ಟೋಕಿಯೊ: 2019ರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದಿದ್ದ ರವಿ ಕುಮಾರ್ ದಹಿಯಾ ಟaಕಿಯೊ ಒಲಿಂಪಿಕ್ಸ್ ನ ಕುಸ್ತಿ ಪಂದ್ಯದಲ್ಲಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತಕ್ಕೆ ಮತ್ತೆ ಪದಕದ ಭರವಸೆ ಮೂಡಿಸಿದ್ದಾರೆ.
ಪುರುಷರ 57 ಕೆಜಿ ವಿಭಾಗದ ಪುರುಷರ ಪ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಕೊಲಂಬಿಯಾದ ಅರ್ಬಾನೋ ಟೈಗ್ರೇರೋಸ್ ಉರ್ಬಾನೋ ಅವರನ್ನು ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಮಣಿಸಿ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದರು.
ಬಲ್ಗೇರಿಯಾದ ಜಾರ್ಜಿ ವ್ಯಾಂಗಲೋವ್ ಅವರನ್ನು ಕ್ವಾರ್ಟರ್ ಫೈನಲ್ನಲ್ಲಿ ರವಿ ಕುಮಾರ್ ದಹಿಯಾ ಎದುರಿಸಲಿದ್ದಾರೆ. ಕ್ರೀಡಾ ವಿಶ್ಲೇಷಕರ ಪ್ರಕಾರ ದಹಿಯಾ ಅವರಿಗೆ ಕ್ವಾರ್ಟರ್ ಫೈನಲ್ ಸುಲಭ ಸವಾಲು ಆಗಿರಲಿದೆ ಅಂದಿದ್ದಾರೆ.
ಮತ್ತೊಂದು ಕಡೆ ಪುರುಷರ 86 ಕೆಜಿ ಸ್ಪರ್ಧೆಯಲ್ಲಿ ಭಾರತದ ಮತ್ತೊಬ್ಬ ಕುಸ್ತಿಪಟು ದೀಪಕ್ ಪುನಿಯಾ ಟೆಕ್ನಿಕಲ್ ಸೂಪಿರಿಯಾರಿಟಿ ಆಧಾರದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ನೈಜೀರಿಯಾದ ಅಗಿಮೋರ್ ಅವರನ್ನು 12-02 ಅಂತಗಳ ಅಂತರದಲ್ಲಿ ಮಣಿಸಿ ಪದಕಕ್ಕೆ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.
ಕ್ವಾರ್ಟರ್ ಫೈನಲ್ ನಲ್ಲಿ ದೀಪಕ್ ಪುನಿಯಾ ಚೀನಾದ ಲಿನ್ ಜುಸೇನ್ ಎದುರು ಹೋರಾಡಲಿದ್ದಾರೆ. ಈ ಪಂದ್ಯ ಒಂದಿಷ್ಟು ಟಫ್ ಆಗಿರುವ ಸಾಧ್ಯತೆಗಳಿದೆಯಂತೆ. ಈಗಿನ ಮಾಹಿತಿ ಪ್ರಕಾರ ಪುನಿಯಾ ಫೈನಲ್ ಗೆ ಪ್ರವೇಶಿಸಿದ್ದಾರೆ.
Discussion about this post