Sunday, June 13, 2021
spot_img

ಅಪಘಾತದಲ್ಲಿ ಬದುಕಿ ಬಂದ ಗಂಡನನ್ನು ವಿಮೆ ಹಣಕ್ಕಾಗಿ ಕೊಲೆ ಮಾಡಿದ ಪತ್ನಿ

Must read

- Advertisement -
- Advertisement -

ತಮಿಳುನಾಡು :  ಗಂಡನ ವಿಮೆ ಹಣದ ಆಸೆಗೆ ಬಿದ್ದ ಪತ್ನಿಯೊಬ್ಬಳು ಗಂಡನನ್ನೇ ಮುಗಿಸಿದ ಘಟನೆ ಈರೋಡ್ ನ ತಡುಪತಿಯಲ್ಲಿ ನಡೆದಿದೆ.

ಈರೋಡ್ ನ ತಡುಪತಿಯ ರಂಗರಾಜು ವಿದ್ಯುತ್ ಮಗ್ಗದ ಘಟಕ ಹೊಂದಿದ್ದ. ಮಾರ್ಚ್ 15 ರಂದು ಅಪಘಾತಕ್ಕೆ ಸಿಲುಕಿದ್ದ ರಂಗರಾಜು ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲ ವಾರಗಳ ಆಸ್ಪತ್ರೆ ವಾಸದ ಬಳಿಕ ಕಳೆದ ಗುರುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.

ಈ ವೇಳೆ ಗಂಡನನ್ನು ಪತ್ನಿ ಜ್ಯೋತಿ ಮಣಿ ಹಾಗೂ ಸಂಬಂಧಿ ರಾಜ ಮನೆಗೆ ಕರೆದೊಯ್ಯುವ ಸಲುವಾಗಿ ವ್ಯಾನ್ ಹತ್ತಿಸಿದ್ದಾರೆ. ಆದರೆ ಮನೆಗೆ ತಲುಪಿಸಿಲ್ಲ.

ಆಸ್ಪತ್ರೆ ಬಿಟ್ಟವರೇ ಪೆರಮನಲ್ಲೂರು ತಲುಪುತ್ತಿದ್ದಂತೆ ವಾಹನ ನಿಲ್ಲಿಸಿ ಪೆಟ್ರೋಲ್ ಸುರಿದು ರಂಗರಾಜ್ ರನ್ನು ಜೀವಂತವಾಗಿ ಸುಟ್ಟಿದ್ದಾರೆ, ಬಳಿಕ ಶುಕ್ರವಾರ ರಾಜಾ ಸಾವಿನ ಕುರಿತಂತೆ ತಿರುಪುರ ಪೊಲೀಸರಿಗೆ ಮಾಹಿತಿ ನೀಡಿದ್ದ ಆರೋಪಿಗಳು ಅಪಘಾತದಲ್ಲಿ ಅವರು ತೀರಿಕೊಂಡರು ಅಂದಿದ್ದಾರೆ.

ಅದ್ಯಾಕೋ ಪೊಲೀಸರಿಗೆ ಈ ಸಾವಿನ ಬಗ್ಗೆ ಅನುಮಾನ ಬಂದಿದೆ. ಹೀಗಾಗಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ವಿಚಾರಣೆ ನಡೆಸಿದಾಗ ರಾಜಾ, ಪೆಟ್ರೋಲ್ ಬಂಕ್ ಒಂದರಲ್ಲಿ ಕ್ಯಾನ್ ನಲ್ಲಿ ಪೆಟ್ರೋಲ್ ತುಂಬಿಸಿಕೊಂಡಿರುವುದು ಗೊತ್ತಾಗಿದೆ.

ಹೀಗಾಗಿ ರಾಜಾನನ್ನು ಕರೆ ತಂದು ಪೊಲೀಸ್ ಭಾಷೆಯಲ್ಲಿ ಪೆರಮನಲ್ಲೂರು ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಜೊತೆಗೆ ಇದರಲ್ಲಿ ಜ್ಯೋತಿಯ ಪಾತ್ರ ಕೂಡಾ ಇದೆ ಎಂದು ಹೇಳಿದ್ದಾನೆ.

ಜ್ಯೋತಿಯನ್ನು ಕರೆದು ವಿಚಾರಣೆ ನಡೆಸಿದಾಗ, ಗಂಡ ರಂಗರಾಜು 1.5 ಕೋಟಿ ಸಾಲ ಮಾಡಿದ್ದ. ಹೀಗಾಗಿ ಹಣಕ್ಕಾಗಿ ನನ್ನ ಪೀಡಿಸುತ್ತಿದ್ದ. ಜೊತೆಗೆ ರಂಗರಾಜು 3.5 ಕೋಟಿಯ ವಿಮೆ ಮಾಡಿದ್ದ. ಹೀಗಾಗಿ ರಾಜಾ ಜೊತೆ ಸೇರಿ ಕೊಲೆ ಮಾಡಲು ನಿರ್ಧರಿಸಿದೆ. ಕೊಲೆ ಸಲುವಾಗಿ ರಾಜಾನಿಗೆ 50 ಸಾವಿರ ಹಣ ಕೊಟ್ಟಿದ್ದು, ಕೆಲಸ ಮುಗಿದ ಮೇಲೆ ಮತ್ತೆ 1 ಲಕ್ಷ ನೀಡೋದಾಗಿ ಹೇಳಿರುವುದಾಗಿ ಒಪ್ಪಿಕೊಂಡಿದ್ದಾಳೆ. ಅಂದ ಹಾಗೇ ಜ್ಯೋತಿ ಮಣಿಯ ವಯಸ್ಸು 62.

- Advertisement -
- Advertisement -spot_img
- Advertisement -spot_img

Latest article