Advertisements

Tag: ಮೋದಿ

ಕೇರಳಕ್ಕೆ 500 ಕೋಟಿ ಮಧ್ಯಂತರ ಪರಿಹಾರ ಘೋಷಿಸಿದ ಮೋದಿ

ದೇವರನಾಡಿನಲ್ಲಿ ದೇವರು ಮುನಿದಿದ್ದಾನೆ. ಅಬ್ಬರಿಸುತ್ತಿರುವ ಮಳೆಗೆ ನೂರಾರು ಮಂದಿ ಬಲಿಯಾಗಿದ್ದಾರೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಈ ನಡುವೆ ನಿನ್ನೆ ರಾತ್ರಿ ಕೇರಳ ತಲುಪಿರುವ ಪ್ರಧಾನಿ ನರೇಂದ್ರ ಮೋದಿ ಮುಂಗಾರು ಮಳೆಯಿಂದ ಹಾನಿಯಾಗಿರುವ ಪ್ರದೇಶವನ್ನು ವೈಮಾನಿಕ ಸಮೀಕ್ಷೆ ಮೂಲಕ ಪರಿಶೀಲನೆ ನಡೆಸಿದ್ದಾರೆ. ಈ ನಡುವೆ ಕೇರಳ ಸರ್ಕಾರ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಕೇರಳ ರಾಜ್ಯಕ್ಕೆ ರೂ.500…

Advertisements

ಗುರು ಶಿಷ್ಯರ ಸಂಬಂಧವನ್ನು ಜಗತ್ತಿಗೆ ಸಾರಿ ಹೇಳಿದ ಪ್ರಧಾನಿ ನರೇಂದ್ರ ಮೋದಿ

ರಾಷ್ಟ್ರೀಯ ಸ್ಮೃತಿ ಸ್ಥಳದತ್ತ ಮಾಜಿ ಪ್ರಧಾನಿ ವಾಜಪೇಯಿ ಪಾರ್ಥಿವ ಶರೀರದ ಮೆರವಣಿಗೆ ನಡೆಯುತ್ತಿದ್ದರೆ, ವಾಹನ ಹಿಂದೆ ಪ್ರಧಾನಿ ನರೇಂದ್ರಮೋದಿ   ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಡೆದು ಕೊಂಡು ಸಾಗಿದರು. ಏನಿಲ್ಲ ಅಂದರೂ ಬಿಜೆಪಿ ಕಚೇರಿಯಿಂದ ಅಲ್ಲಿಗೆ 9 ಕಿಲೋ ಮೀಟರ್ ದೂರವಿದೆ. ಅಂತಿಮ ಯಾತ್ರೆಯಲ್ಲಿ ಕಾಲ್ನಡಿಗೆಯಲ್ಲೇ  ಲಕ್ಷಾಂತರ ಜನರ ಮಧ್ಯೆ ಪ್ರಧಾನಿ ಎಂಬ ಹುದ್ದೆಯನ್ನು ಪಕ್ಕಕ್ಕಿಟ್ಟು ನೆಚ್ಚಿನ ಗುರುವಿನ…

ರಾಜ್ಯಸಭೆಯ ಕಡತದಿಂದ ಪ್ರಧಾನಿ ಮಾತುಗಳು ಡಿಲೀಟ್ – ಅದು ಅಪರೂಪದ ಪ್ರಕರಣ

ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಪ್ರಧಾನಿ ಆಡಿದ ಮಾತುಗಳನ್ನು ಕಡತದಿಂದ ತೆಗೆದು ಹಾಕುವ ಪ್ರಕರಣ ಅಪರೂಪದಲ್ಲಿ ಅಪರೂಪ. ಯಾಕೆಂದರೆ ಪ್ರಧಾನಿಯಾಗಿರುವವರು ಅಷ್ಟೇ ಸೂಕ್ಷ್ಮವಾಗಿ ಮತ್ತು ಸದನ ಹಾಗೂ ಸದನ ಸದಸ್ಯರ ಗೌರವಕ್ಕೆ ಚ್ಯುತಿ ಬಾರದಂತೆ ಮಾತನಾಡುತ್ತಾರೆ. ಆದರೆ ನಿನ್ನೆ ರಾಜ್ಯಸಭೆ ಉಪ ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ ಕೆ ಹರಿಪ್ರಸಾದ್ ಅವರು ಎನ್ ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ಅವರ…

ಬೆಳಗಾವಿ ರೈತನಿಗೆ ಅಚ್ಚರಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿ

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡು ಗ್ರಾಮದ 25 ವರ್ಷದ ರೈತ ರಾಹುಲ್ ಬೆಕನಾಲಕರ್ ಹಸು ಗೌರಿ ಹೆರಿಗೆ ವೇಳೆ ಗೌರಿ ಮತ್ತು ಅದರ ಕರು ಸಾವನ್ನಪ್ಪಿತ್ತು.ಹೆರಿಗೆ ವೇಳೆ ಗ್ರಾಮದಲ್ಲಿ ವೈದ್ಯಕೀಯ ಸಹಾಯ ದೊರೆಯುತ್ತಿದ್ದರೆ ಹಸು ಮತ್ತು ಕರು ಬದುಕುತ್ತಿತ್ತು. ಆದರೆ ತಮ್ಮ ಗ್ರಾಮ ಅಥವಾ ಸುತ್ತಮುತ್ತಲ ಗ್ರಾಮದಲ್ಲಿ ಪಶುವೈದ್ಯ ಚಿಕಿತ್ಸಾ ಘಟಕವಿಲ್ಲದ ಕಾರಣ ಕುಟುಂಬದ ಆದಾಯ ಮೂಲವೊಂದನ್ನು ಕಳೆದುಕೊಳ್ಳಬೇಕಾಯ್ತು. ಹೀಗಾಗಿ ನೋವಿನಿಂದಲೇ…