Advertisements

Tag: ಮಳೆ

ಕೇರಳದ ನಿರಾಶ್ರಿತರ ಕೇಂದ್ರದಲ್ಲಿ ಡ್ಯಾನ್ಸ್ ಸದ್ದು – ನೋವು ಮರೆಯಲು ಇನ್ನೇನಿದೆ ಅಲ್ಲಿ

ಕೇರಳದಲ್ಲಿ ಮಳೆಯ ಅಬ್ಬರ ನಿಧಾನವಾಗಿ ಕಡಿಮೆಯಾಗುತ್ತಿದೆ. ಬಾನಂಗಳದಲ್ಲಿ ಸೂರ್ಯನ ಕಿರಣಗಳು ಕಾಣಿಸಿಕೊಳ್ಳುವ ಲಕ್ಷಣ ತೋರುತ್ತಿದೆ.ಆದರೆ ಪ್ರವಾಹದಲ್ಲಿ ಕೊಚ್ಚಿ ಹೋದವರ ಬದುಕಿನಲ್ಲಿ ಭರವಸೆಯ ಕಿರಣಗಳು ಮೂಡುವುದು ಯಾವಾಗ. ನಿರಾಶ್ರಿತರ ಕೇಂದ್ರದಲ್ಲಿ ಕೂತವರ ಮನಸ್ಸಿನಲ್ಲಿ ಅವರ ಮನೆಯ ಚಿತ್ರ ಓಡುತ್ತಿದೆ. ಮುಂದೇನು..ಬದುಕು ಕಟ್ಟುವುದು ಹೇಗೆ ಅನ್ನುವ ಚಿಂತೆ ಕಾಡುತ್ತಿದೆ.ಈ ನಡುವೆ ತಮ್ಮ ನೋವು ಮರೆಯುವ ಪ್ರಯತ್ನ ಕೂಡಾ ನಿರಾಶ್ರಿತರ ಕೇಂದ್ರದಲ್ಲಿ ಸಾಗಿದೆ. ನೋವಿನ ನಡುವೆ…

Advertisements

ಮಳೆ ನಿಲ್ಲಿಸಲು ಯಾಗದ ಮೊರೆ – ಮತ್ತೆ ಅನುರಣಿಸಿದ 70 ವರ್ಷದ ಹಿಂದೆ ಬಳಸಿದ ವೇದ – ಮಂತ್ರ

ಮಳೆಗಾಗಿ ಹೋಮ ಯಾಗ ನಡೆಸಿದ ಸುದ್ದಿಗಳನ್ನು ನಾವು ಓದಿದ್ದೇವೆ. ಆದರೆ ಇದೀಗ ಮಳೆ ನಿಲ್ಲಿಸಲು ಯಾಗ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಅತಿವೃಷ್ಟಿ, ಜಲಪ್ರಳಯ, ಭೂ ಕುಸಿತ ಸೇರಿದಂತೆ ಅನೇಕ ಜಲಗಂಡಾಂತರ ನಿವಾರಣೆಗಾಗಿ ಸುಳ್ಯದ ಚೆನ್ನಕೇಶವ ದೇವಾಲಯದಲ್ಲಿ ವರುಣ ಮಹಾಯಾಗ ನಡೆಯಿತು. ಮಳೆಗಾಗಿ ಪರ್ಜನ್ಯ ಯಾಗ ನಡೆಸಿ ಫಲ ಕಂಡಿರುವ ಸುಳ್ಯ ಕೇಶವ ಕೃಪಾ ವೇದ ಶಾಲೆಯ ಬ್ರಹ್ಮಶ್ರೀ ಪುರೋಹಿತ ನಾಗರಾಜ್ ಭಟ್…

ಮಳೆ ಸೃಷ್ಟಿಸಿದ ನೆರೆಯಲ್ಲಿ ಕೊಚ್ಚಿ ಹೋದ ಮದುವೆ ಕನಸು…

ಕೊಡಗಿನಲ್ಲಿ ಅಬ್ಬರಿಸಿದ ಮಳೆ ಮಾಡಿದ ಹಾನಿಗೆ ಲೆಕ್ಕವಿಲ್ಲ. ತೋಟ, ಸೂರು ಎಲ್ಲವನ್ನೂ ನೆರೆ ನುಂಗಿ ಹಾಕಿದೆ. ಬಡವ ಶ್ರೀಮಂತ, ಜಾತಿ ಧರ್ಮ ಅನ್ನುವ ಬೇಧ ತೋರದ ನೆರೆ ಎಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ. ಕೊಡಗು ಮತ್ತೆ ಸಹಜ ಸ್ಥಿತಿಗೆ ಬರಲು ಎಷ್ಟು ವರ್ಷಗಳು ಬೇಕೋ ಗೊತ್ತಿಲ್ಲ.ಆದರೆ ಇದೀಗ ಸುರಿದಿರುವ ಮಳೆ, ಮದುವೆ ಕನಸನ್ನು ನುಚ್ಚು ನೂರು ಮಾಡಿದೆ. ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮದ…

ಕೊಡಗಿನಲ್ಲಿ ಮಳೆಯಬ್ಬರ – ಮಗನ ಕಣ್ಣೇದುರೇ ಕೊಚ್ಚಿ ಹೋದ ತಾಯಿ

ಕಳೆದ ಹಲವು ದಿನಗಳಿಂದ ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದ ಆಗಿರುವ ಹಾನಿಯನ್ನು ಊಹಿಸಲು ಸಾಧ್ಯವಾಗುತ್ತಿಲ್ಲ. ಮಾಹಿತಿಯ ಪ್ರಕಾರ 8 ಮಂದಿ ಸಾವನ್ನಪ್ಪಿದ್ದಾರೆ. ನಾಪತ್ತೆಯಾದವರ ಸಂಖ್ಯೆ ಇನ್ನೂ ಲೆಕ್ಕಕ್ಕೇ ಸಿಕ್ಕಿಲ್ಲ. ಈ ನಡುವೆ ಮಗನ ಕಣ್ಣ ಮುಂದೆಯೇ ತಾಯಿಯೊಬ್ಬಳು ಪ್ರವಾಹದಲ್ಲಿ ಕೊಚ್ಚಿ ಹೋದ ಘಟನೆಯೊಂದು ಬೆಳಕಿಗೆ ಬಂದಿದೆ. ಹೆಬ್ಬಟ್ಟಗೇರಿಯಲ್ಲಿ ಮಿಟ್ಟು ಗಣಪತಿ ತನ್ನ ತಾಯಿ , ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಮನೆಯಲ್ಲಿ ಉಳಿದುಕೊಂಡಿದ್ದರು….

ಕೊಡಗಿನವರು ಮನುಷ್ಯರಲ್ವ ಮೋದಿಯವರೇ…?

ಕರ್ನಾಟಕವನ್ನು ಮೋದಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಅನ್ನುವ ಆರೋಪ ಇಂದು ನಿನ್ನೆಯದಲ್ಲ. ಹಲವಾರು ಬಾರಿ ಇಂತಹ ಆರೋಪಗಳು ಕೇಳಿ ಬಂದಿದೆ. ಇದೀಗ ಕೊಡಗು ಜನರ ಆಕ್ರೋಶ ಮೋದಿಯತ್ತ ತಿರುಗಿದೆ. ಕೇರಳ ಹೋಗಿ ಬಂದ ಮೋದಿ 500 ಕೋಟಿ ಮಧ್ಯಂತರ ಘೋಷಣೆ ಮಾಡಿ ಬಂದಿದ್ದಾರೆ. ಆದರೆ ಕರ್ನಾಟಕ ಕಡದ ಮೋದಿ ನೋಡಿಯೇ ಇಲ್ಲ. ನಾವೇನೂ ಮನುಷ್ಯರಲ್ವ, ಕರ್ನಾಟಕ ಭಾರತದಲ್ಲಿ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ….

ದೇವರು ಮುನಿದ ನಾಡು – ನಾಯಿ ರಕ್ಷಿಸಲು ಹೋಗಿ ಒಂದೇ ಕುಟುಂಬದ 9 ಸಾವು

ಕೇರಳದಲ್ಲಿ ಮರಣ ಮಳೆ ಅಬ್ಬರಿಸುತ್ತಿದೆ. ಈ ನಡುವೆ ಪ್ರಕೃತಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಮಾಡುತ್ತಿದೆ. ಆದರೆ ಅಪಾಯವನ್ನು ಲೆಕ್ಕಿಸದ ರಕ್ಷಣಾ ಪಡೆಗಳು ಜನರತ್ತ ಧಾವಿಸುತ್ತಿದೆ. ಈ ನಡುವೆ ಪ್ರವಾಹಕ್ಕೆ ಸಿಲುಕಿದ್ದ ಸಾಕು ನಾಯಿಗಳನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ 9 ಮಂದಿ ಮೃತಪಟ್ಟಿರುವ ದಾರುಣ ಘಟನೆ ರಾಜ್ಯದ ಮಲಪ್ಪುರಂನ ಪೆರಿಗಂವು ಎಂಬಲ್ಲಿ ನಡೆದಿದೆ. ಮನೆ ಮಾಲೀಕ ಶುಭ ಸಮಾರಂಭಕ್ಕೆ ಎಂದು ಹೊರಗಡೆ…

ಆಹಾರ ಧಾನ್ಯ- ಬಟ್ಟೆಯನ್ನು ಕೊಡಗಿಗೆ ಕಳುಹಿಸಬೇಡಿ – ಔಷಧಿ, ನಗದು ಈಗಿನ ಆದ್ಯತೆ

ವರುಣದೇವನ ಆಕ್ರೋಶ ತುತ್ತಾಗಿರುವ ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ಆಹಾರ ಧಾನ್ಯಗಳನ್ನು ಕಳಿಸಬೇಡಿ, ಬಟ್ಟೆ ಬರೆಗಳನ್ನು ಕೂಡಾ ಕಳುಹಿಸಬೇಡಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು ಅದರ ಬದಲಾಗಿ ಔಷಧಿ, ನಗದು ರೂಪದಲ್ಲಿ ಸಹಾಯ ಮಾಡುವಂತೆ ಕರೆ ಕೊಟ್ಟಿದ್ದಾರೆ. ಆಹಾರ ಮತ್ತು ಇನ್ನಿತರ ವ್ಯವಸ್ಥೆಗಳನ್ನು ಸರ್ಕಾರದ ಸಹಾಯದೊಂದಿಗೆ ಜಿಲ್ಲಾಡಳಿತ ಮಾಡುತ್ತಿದೆ. ಬಟ್ಟೆ ಬರೆಗಳು ಮತ್ತು ಆಹಾರ…