Thursday, March 4, 2021

ಟಿವಿ ಬಿದ್ದು ಮೃತಪಟ್ಟ ಮಗು…. ಗಡಿನಾಡಲ್ಲೊಂದು ದುರ್ಘಟನೆ

Must read

- Advertisement -
- Advertisement -

ಕಾಸರಗೋಡು : ಮೈ ಮೇಲೆ ಟಿವಿ ಬಿದ್ದು ಮಗುವೊಂದು ಮೃತಪಟ್ಟ ಘಟನೆ ಕಾಸರಗೋಡು ಸಮೀಪದ ಪಳ್ಳಿಕ್ಕಾಲ್ ನಲ್ಲಿ ನಡೆದಿದೆ.

ಮೃತಪಟ್ಟ ಮಗುವನ್ನು ಮಹಮ್ಮದ್ ಸಾಬಿರ್ (02) ಎಂದು ಗುರುತಿಸಲಾಗಿದೆ.

 ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಮಹಮ್ಮದ್ ಸಾಬಿರ್ ಟಿವಿ ಸ್ಟ್ಯಾಂಡ್ ಅನ್ನು ಬಲವಾಗಿ ಅಲ್ಲಾಡಿಸಿದ್ದಾನೆ. ಈ ವೇಳೆ ಟಿವಿ ಮಗುವಿನ ಮೇಲೆ ಬಿದ್ದಿದೆ.

ಗಂಭೀರವಾಗಿ ಗಾಯಗೊಂಡ ಮಗುವನ್ನು ತಕ್ಷಣ ಕಾಸರಗೋಡು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟು ಹೊತ್ತಿಗೆ ಮಗುವಿನ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಈ ಸುದ್ದಿ ನೋಡಿದ ಮನೆ ಮಕ್ಕಳಿರುವ ಮನೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿಕೊಳ್ಳುವುದು ಅಗತ್ಯ. ಒಂದು ವೇಳೆ ಒಂದು ಕ್ಷಣ ನಿರ್ಲಕ್ಷ್ಯ ವಹಿಸಿದರೆ ಅಪಾಯ ಗ್ಯಾರಂಟಿ.

- Advertisement -
- Advertisement -
- Advertisement -

Latest article