Advertisements

Tag: ವಾಜಪೇಯಿ

ಕರ್ನಾಟಕ ಏಳು ನದಿಗಳಲ್ಲಿ ಅಟಲ್ ಅಸ್ತಿ ವಿಸರ್ಜನೆ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ತಿಗಳನ್ನು ದೇಶದ ಪ್ರಮುಖ 100 ನದಿಗಳಲ್ಲಿ ವಿಸರ್ಜನೆ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧ ಚಿತಾಭಸ್ಮವನ್ನು ಇಂದು ಕುಟುಂಬಸ್ಥರು ಸಂಗ್ರಹಿಸಿದ್ದಾರೆ. ದೆಹಲಿಯ ಸ್ಮೃತಿ ಶಾಲಾಗೆ ಭೇಟಿ ನೀಡಿದ್ದ ವಾಜಪೇಯಿ ಪುತ್ರಿ ನಮಿತಾ ಹಾಗೂ ಮೊಮ್ಮಗಳು ನಿಹಾರಿಕಾ ಧಾರ್ಮಿಕ ವಿಧಿ ವಿಧಾನಗಳ ನಂತರ ಹರಿದ್ವಾರದಲ್ಲಿರುವ ಗಂಗಾ ನದಿಗೆ ಅಸ್ತಿ ವಿಸರ್ಜನೆಗೆ ತೆಗೆದುಕೊಂಡು ಹೋಗಿದ್ದಾರೆ. ಮುಂದಿನ ದಿನಗಳಲ್ಲಿ…

Advertisements

ಗುರು ಶಿಷ್ಯರ ಸಂಬಂಧವನ್ನು ಜಗತ್ತಿಗೆ ಸಾರಿ ಹೇಳಿದ ಪ್ರಧಾನಿ ನರೇಂದ್ರ ಮೋದಿ

ರಾಷ್ಟ್ರೀಯ ಸ್ಮೃತಿ ಸ್ಥಳದತ್ತ ಮಾಜಿ ಪ್ರಧಾನಿ ವಾಜಪೇಯಿ ಪಾರ್ಥಿವ ಶರೀರದ ಮೆರವಣಿಗೆ ನಡೆಯುತ್ತಿದ್ದರೆ, ವಾಹನ ಹಿಂದೆ ಪ್ರಧಾನಿ ನರೇಂದ್ರಮೋದಿ   ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಡೆದು ಕೊಂಡು ಸಾಗಿದರು. ಏನಿಲ್ಲ ಅಂದರೂ ಬಿಜೆಪಿ ಕಚೇರಿಯಿಂದ ಅಲ್ಲಿಗೆ 9 ಕಿಲೋ ಮೀಟರ್ ದೂರವಿದೆ. ಅಂತಿಮ ಯಾತ್ರೆಯಲ್ಲಿ ಕಾಲ್ನಡಿಗೆಯಲ್ಲೇ  ಲಕ್ಷಾಂತರ ಜನರ ಮಧ್ಯೆ ಪ್ರಧಾನಿ ಎಂಬ ಹುದ್ದೆಯನ್ನು ಪಕ್ಕಕ್ಕಿಟ್ಟು ನೆಚ್ಚಿನ ಗುರುವಿನ…

ವಾಜಪೇಯಿಯನ್ನು ದೇಶ ದ್ರೋಹಿ ಅಂದಿದ್ದರು ಸೋನಿಯಾ….!

ಅಟಲ್ ಬಿಹಾರಿ ವಾಜಪೇಯಿ ಅಜಾತ ಶತ್ರು, ಯಾವ ರಾಜಕಾರಣಿಯೂ ವಾಜಪೇಯಿ ಅವರನ್ನು ಕಠಿಣ ಶಬ್ಧಗಳಲ್ಲಿ ಟೀಕಿಸಿದ ಉದಾಹರಣೆ ಇಲ್ಲ. ವಾಜಪೇಯಿ ಅವರನ್ನು ಟೀಕಿಸಲೇ ಬೇಕು ಅನ್ನುವ ಪರಿಸ್ಥಿತಿ ಬಂದಾಗ Right Man in Wrong Party ಅನ್ನುತ್ತಿದ್ದರು. ಮಾಜಿ ಪ್ರಧಾನಿ ವಾಜಪೇಯಿ ಅವರನ್ನು ಪಕ್ಷಾತೀತವಾಗಿ ಎಲ್ಲರೂ ಗೌರವಿಸುತ್ತಿದ್ದರು. ಆದರೆ ಕಾಂಗ್ರೆಸ್ ನ ನಿಕಟಪೂರ್ವ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಮಾತ್ರ ಅಟಲ್ ಬಿಹಾರಿ…

ಅವತ್ತು ಮನಮೋಹನ್ ಸಿಂಗ್ ರಾಜೀನಾಮೆ ತಡೆದವರೇ ವಾಜಪೇಯಿ

ಅದು 90 ರ ದಶಕ. ನರಸಿಂಹ ರಾವ್ ಕೇಂದ್ರದಲ್ಲಿ ಪ್ರಧಾನಿ ಹುದ್ದೆಯಲ್ಲಿದ್ದರು. ರಾವ್ ಸಂಪುಟದಲ್ಲಿ ಮನಮೋಹನ್ ಸಿಂಗ್ ಹಣಕಾಸು ಸಚಿವರು. ಮನಮೋಹನ್ ಅದ್ಭುತ ಆರ್ಥಿಕ ತಜ್ಞರಾಗಿದ್ದರು. ಆದ್ರೆ ಬೆಸ್ಟ್ ಹಣಕಾಸು ಸಚಿವರಾಗಿರಲಿಲ್ಲ ಅನ್ನುವ ಟೀಕೆ ಕೇಳಿ ಬಂದಿತ್ತು. ಈ ವೇಳೆ ಲೋಕಸಭೆಯಲ್ಲಿ ಮನಮೋಹನ್ ಸಿಂಗ್ ಆರ್ಥಿಕ ನೀತಿಗಳನ್ನು ತೀವ್ರವಾಗಿ ಖಂಡಿಸಿದ್ದ ವಾಜಪೇಯಿಯವರು, ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ತೀವ್ರವಾಗಿ ಮನನೊಂದುಕೊಂಡ ಮನಮೋಹನ್…

ಅಚಲ ಮನಸ್ಸಿನ ಗುರಿಕಾರ – ಪೋಖ್ರಾನ್ ನಲ್ಲಿ ಅಣು ಪರೀಕ್ಷೆ ನಡೆಸಿದ ವೀರ

ಮೊದಲ ಅವಧಿಯಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಕವಿ ಹೃದಯದ ವಾಜಪೇಯಿ ಅವರಲ್ಲಿ ಕನಸುಗಳು ಸಾಕಷ್ಟಿತ್ತು. ವಿಶ್ವದ ಮುಂದೆ ಭಾರತ ತಲೆ ಎತ್ತಿ ನಡೆಯುವಂತೆ ಮಾಡಬೇಕು ಅನ್ನುವ ಹುಮ್ಮಸ್ಸಿತ್ತು. ಹೀಗಾಗಿಯೇ  ವಿಜ್ಞಾನಿಗಳನ್ನು ಕರೆದ ವಾಜಪೇಯಿ ಕೇಳಿದ್ದು ಒಂದೇ ಮಾತು,”ಭಾರತವನ್ನು ಗಂಡು ರಾಷ್ಟ್ರವಾಗಿಸುತ್ತೀರಾ” ಎಂದು. ಮುಂದೆ ಕೂತಿದ್ದ ವಿಜ್ಞಾನಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ತಮ್ಮ ಸಾಹಸಕ್ಕೆ ಬೆನ್ನೆಲುಬಿನಂತೆ ನಿಲ್ಲಬಲ್ಲ ವ್ಯಕ್ತಿಯೊಬ್ಬನಿದ್ದಾನೆ ಎಂದು ಅವರು…