Tag: ಮದುವೆ

ಇನ್ಮುಂದೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲೂ ಮದುವೆಯಾಗಬಹುದು…!

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆಗೆ 13 ಸಾವಿರ ಕೋಟಿ ವೆಚ್ಚದ ಯೋಜನೆ ಸಿದ್ಧವಾಗಿದ್ದು, ಇದರ ಭಾಗವಾಗಿ ಸಂಗೀತ ಕಾರ್ಯಕ್ರಮ, ಮದುವೆ, ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸುವ ಸ್ಥಳವನ್ನೂ ಕೂಡಾ ನಿರ್ಮಿಸಲಾಗುತ್ತಿದೆ. ವಿಮಾನ ನಿಲ್ದಾಣದ ಆವರಣದಲ್ಲಿಯೇ ಸುಮಾರು 6.3 ಎಕರೆ ಪ್ರದೇಶದಲ್ಲಿ ಸುಮಾರು 9 ಸಾವಿರ ಜನರು ಸೇರಬಹುದಾದ ಹಾಲ್ ನಿರ್ಮಾಣವಾಗಲಿದೆ. ವಿಮಾನ ನಿಲ್ದಾಣದ ವಿಸ್ತರಣೆಯಲ್ಲಿ ಹೊಸ ಟರ್ಮಿನಲ್, ರಸ್ತೆ… Continue Reading “ಇನ್ಮುಂದೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲೂ ಮದುವೆಯಾಗಬಹುದು…!”

ಒಳ್ಳೆ ಹುಡುಗನಿಗೆ ಶೀಘ್ರದಲ್ಲೇ ಕಂಕಣ ಭಾಗ್ಯ : ಒಳ್ಳೆ ಹುಡುಗನ ಒಳ್ಳೆ ಹುಡುಗಿ ಯಾರು…?

ಬೆಂಗಳೂರು ಸಹವಾಸ ಸಾಕು ಎಂದು, ಕೈಯಲ್ಲಿರುವ ಕಮಿಟ್ಮೆಂಟ್ ಗಳನ್ನು ಮುಗಿಸಿ ಊರಿಗೆ ಹೋಗಲು ತಯಾರಿ ನಡೆಸುತ್ತಿರುವ ಪ್ರಥಮ್ ಬದುಕಿಗೆ ಹೆಣ್ಣೊಬ್ಬಳ ಪ್ರವೇಶ ಖಚಿತವಾಗಿದೆ. ತಂದೆ ಮತ್ತು ತಾಯಿಯವರ ಒತ್ತಡ ತಾಳಲಾರದ ಪ್ರಥಮ್ ಕೊನೆಗೂ ವಿವಾಹಕ್ಕೆ ಸಿದ್ಧವಾಗುತ್ತಿದ್ದಾರೆ. ಮಾತುಕತೆ ಹಂತದಲ್ಲಿ ಎಲ್ಲವೂ ಇದ್ದು, ಈ ವರ್ಷ ಮತ್ತೊಂದು ಸ್ಟಾರ್ ಮದುವೆ ಕರ್ನಾಟಕ ಸಾಕ್ಷಿಯಾಗಲಿದೆ.

ಮಳೆ ಸೃಷ್ಟಿಸಿದ ನೆರೆಯಲ್ಲಿ ಕೊಚ್ಚಿ ಹೋದ ಮದುವೆ ಕನಸು…

ಕೊಡಗಿನಲ್ಲಿ ಅಬ್ಬರಿಸಿದ ಮಳೆ ಮಾಡಿದ ಹಾನಿಗೆ ಲೆಕ್ಕವಿಲ್ಲ. ತೋಟ, ಸೂರು ಎಲ್ಲವನ್ನೂ ನೆರೆ ನುಂಗಿ ಹಾಕಿದೆ. ಬಡವ ಶ್ರೀಮಂತ, ಜಾತಿ ಧರ್ಮ ಅನ್ನುವ ಬೇಧ ತೋರದ ನೆರೆ ಎಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ. ಕೊಡಗು ಮತ್ತೆ ಸಹಜ ಸ್ಥಿತಿಗೆ ಬರಲು ಎಷ್ಟು ವರ್ಷಗಳು ಬೇಕೋ ಗೊತ್ತಿಲ್ಲ.ಆದರೆ ಇದೀಗ ಸುರಿದಿರುವ ಮಳೆ, ಮದುವೆ ಕನಸನ್ನು ನುಚ್ಚು ನೂರು ಮಾಡಿದೆ. ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮದ… Continue Reading “ಮಳೆ ಸೃಷ್ಟಿಸಿದ ನೆರೆಯಲ್ಲಿ ಕೊಚ್ಚಿ ಹೋದ ಮದುವೆ ಕನಸು…”

ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ಗಿಫ್ಟ್ ಹೆಸರಲ್ಲಿ ಮಹಿಳೆಯರಿಗೆ ದೋಖಾ..

ಮ್ಯಾಟ್ರಿಮೋನಿಯಲ್ ಸೈಟ್ ಗಳಲ್ಲಿ ಮಹಿಳೆಯರಿಗೆ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಮೋಸ ಹೋಗುತ್ತಿರುವವರು ವಿದ್ಯಾವಂತ ಮಹಿಳೆಯರೇ ಅನ್ನುವುದು ಆತಂಕದ ಸಂಗತಿ. ಹೀಗೆ ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ಮಹಿಳೆಯೊಬ್ಬರನ್ನು ಪರಿಚಯಿಸಿಕೊಂಡ ವಂಚಕರು 4 ಲಕ್ಷ ರೂಪಾಯಿ ಮೋಸ ಮಾಡಿದ್ದಾರೆ. HSR lay out ನ 35 ವರ್ಷದ ಮಹಿಳೆಯೊಬ್ಬರು ನಿಗದಿತ ಶುಲ್ಕ ಪಾವತಿಸಿ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಗೆ ತಮ್ಮ ಸ್ವಯಂ… Continue Reading “ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ಗಿಫ್ಟ್ ಹೆಸರಲ್ಲಿ ಮಹಿಳೆಯರಿಗೆ ದೋಖಾ..”

ಪ್ರಥಮ ರಾತ್ರಿಯನ್ನು ಚಿತ್ರೀಕರಿಸಲು ವಿಡಿಯೋಗ್ರಾಫರ್ಸ್ ಬೇಕಾಗಿದ್ದಾರೆ…!

ಹೆಡ್ ಲೈನ್ ನೋಡಿ ದಯವಿಟ್ಟು ನಮ್ಮನು ಬೈಯಬೇಡಿ. ಸಭ್ಯ ಸೈಟ್ ನಲ್ಲಿ ಇದ್ಯಾವ ಸುದ್ದಿ ಎಂದು. ಆದರೆ ಜಗತ್ತಿನಲ್ಲಿ ಅದೆಂಥ ಮೆಂಟಲ್ ಜನ ಇರುತ್ತಾರೆ ಅನ್ನುವುದನ್ನು ತಿಳಿಸುವುದಷ್ಟೇ ನಮ್ಮ ಉದ್ದೇಶ. ಮದುವೆಯ ನಂತ್ರದ ಪ್ರಥಮ ರಾತ್ರಿ ಅಥವಾ ಶೋಭಾನೆ ಅನ್ನುವ ಕಾರ್ಯವನ್ನು ಹಿಂದಿನ ಕಾಲದಿಂದಲೂ ಮದುವೆಯಷ್ಟೇ ಪವಿತ್ರ ಕಾರ್ಯ ಅನ್ನುವಂತೆ ನೋಡಿಕೊಂಡು ಬರಲಾಗಿದೆ.ವಿದೇಶಿಯರ ಫಸ್ಟ್ ನೈಟ್ ಅನ್ನುವ ಟೈಟಲ್ ಸಿಕ್ಕ ಮೇಲೆ… Continue Reading “ಪ್ರಥಮ ರಾತ್ರಿಯನ್ನು ಚಿತ್ರೀಕರಿಸಲು ವಿಡಿಯೋಗ್ರಾಫರ್ಸ್ ಬೇಕಾಗಿದ್ದಾರೆ…!”