪಡೆದಿತ್ತು. ಆ ಬಳಿಕ ತಂಡದ ಸಾಧನೆ ಚೆನ್ನಾಗಿರಲಿಲ್ಲ. ಆದರೆ ಈಗ ಮಹಿಳಾ ತಂಡ ಪುಟಿದೆದ್ದು ಈ ಮಟ್ಟಕ್ಕೆ ಬಂದಿದೆ ಅಂದರೆ ಮೆಚ್ಚಲೇಬೇಕು ಪುಟಿದೆದ್ದಿರುವ ರೀತಿಯು ನಿಜಕ್ಕೂ ಹೆಮ್ಮೆಪಡುವಂತದ್ದು.
Discussion about this post