ಚೆನೈ : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಚಿತ್ರದ ನಾಯಕಿ ಓವಿಯಾ ಹೆಲನ್ ವಿರುದ್ಧ ತಮಿಳುನಾಡಿನ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿಗೆ ಭೇಟಿ ನೀಡಿದ್ದ ವೇಳೆ ಗೋ ಬ್ಯಾಕ್ ಮೋದಿ ಎಂದು ಓವಿಯಾ ಟ್ವೀಟ್ ಮಾಡಿದ್ದರು.
ಈ ಸಂಬಂಧ ತಮಿಳುನಾಡು ಬಿಜೆಪಿ ಸೈಬರ್ ಕ್ರೈಮ್ ದೂರು ಕೊಟ್ಟಿದ್ದು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಓವಿಯಾ ವಿವಾದಕ್ಕೆ ಗುರಿಯಾಗುತ್ತಿರೋದು ಇದು ಮೊದಲಲ್ಲ. ಈ ಹಿಂದೆಯೂ ಇವರು ಹಲವು ಕಾರಣಗಳಿಗಾಗಿ ಸುದ್ದಿಯಲ್ಲಿದ್ದವರೇ.
ಹಾಗಾದ್ರೆ ಈ ರೀತಿ ಟ್ವೀಟ್ ಮಾಡುವುದು ಅಪರಾಧವೇ ಖಂಡಿತಾ ಅಲ್ಲ. ಈ ಹಿಂದೆ ಮೋದಿಯನ್ನು ಉದ್ದೇಶಿಸಿ ಮಾಡಿದ್ದ ಪೋ ಮೋನೆ ದಿನೇಶ ಅನ್ನುವ ಟ್ವೀಟ್ ವೈರಲ್ ಆಗಿತ್ತು. ಆಗ ಯಾವುದೇ ಕಾನೂನು ಕ್ರಮಗಳನ್ನು ಕೈಗೊಂಡಿರಲಿಲ್ಲ.
ಒವಿಯಾ ಮಾಡಿರುವ ಟ್ವೀಟ್ ನಲ್ಲಿ ಯಾವುದೇ ದ್ವೇಷಗಳಿಲ್ಲ. ಬದಲಾಗಿ ತಮ್ಮ ಆಕ್ರೋಶವನ್ನು ಅವರು ಹೊರ ಹಾಕಿದ್ದಾರೆ. ಅದಕ್ಕೆಲ್ಲಾ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ರೆ, ಅರ್ಥವೇನಿದೆ.
ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಸಾಕಷ್ಟು ಕೆಲಸಗಳಿದೆ.
Discussion about this post