ಟಿಕ್ ಟಾಕ್ ಮೂಲಕ ಯುವಕರನ್ನು ಪರಿಚಯ ಮಾಡಿಕೊಂಡು ವಂಚಿಸುತ್ತಿದ್ದ ಮಹಿಳೆಯನ್ನು ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸರು ಬಂಧಿಸಿ ಬಳಿಕ ಜಾಮೀನಿನ ಆಧಾರದಲ್ಲಿ ಬಿಡುಗಡೆ ಮಾಡಿದ್ದಾರೆ .
ಟಿಕ್ ಟಾಕ್ ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ವಿಜಯಲಕ್ಷ್ಮಿ ಎಂಬಾಕೆಯ ವಿಡಿಯೋವನ್ನು ಶಿವಕುಮಾರ್ ಎಂಬಾತ ಸಿಕ್ಕಾಪಟ್ಟೆ ಲೈಕ್ ಮಾಡುತ್ತಿದ್ದ.
ತನ್ನ ವಿಡಿಯೋಗಳಿಗೆ ಲೈಕ್ ಕೊಡುತ್ತಿದ್ದ ಶಿವಕುಮಾರ್ ಎದೆಗೆ ಲೈಕ್ ಬಟನ್ ಒತ್ತಿದ್ದ ವಿಜಯ ಲಕ್ಷ್ಮಿ ಆತನನ್ನು ಬುಟ್ಟಿಗೆ ಹಾಕಿಸಿಕೊಂಡಿದ್ದಳು.
ಟಿಕ್ ಟಾಕ್ ನಲ್ಲಿ ಪರಿಚಯವಾದವರು ಫೇಸ್ಬುಕ್ ನಲ್ಲಿ ಫ್ರೆಂಡ್ ಆಗಿದ್ದರು. ಬಳಿಕ ಶಿವಕುಮಾರ್ ಮೊಬೈಲ್ ನಂಬರ್ ಪಡೆದ ವಿಜಯಲಕ್ಷ್ಮಿ ಚಾಟಿಂಗ್ ಶುರುವಿಟ್ಟುಕೊಂಡಿದ್ದಳು. ಗೆಳೆತನ ಪ್ರೀತಿಗೆ ತಿರುಗಿ ಶಿವಕುಮಾರ್ ಹಾಗೂ ವಿಜಯಲಕ್ಷ್ಮಿ ಪರಸ್ಪರ ಒಪ್ಪಿ ಒಂದೇ ಮನೆಯಲ್ಲಿ ವಾಸ ಶುರುವಿಟ್ಟುಕೊಂಡರು.
ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿದ್ದ ವಿಜಯಲಕ್ಷ್ಮಿ, ಶಾಪಿಂಗ್, ಬಾಡಿಗೆ ಆ ಖರ್ಚು ಈ ಖರ್ಚು ಎಂದು ಶಿವಕುಮಾರ್ ನಿಂದ 4 ಲಕ್ಷ ರೂ. ಪಡೆದಿದ್ದಳು.
ಇತ್ತ ಶಿವಕುಮಾರ್ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ವಿಜಯಲಕ್ಷ್ಮಿ ಮದುವೆಗೆ ನಿರಾಕರಿಸಿ, ಆತನ ಸಹವಾಸ ತೊರೆದಿದ್ದಳು.
ಆಗಿದ್ದು ಆಗೋಯ್ತು ಎಂದು ಶಿವಕುಮಾರ್ ಸುಮ್ಮನಿದ್ರೆ ವಿಜಯಲಕ್ಷ್ಮಿಯು ಶಿವಕುಮಾರ್ ಗೆ ಕರೆ ಮಾಡಿ, ಹಣ ನೀಡುವಂತೆ ಒತ್ತಾಯಿಸಿದ್ದಳು. ಕೊಡುವಷ್ಟು ಕೊಟ್ಟು ನಂತ್ರ ವಿಜಯಲಕ್ಷ್ಮಿಗೆ ಹಣ ಕೊಡುವುದನ್ನು ನಿಲ್ಲಿಸಿದ್ದ.
ಇದರಿಂದಾಗಿ ರೊಚ್ಚಿಗೆದ್ದ ವಿಜಯಲಕ್ಷ್ಮಿ ತನ್ನ ಸ್ನೇಹಿತ ಮಧು ಕೊಲ್ಯಾನ್ನಿಂದ ಕರೆ ಮಾಡಿಸಿ ಕೊಲೆ ಬೆದರಿಕೆ ಹಾಕಿಸಿದ್ದಳು. ಇದರಿಂದ ನೊಂದು ಬೆಂದ ಶಿವಕುಮಾರ್ ದೇವರ ಜೀವನ ಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
Discussion about this post