Advertisements

Tag: ಬಿಗ್ ಬಾಸ್

ವಾಸುಕಿ ಜೊತೆ ಕೆಲಸ ಮಾಡಲು ಬಯಸಿದ ಸುದೀಪ್….!

ಕಿಚ್ಚ ಸುದೀಪ್ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಬದಲಾಗಿದ್ದಾರೆ. ಬದಲಾಗಿದ್ದಾರೆ ಅನ್ನುವುದಕ್ಕಿಂತ ಮಾಗಿದ್ದಾರೆ ಅಂದ್ರೆ ತಪ್ಪಗಾದು. ಅನುಭವ ಅವರನ್ನು ಇನ್ನಷ್ಟು ಹಿರಿಯರನ್ನಾಗಿಸಿದೆ. ಅವರ ನಡೆ ನುಡಿಗಳೇ ಅದಕ್ಕೆ ಸಾಕ್ಷಿ. ಇದು ಮತ್ತೊಮ್ಮೆ ಸಾಬೀತಾಗಿದ್ದು ಭಾನುವಾರ ಪ್ರಸಾರವಾದ ಸೂಪರ್ ಸಂಡೇ ವಿದ್ ಸುದೀಪ್ ಕಾರ್ಯಕ್ರಮದಲ್ಲಿ. ಕೆಲ ವಾರಗಳ ಹಿಂದೆ ಜೈಲು ಸೇರಿದ್ದ ವಾಸುಕಿ ಮನಸ್ಸಿಂದ ಯಾರೂನು ಕೆಟ್ಟೋರಲ್ಲ ಎಂಬ ಹಾಡು ರಚಿಸಿ, ಹಾಡಿ ಕನ್ನಡಿಗರ…

Advertisements

ಮಹಾಮನೆಗೆ ಎಂಟ್ರಿ ಕೊಟ್ಟ RJ ಪೃಥ್ವಿ : ಮುಂದೈತೆ ಮಾರಿಹಬ್ಬ

ಕಿಚ್ಚ ಸುದೀಪ್ ನಡೆಸಿಕೊಡುತ್ತಿರುವ, ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 7 ನಿರೀಕ್ಷಿತ ಮಟ್ಟದ TRPಯನ್ನು ತಂದುಕೊಡವಲ್ಲಿ ಯಶಸ್ವಿಯಾಗಿಲ್ಲ. ಕನ್ನಡದ ಜನರಿಗೆ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಅಲರ್ಜಿ ಹೆಚ್ಚಾಗುತ್ತಿರುವುದರ ಲಕ್ಷಣ ಇದು. ಮಹಾಮನೆಗೆ ಹೋದ ಮಂದಿ ವೀಕ್ಷಕರನ್ನು ರಂಜಿಸುವಲ್ಲಿ ವಿಫಲರಾಗಿದ್ದಾರೆ. ಹೋದ ಸ್ಪರ್ಧಿಗಳಿಗೆ ಮನೋರಂಜನೆ ಕೊಡುವ ತಾಕತ್ತಿದೆ. ಆದರೆ ತನ್ನತನವನ್ನು ಮರೆತಿರುವ ಸ್ಪರ್ಧಿಗಳು ಗೆಲುವಿನ ಲೆಕ್ಕಚಾರದಲ್ಲಿ ತೊಡಗಿದ್ದಾರೆ. ಆದರೆ…

ಈ ಶನಿವಾರದ ತನಕ ಮಾತ್ರ ರವಿ ಬೆಳಗೆರೆಗೆ ಮಹಾಮನೆಯ ವಾಸ್ತವ್ಯ ಭಾಗ್ಯ…

ಸಾಕಷ್ಟು ರಂಜಿಸುತ್ತಾರೆ ಎಂದು ಮಹಾಮನೆಗೆ ಕರೆಸಿಕೊಂಡಿದ್ದ ಪತ್ರಕರ್ತ ರವಿ ಬೆಳಗೆರೆ ಆರೋಗ್ಯ ಕೈ ಕೊಟ್ಟಿರುವ ಹಿನ್ನಲೆಯಲ್ಲಿ ಅವರನ್ನು ಅತಿಥಿಯೆಂದು ಪರಿಗಣಿಸಲಾಗಿದೆ. ಈ ಸಂಬಂಧ ಬಿಗ್ ಬಾಸ್ ಮನೆಯಲ್ಲಿ ಮಂಗಳವಾರ ಪ್ರಸಾರವಾದ ಸಂಚಿಕೆಯಲ್ಲಿ ಪ್ರಕಟಣೆಯನ್ನು ಹೊರಡಿಸಲಾಗಿದೆ. ವೈದ್ಯರ ಸಲಹೆ ಹಿನ್ನಲೆಯಲ್ಲಿ ಶನಿವಾರದ ತನಕ ಮಾತ್ರ ರವಿ ಬೆಳಗೆರೆ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲಿಯ ತನಕ ಅವರು ಬಿಗ್ ಬಾಸ್ ಮನೆಯ ಅತಿಥಿಯಾಗಿರಲಿದ್ದು,…

ನಿಯಮ ಮುರಿದು ಮಹಾಮನೆ ಪ್ರವೇಶಿಸಿದ ಸರ್ವಸಂಗ ಪರಿತ್ಯಾಗಿ : ಗಾಸಿಪ್ ಮನೆಯಲ್ಲಿ ಖಾವಿಗೆ ನ್ಯಾಯ ಸಿಗುತ್ತಾ…?

ಬಿಗ್ ಬಾಸ್ ಮನೆಯೊಳಗೆ ಖಾವಿಧಾರಿಯೊಬ್ಬರು ಇಲ್ಲದಿದ್ದರೆ ಹೇಗೆ ಹೇಳಿ. ಹಾಗೇ ನೋಡಿದರೆ ಈ ಹಿಂದೆ ಬಂದ ಖಾವಿಧಾರಿಗಳು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಇಟ್ಟುಕೊಂಡವರಲ್ಲ. ಒಂದಲ್ಲ ಒಂದು ವಿವಾದದಲ್ಲಿ ಹೆಸರು ನೋಂದಾಯಿಸಿಕೊಂಡವರೇ. ಆದರೆ ಸೀಸನ್ 7ಕ್ಕೆ ಬಂದಿರುವ ಖಾವಿಧಾರಿಯದ್ದು ದೊಡ್ಡ ಹೆಸರು. ಕೇವಲ ಧರ್ಮ ಪ್ರಚಾರದ ಕಾರಣಕ್ಕಲ್ಲ, ಬದಲಾಗಿ ಹಸಿರಿನ ಕಾರಣಕ್ಕೂ ಇವರದ್ದು ದೊಡ್ಡ ಹೆಸರು. ಹಾವೇರಿಯಲ್ಲಿ ಲಕ್ಷ ಸಸಿ ನೆಡುವ ಮೂಲಕ…

ಕಿರುತೆರೆಯಲ್ಲಿ ನಾಗಿಣಿ : ನಿಜ ಜೀವನದಲ್ಲಿ ನಾ ಗಿಣಿ : ಮಹಾಮನೆಯಲ್ಲಿ ದೀಪಿಕಾ ದಾಸ್

ನಿರೀಕ್ಷೆಯಂತೆ ನಾಗಿಣಿ ಧಾರಾವಾಹಿಯ ದೀಪಿಕಾ ದಾಸ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದೀಪಿಕಾ ಅವರಿಗೆ ಒಳ್ಳೆಯ ಅಭಿಮಾನಿ ಬಳಗವಿದೆ. ಹೀಗಾಗಿ ನಾಲ್ಕೈದು ವಾರಗಳನ್ನು ಎದುರಿಸುವುದು ಇವರಿಗೆ ಕಷ್ಟವಾಗಲಾರದು. ಆದರೆ ಮುಂದಿನ ವಾರಗಳಲ್ಲಿ ಇವರ ತಾಕತ್ತು ಬಹಿರಂಗವಾಗಲಿದೆ. ಅಲ್ಲಿ ಮಾಡುವ ಟಾಸ್ಕ್, ಉಳಿದ ಸ್ಪರ್ಧಿಗಳೊಂದಿಗೆ ಕಿತ್ತಾಟ. ಜನರನ್ನು ಹೇಗೆ ರಂಜಿಸುತ್ತಾರೆ, ಎಷ್ಟು ಗಾಸಿಪ್ ಮಾಡುತ್ತಾರೆ ಅನ್ನುವುದರ ಮೇಲೆ ಅವರ…

ಮಹಾಮನೆಗೆ ಎಂಟ್ರಿ ಕೊಟ್ಟ ಚುಕ್ಕಿ : ಕನ್ನಡಿಗರ ಮನಸ್ಸು ಗೆಲ್ತಾಳ ‘ಚಂದನ’

ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಗಳಾಗಿ ಒಳ ಹೋಗುತ್ತಿರುವವರ ಮುಖ ನೋಡಿದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಂಡಿರುವ ಪಟ್ಟಿಯೇ ಅಂತಿಮ ಅನ್ನುವಂತಿದೆ. ಅಚ್ಚರಿಯ ಮುಖವೊಂದು ಮನೆಯೊಳಗೆ ಪ್ರವೇಶಿಸುವ ಲಕ್ಷಣ ಗೋಚರಿಸುತ್ತಿಲ್ಲ. ಇದೀಗ 5ನೇ ಸ್ಪರ್ಧಿಯಾಗಿ ರಾಜಾ ರಾಣಿ ಧಾರಾವಾಹಿಯ ನಾಯಕಿ ಚಂದನ ಅನಂತ ಕೃಷ್ಣ ಪ್ರವೇಶಿಸಿದ್ದಾರೆ. ರಾಜಾ ರಾಣಿ ಧಾರಾವಾಹಿಯಲ್ಲಿ ಎಡವಟ್ಟು ಚುಕ್ಕಿಯಾಗಿ ಕಾಣಿಸಿಕೊಂಡಿದ್ದ ಅವರು ಅತ್ತ ಧಾರಾವಾಹಿ ಮುಕ್ತಾಯವಾಗುತ್ತಿದ್ದಂತೆ ಬಿಗ್ ಬಾಸ್…

ಬಿಗ್ ಬಾಸ್ ಮನೆಯೆ ಆಫರ್ ತಿರಸ್ಕರಿಸಿದ್ಯಾಕೆ ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ

ಕನ್ನಡ ಕಿರುತೆರೆ ಲೋಕದಲ್ಲಿ ನಿಧಾನವಾಗಿ ಬಿಗ್ ಬಾಸ್ ಜ್ವರ ಆವರಿಸಲಾರಂಭಿಸಿದೆ. ಕನ್ನಡಿಗರಿಗೆ 7ನೇ ಸೀಸನ್ ಇಷ್ಟವಾಗುತ್ತದೋ ಬಿಡುತ್ತದೋ ಗೊತ್ತಿಲ್ಲ. ವಾಹಿನಿ ಮುಖ್ಯಸ್ಥರ ಪಾಲಿಗೆ ಇದು ಡೂ ಆರ್ ಡೈ. ಈಗಾಗಲೇ ಝೀ ಕನ್ನಡ ವಾಹಿನಿ TRP ಲೋಕದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಕಲರ್ಸ್ ವಾಹಿನಿಯನ್ನು ಹಿಂದಕ್ಕೆ ತಳ್ಳಿ ಮುನ್ನುಗ್ಗುತ್ತಿದೆ. ಹೀಗಾಗಿ TRP ಏರಿಸಿಕೊಳ್ಳಬೇಕಾದ ಒತ್ತಡದಲ್ಲಿ ಕಲರ್ಸ್ ವಾಹಿನಿ ಮುಖ್ಯಸ್ಥರಿದ್ದಾರೆ. ಹೀಗಾಗಿ ಈ ಬಾರಿ…

ಬಿಗ್​ಬಾಸ್​ ಸ್ಪರ್ಧಿ ಜಯಶ್ರೀಗೆ ಲೈಂಗಿಕ ಕಿರುಕುಳ : ನಡುರಾತ್ರಿಯಲ್ಲಿ ಬೀದಿಗೆ ತಳ್ಳಿದ ಸೋದರ ಮಾವ…?

ಬಿಗ್ ಬಾಸ್ ಕನ್ನಡ ಸೀಸನ್ 3ರ ಸ್ಪರ್ಧಿ, ನಟಿ ಜಯಶ್ರೀ ಮತ್ತು ಅವರ ತಾಯಿಯನ್ನು ಸೋದರ ಮಾವ ಮನೆಯಿಂದ ಹೊರ ಹಾಕಿರುವ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈವೆಂಟ್ ಆರ್ಗನೈಸರ್ ಆಗಿರುವ ಜಯಶ್ರೀ ಮೇಲೆ ಸೋದರ ಮಾವ ಗಿರೀಶ್ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿರುವುದಾಗಿ ದೂರು ನೀಡಲಾಗಿದೆ. ನಡುರಾತ್ರಿ ಅನ್ನೋದನ್ನೂ…

ಒಳ್ಳೆ ಹುಡುಗನಿಗೆ ಶೀಘ್ರದಲ್ಲೇ ಕಂಕಣ ಭಾಗ್ಯ : ಒಳ್ಳೆ ಹುಡುಗನ ಒಳ್ಳೆ ಹುಡುಗಿ ಯಾರು…?

ಬೆಂಗಳೂರು ಸಹವಾಸ ಸಾಕು ಎಂದು, ಕೈಯಲ್ಲಿರುವ ಕಮಿಟ್ಮೆಂಟ್ ಗಳನ್ನು ಮುಗಿಸಿ ಊರಿಗೆ ಹೋಗಲು ತಯಾರಿ ನಡೆಸುತ್ತಿರುವ ಪ್ರಥಮ್ ಬದುಕಿಗೆ ಹೆಣ್ಣೊಬ್ಬಳ ಪ್ರವೇಶ ಖಚಿತವಾಗಿದೆ. ತಂದೆ ಮತ್ತು ತಾಯಿಯವರ ಒತ್ತಡ ತಾಳಲಾರದ ಪ್ರಥಮ್ ಕೊನೆಗೂ ವಿವಾಹಕ್ಕೆ ಸಿದ್ಧವಾಗುತ್ತಿದ್ದಾರೆ. ಮಾತುಕತೆ ಹಂತದಲ್ಲಿ ಎಲ್ಲವೂ ಇದ್ದು, ಈ ವರ್ಷ ಮತ್ತೊಂದು ಸ್ಟಾರ್ ಮದುವೆ ಕರ್ನಾಟಕ ಸಾಕ್ಷಿಯಾಗಲಿದೆ.

ಕಿಚ್ಚನ ಬಿಗ್ ಬಾಸ್ ಮನೆಯ ಗೃಹ ಪ್ರವೇಶಕ್ಕೆ ಮುಹೂರ್ತ ಫಿಕ್ಸ್

ಕನ್ನಡದ ಅತಿ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ 6ನೇ ಆವೃತ್ತಿ ಅಕ್ಟೋಬರ್ 21ರಂದು ಆರಂಭವಾಗಲಿದೆ. ಬಿಗ್ ಬಾಸ್ ಹೊಸ ಸೀಸನ್ ಗೆ ಕಿಚ್ಚಿನಿಂದ ಕಿಚ್ಚ ತಯಾರಿಯಾಗಿದ್ದಾರೆ ಎಂದು ಖಾಸಗಿ ವಾಹಿನಿ ಪ್ರಕಟಿಸಿದೆ. ಈಗಾಗಲೇ ಕನ್ನಡದಲ್ಲಿ 5 ಆವೃತ್ತಿಗಳನ್ನು ಪೂರೈಸಿರುವ ಬಿಗ್ ಬಾಸ್ ಅನೇಕ ಹಿರಿ-ಕಿರಿತೆರೆ ಕಲಾವಿದರಿಗೆ ವೇದಿಕೆಯಾಗಿತ್ತು. ಈ ರಿಯಾಲಿಟಿ ಶೋ ಮೂಲಕವೇ ಹಲವು ಕಲಾವಿದರು ಇನ್ನಷ್ಟು ಜನಪ್ರಿಯತೆ…