ಕಳ್ಳರ ಕಣ್ಣು ಇದೀಗ ಈರುಳ್ಳಿ ಮೇಲೆ ಬಿದ್ದಿದೆ. ಏರುತ್ತಿರುವ ಈರುಳ್ಳಿ ದರದ ಲಾಭ ಪಡೆಯಲು ಹೊರಟಿರುವ ಕಳ್ಳರು ಹಲವು ಕಡೆ ಈರುಳ್ಳಿ ಕಳ್ಳತನ ಶುರುವಿಟ್ಟುಕೊಂಡಿದ್ದಾರೆ.
ಹಲವು ಕಡೆ ಗದ್ದೆಗಳಿಗೆ ನುಗ್ಗಿರುವ ಕಳ್ಳರು ಅಲ್ಲಿಂದಲೇ ಮೂಟೆಗಟ್ಟಲೆ ಈರುಳ್ಳಿಯನ್ನು ಕಳ್ಳತನ ಮಾಡಿದ್ದಾರೆ.
ಗಲ್ಲಾ ಪೆಟ್ಟಿಗೆ ತುಂಬಾ ಹಣವಿದ್ರೂ ಕದ್ದಿದ್ದು ಈರುಳ್ಳಿ ಮಾತ್ರ... 1
ಇನ್ನು ಹಲವು ಕಡೆ ಅಂಗಡಿಗಳಿಗೆ ನುಗ್ಗುವ ಕಳ್ಳರು ಅಲ್ಲೂ ಈರುಳ್ಳಿ ಮೇಲೆ ಕಣ್ಣು ನೆಟ್ಟಿದ್ದಾರೆ. ಗಲ್ಲಾ ಪೆಟ್ಟಿಗೆಯ ಕಾಸು ಕದಿಯುವುದಕ್ಕಿಂತ ಈರುಳ್ಳಿ ಕದಿಯೋದೇ ಬೆಟರ್ ಅನ್ನುವ ತೀರ್ಮಾನಕ್ಕೆ ಕಳ್ಳರು ಬಂದಿದ್ದಾರೆ.
ಕೋಲ್ಕತ್ತಾ ರಾಜ್ಯದ ಮಿಡ್ನಾಪುರ ಜಿಲ್ಲೆಯ ಸುತಹತದ ಪೂರ್ವ ಮಿಡ್ನಾಪುರದಲ್ಲಿದ್ದ ತರಕಾರಿ ವ್ಯಾಪಾರಿ ಅಕ್ಷಯ್ ದಾಸ್ ಅವರ ಮಳಿಗೆಗೆ ನುಗ್ಗಿದ ಕಳ್ಳರು ಗಲ್ಲಾ ಪೆಟ್ಟಿಯಲ್ಲಿನ ಒಂದು ರೂಪಾಯಿಯನ್ನೂ ಮುಟ್ಟಿಲ್ಲ. ಬದಲಾಗಿ ಮಳಿಗೆಯಲ್ಲಿದ್ದ ಈರುಳ್ಳಿಯನ್ನು ಹೊತ್ತೊಯ್ದಿದ್ದಾರೆ.
ಗಲ್ಲಾ ಪೆಟ್ಟಿಗೆ ತುಂಬಾ ಹಣವಿದ್ರೂ ಕದ್ದಿದ್ದು ಈರುಳ್ಳಿ ಮಾತ್ರ... 2
ಮಾರು 50 ಸಾವಿರ ರೂ. ಮೌಲ್ಯದ ಈರುಳ್ಳಿ ಜೊತೆಗೆ ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಆದರೆ ಒಂದು ನಯಾಪೈಸೆ ಹಣವನ್ನು ಕಂಡೊಯ್ದಿಲ್ಲ .
Discussion about this post