ಟೋಕಿಯೋ : ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಭಾರತ ಎರಡನೇ ಪದಕ ಗೆದ್ದುಕೊಂಡಿದೆ. ಇಂದು ಕಂಚಿನ ಪದಕಕ್ಕಾಗಿ ನಡೆದ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಪಿವಿ ಸಿಂಧು ಗೆದ್ದು ಬೀಗಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಮತ್ತೊಂದು ಪದಕ ಗೆದ್ದುಕೊಂಡಿದೆ. ಮಾತ್ರವಲ್ಲದೆ ಈ ಮೂಲಕ ಒಲಿಂಪಿಕ್ಸ್ ಪದಕಕ್ಕೆ ಎರಡನೇ ಬಾರಿ ಪಿವಿ ಸಿಂಧು ಮುತ್ತಿಕ್ಕಿದ್ದಾರೆ.
ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದಿದ್ದ ಸಿಂಧು, ಈ ಬಾರಿ ಚಿನ್ನದ ಪದಕದ ನಿರೀಕ್ಷೆ ಮೂಡಿಸಿದ್ದರು. ಆದರೆ ನಿನ್ನೆ ನಡೆದ ಸೆಮಿಫೈನಲ್ ಪಿವಿ ಸಿಂಧು ವಿರೋಚಿತ ಸೋಲು ಕಂಡಿದ್ದರು. ಆದರೆ ಇಂದು ಚೀನಾದ ಹಿ – ಬಿಂಗ್ – ಜಿಯಾವೋ ಅವರನ್ನು 21 – 13, 21 – 15 ನೇರ ಸೆಟ್ ನಲ್ಲಿ ಸೋಲಿಸಿ ಕಂಚು ಗೆದ್ದಿದ್ದಾರೆ.
Discussion about this post