ತಮಿಳುನಾಡು : ಹಣ್ಣಿನ ಜ್ಯೂಸ್ ಎಂದು ಭಾವಿಸಿ ಬಾಂದ್ರಿ ಕುಡಿದ 5 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ತಮಿಳುನಾಡಿನ ಅಣ್ಣಾನಗರ್ ನಲ್ಲಿ ನಡೆದಿದೆ. ಮೃತ ಬಾಲಕನನ್ನು ರಾಕೇಶ್ ಎಂದು ಗುರುತಿಸಲಾಗಿದೆ.
ರಾಕೇಶ್ ತಾತ ಚಿನ್ನಸ್ವಾಮಿ(62) ಗೆ ಕುಡಿತದ ಚಟವಿತ್ತು. ಹೀಗಾಗಿ ಬ್ರಾಂದಿ ಬಾಟಲಿಯನ್ನು ಮನೆಯಲ್ಲಿ ತಂದಿಟ್ಟುಕೊಂಡಿದ್ದ. ತಾತನ ಕೋಣೆಯಲ್ಲಿ ಬ್ರಾಂದಿ ಬಾಟಲಿ ನೋಡಿದ ಬಾಲಕ ಹಣ್ಣಿನ ಜ್ಯೂಸ್ ಎಂದು ಕುಡಿದಿದ್ದಾನೆ. ಇದಾದ ಬಳಿಕ ಬಾಲಕನ ಆರೋಗ್ಯದಲ್ಲಿ ಏರುಪೇರಾಗಿದೆ. ಮಗುವಿಗೆ ಏನಾಗುತ್ತಿದೆ ಅನ್ನುವುದು ಮನೆಯವರಿಗೂ ಅರ್ಥವಾಗಲಿಲ್ಲ. ಹೀಗಾಗಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಗ ಗೊತ್ತಾಗಿದ್ದು ಮಗು ಸಿಕ್ಕಾಪಟ್ಟೆ ಆಲ್ಕೋಹಾಲ್ ಕುಡಿದಿದೆ ಎಂದು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ತಾತ ಚಿನ್ನಸ್ವಾಮಿಯ ಚಟವೇ ಮೊಮ್ಮಗನ ಪ್ರಾಣಕ್ಕೆ ಕುತ್ತು ತಂದಿರುವುದು ಗೊತ್ತಾಗಿದೆ. ವಿಷಯ ತಿಳಿದ ಮೇಲೆ ತಾತ ಚಿನ್ನಸ್ವಾಮಿ ಆರೋಗ್ಯದಲ್ಲೂ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ವಿಪರೀತ ಪ್ರಮಾಣದಲ್ಲಿ ಮದ್ಯ ದೇಹ ಸೇರಿದ ಕಾರಣ ರಾಕೇಶ್ ನನ್ನು ಉಳಿಸಿಕೊಳ್ಳಲು ವೈದ್ಯರಿಗೆ ಸಾಧ್ಯವಾಗಿಲ್ಲ.
ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A five-year-old boy died after he allegedly drank alcohol mistaking it for juice at Kannikoil Street in Anna Nagar in the limits of Thiruvalam police station in Vellore district on Friday. His grandfather too died after seeing his condition.According to police, Rukesh’s grandfather Chinnasamy (62) was consuming brandy. However, some amount of the drink was still left in the bottle.
Discussion about this post