ಬೆಂಗಳೂರು : ಕೇರಳದ ಕ್ಯಾಲಿಕಟ್ ನಿಂದ ಬೆಂಗಳೂರಿಗೆ ಬಂದಿದ್ದ ಅಶ್ರಫ್ (33) ಚಿಕ್ಕ ಬಾಣಾವರದಲ್ಲಿ ಪುಟ ಟೀ ಅಂಗಡಿಯೊಂದನ್ನು ನಡೆಸುತ್ತಿದ್ದ.
24 ಗಂಟೆ ಕೂತು ಟೀ ಮಾರಿದರೂ ಲಕ್ಷ ಸಂಪಾದನೆ ಅನ್ನುವುದು ಕನಸಿನ ಮಾತು. ಆದರೆ ಹಗಲಿನಲ್ಲಿ ಟೀ ಮಾರುತ್ತಿದ್ದವನು, ರಾತ್ರಿ ಹೊತ್ತಲ್ಲಿ ಖತರ್ನಾಕ್ ಕೆಲಸವೊಂದನ್ನು ಮಾಡಿ ಲಕ್ಷ ಲಕ್ಷ ಸಂಪಾದಿಸಿದ್ದಾನೆ.
ಚಿಕ್ಕಬಾಣಾವರದ ಅಪಾರ್ಟ್ಮೆಂಟ್ ಒಂದರಲ್ಲಿದ್ದ ಈತ ಹಗಲು ಹೊತ್ತು ಟೀ ಮಾರಿಕೊಂಡಿದ್ರೆ, ರಾತ್ರಿಯಾದ್ರೆ ಅಕ್ರಮ telephone exchange ನಡೆಸುತ್ತಿದ್ದ.
ಅಂತರರಾಷ್ಟ್ರೀಯ ಕರೆಗಳನ್ನು ಲೋಕಲ್ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದ ಈತ ಈ ಮೂಲಕ ಸಿಕ್ಕಾಪಟ್ಟೆ ದುಡ್ಡು ಸಂಪಾದಿಸುತ್ತಿದ್ದ.
ಅಂತರರಾಷ್ಟ್ರೀಯ ಕರೆಗಳನ್ನು ಅಕ್ರಮವಾಗಿ Voice Over Internet Protocol (VOIP) ಮೂಲಕ ಲೋಕಲ್ ಕರೆಯನ್ನಾಗಿ ಪರಿವರ್ತಿಸುವ ಕಲೆ ರೂಢಿಸಿಕೊಂಡಿದ್ದ ಈತನ ಕೃತ್ಯದಿಂದ ಟೆಲಿಕಾಂ ಸಂಸ್ಥೆಗಳು ದೊಡ್ಡ ಮೊತ್ತದ ನಷ್ಟ ಅನುಭವಿಸುತ್ತಿತ್ತು.
ಈ ಬಗ್ಗೆ ಟೆಲಿಕಾಂ ಸಂಸ್ಥೆಯಿಂದ ದೂರು ಸ್ವೀಕರಿಸಿದ್ದ ಸಿಸಿಬಿ ಪೊಲೀಸರು ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ವೇಳೆ ಅಶ್ರಫ್ ಕೃತ್ಯ ಬಯಲಾಗಿದೆ.

ಇದೀಗ ಈತನ ಅಕ್ರಮ telephone exchange ಗೆ ದಾಳಿ ಮಾಡಿರುವ ಪೊಲೀಸರು ಅಶ್ರಫ್ ನನ್ನು ಬಂಧಿಸಿ ಕೃತ್ಯಕ್ಕೆ ಬಳಸಲಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅನೇಕ ಕಾಲ್ ಸೆಂಟರ್ ಗಳು ವಿದೇಶಿ ಕಂಪನಿಗಳಿಗೆ ಬೆಂಗಳೂರಿನಿಂದಲೇ ಕಾರ್ಯಾಚರಿಸುತ್ತಿದೆ. ಇವರ ಗ್ರಾಹಕರ ಬಹುತೇರ ಕರೆಗಳು ವಿದೇಶದಿಂದಲೇ ಬರುತ್ತಿತ್ತು. ಇಂತಹ ಕರೆಗಳಿಗೆ ಗ್ರಾಹಕರು ಅಥವಾ ಕೆಲವೊಮ್ಮೆ ಕಂಪನಿಯ ಕಾಸು ಕೊಡಬೇಕಾಗಿತ್ತು.
ಇಂತಹ ಕರೆಗಳನ್ನು ಅಶ್ರಫ್ telephone exchange ನಲ್ಲಿ ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದ ಕಾರಣ ಕಾಲ್ ಸೆಂಟರ್ ಗಳು ಲಾಭ ಮಾಡಿಕೊಳ್ಳುತ್ತಿತ್ತು.
ಒಂದು ಕರೆಗೆ 6 ರೂಪಾಯಿ ಜಾರ್ಜ್ ಮಾಡುತ್ತಿದ್ದ ಈತ ಕಳೆದ ಮೂರು ದಿನಗಳಲ್ಲಿ 560 ಕರೆಗಳನ್ನು ಪರಿವರ್ತಿಸಿದ್ದ. ಈ ಹಿಂದಿನ ಲೆಕ್ಕ ಇನ್ನೂ ಸಿಕ್ಕಿಲ್ಲ. ಕೇರಳ ಸೇರಿದಂತೆ ದೇಶದ ವಿವಿಧ ಭಾಗಗಳಿಂದ 100 ಹೆಚ್ಚು ಸಿಮ್ ಗಳನ್ನು ಆಶ್ರಫ್ ತಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ
Discussion about this post