ಅಪಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರಕ ಅಟ್ಟಹಾಸ ಮಿತಿ ಮೀರಿದೆ. ಅಮೆರಿಕಾ ಸೇನೆ ಅಪಘಾನಿಸ್ತಾನದಿಂದ ಜಾಗ ಖಾಲಿ ಮಾಡುತ್ತಿದ್ದಂತೆ ರಾಕ್ಷಸ ಸ್ವರೂಪಿಗಳಾಗಿರುವ ತಾಲಿಬಾನಿಗಳು ಒಂದೊಂದೇ ಪ್ರದೇಶಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ.
ಥಾಲಾ ಸಾಹಿಬ್ ಗುರು ದ್ವಾರಕ್ಕೆ ನುಗ್ಗಿರುವ ಉಗ್ರರು, ಪವಿತ್ರ ನಿಶಾನ್ ಸಾಹಿಬ್ ಸಿಖ್ ಧಾರ್ಮಿಕ ಧ್ವಜವನ್ನು ಕಿತ್ತು ಹಾಕಿದ್ದಾರೆ. ಇದೇ ಸ್ಥಳಕ್ಕೆ ಶ್ರೀ ಗುರು ನಾನಕ್ ದೇವ್ ಭೇಟಿ ನೀಡಿದ್ದರು ಅನ್ನುವ ಪ್ರತೀತಿ ಇದೆ.
ಇದನ್ನೂ ಓದಿ : Delta plus ವೈರಸ್ ಸೋಂಕಿತ ನಾಪತ್ತೆ : ಮೊಬೈಲ್ ಆಫ್ – ಅಡ್ರೆಸ್ ರಾಂಗ್
ಈ ನಡುವೆ ಬುರ್ಖಾ ಧರಿಸದೇ ಓಡಾಡುತ್ತಿದ್ದರು ಅನ್ನುವ ಕಾರಣಕ್ಕೆ 21 ವರ್ಷದ ಮಹಿಳೆಯನ್ನು ಕಾಲಿಬಾನ್ ಉಗ್ರರು ಗುಂಡಿಟ್ಟು ಸಾಯಿಸಿದ್ದಾರೆ. ಕಾರಿನಲ್ಲಿ ಮಹಿಳೆ ಹೋಗುತ್ತಿದ್ದ ಸಂದರ್ಭದಲ್ಲಿ ಆಖೆಯನ್ನು ಅಡ್ಡಗಟ್ಟಿದ ಉಗ್ರಗಾಮಿಗಳು ಕಾರಿನಿಂದ ಳೆದು ಹಾಕಿ ಗುಂಡಿಟ್ಟು ಸಾಯಿಸಿದ್ದಾರೆ ಎಂದು ಅಫ್ಘಾನಿಸ್ತಾನ್ ಟೈಮ್ಸ್ ವರದಿ ಮಾಡಿದೆ. ಅಪಘಾನಿಸ್ತಾನದಲ್ಲಿ ಈಗಾಗಲೇ ಪ್ರಾಬಲ್ಯ ಸ್ಥಾಪಿಸುತ್ತಿರುವ ತಾಲಿಬಾನ್ ಉಗ್ರರು ಮಹಿಳೆಯರ ಪಾಲಿಗೆ ಯಮಕಿಂಕರರಾಗಿದ್ದಾರೆ.
Discussion about this post