ಟೀಂ ಇಂಡಿಯಾದ ಹಿರಿಯ ಬೌಲರ್ ಹರ್ಭಜನ್ ಸಿಂಗ್ ಎರಡನೇ ಬಾರಿಗೆ ತಂದೆಯಾಗಿದ್ದಾರೆ. ಭಜ್ಜಿ ಪತ್ನಿ, ನಟಿ ಗೀತಾ ಬಾಸ್ರಾ ಅವರು ಶನಿವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
‘ನಮಗೆ ಹಿಡಿದಿಡಲು ಹೊಸ ಸಣ್ಣ ಕೈ,ಅವನ ಪ್ರೀತಿ ಭವ್ಯವಾಗಿದೆ,ಚಿನ್ನದಂತೆ ಅಮೂಲ್ಯವಾಗಿದೆ.ಇದೊಂದು ಅದ್ಭುತ ಉಡುಗೊರೆಯಾಗಿದೆ,ನಮ್ಮ ಹೃದಯ ಮತ್ತು ಜೀವನವನ್ನು ಪೂರ್ಣಗೊಳಿಸಿವೆ.ಆರೋಗ್ಯವಂತ ಗಂಡು ಮಗುವನ್ನು ಆಶೀರ್ವದಿಸಿದ್ದಕ್ಕಾಗಿ ಸರ್ವಶಕ್ತನಿಗೆ ಧನ್ಯವಾದಗಳು.ಗೀತಾ ಮತ್ತು ಬೇಬಿ ಇಬ್ಬರೂ ಆರೋಗ್ಯದಿಂದಿದ್ದಾರೆ ಎಂದು ಹರ್ಭಜನ್ ಸಿಂಗ್ (Harbhajan Singh) ಬರೆದುಕೊಂಡಿದ್ದಾರೆ.
2015 ರ ಅಕ್ಟೋಬರ್ 29 ರಂದು ಪಂಜಾಬ್ನ ಜಲಂಧರ್ದಲ್ಲಿ ವಿವಾಹವಾಗಿದ್ದ ಹರ್ಭಜನ್ ಸಿಂಗ್ – ಗೀತಾ ಬಸ್ರಾ ದಂಪತಿಗೆ ಮಗಳಿದ್ದಾಳೆ.
Discussion about this post