Tag: ದೇವೇಗೌಡ

ಕರ್ನಾಟಕವೇನು…ದೇವೇಗೌಡರ ಅಪ್ಪನ ಮನೆ ಆಸ್ತೀನಾ..?ಪ್ರೀತಂಗೌಡರ ಪ್ರಶ್ನೆ ಉತ್ತರವೆಲ್ಲಿದೆ…

ರಾಮನಗರ ಗಂಡನಿಗೆ, ಚನ್ನಪಟ್ಟಣ ಹೆಂಡತಿಗೆ, ಮಂಡ್ಯ ಮಗನಿಗೆ, ಪಕ್ಕದ ಜಿಲ್ಲೆ ಹಾಸನ ಅಣ್ಣನ ಮಗನಿಗೆ. ಕರ್ನಾಟಕ ದೇವೇಗೌಡರ ಅಪ್ಪನ ಮನೆ ಆಸ್ತೀನಾ..? ಎಂದು ಹಾಸನ ಶಾಸಕ ಪ್ರೀತಂಗೌಡ ಪ್ರಶ್ನಿಸಿದ್ದಾರೆ. ಮೈಸೂರಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗೌಡರೇನೂ ದೇವೇಗೌಡರ ಕುಟುಂಬಕ್ಕೆ ಜಿಪಿಎ ಮಾಡಿಕೊಟ್ಟಿಲ್ಲ. ನಾವು ಯಾರೂಹ ಬಾಂಡೆಡ್ ಲೇಬರ್ಸ್ ಅಲ್ಲ ಎಂದು ದೇವೇಗೌಡ ಹಾಗೂ ಅವರ ಕುಟುಂಬದ ತೀವ್ರ ವಾಗ್ದಾಳಿ…

ದೇವೇಗೌಡರಿಗೆ ಮಕ್ಕಳು, ಮೊಮ್ಮಕ್ಕಳು ಹಾಗೂ ಸೊಸೆಯಂದಿರ ಬಗ್ಗೆ ಚಿಂತೆ

ಮಾಜಿ ಪ್ರಧಾನಿ ದೇವೇಗೌಡರು ಮಕ್ಕಳು, ಮೊಮ್ಮಕಳು ಹಾಗೂ ಸೊಸೆಯಂದಿರ ಬಗ್ಗೆ ಮಾತ್ರ ಚಿಂತೆ ಮಾಡುತ್ತಿದ್ದಾರೆ. ಹಾಗಾದರೆ, ಸೆಕೆಂಡ್ ಲೀಡರ್ಸ್ ಕಥೆ ಏನ್ರಿ ಸ್ವಾಮಿ ಎಂದು ಕಾಂಗ್ರೆಸ್ ಮುಖಂಡ ಮಾಜಿ ಎ. ಮಂಜು ಪ್ರಶ್ನಿಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ವರಿಷ್ಠ ದೇವೇಗೌಡ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಸುಮಲತಾ ಅಂಬರೀಶ್ ಪರ ಭರ್ಜರಿ ಬ್ಯಾಟ್ ಬೀಸಿದ ಮಂಜು ಜೆಡಿಎಸ್‌ನವರು…

ದೇವೇಗೌಡರ ಆರೋಗ್ಯ ವಿಚಾರಿಸಿದ ಪ್ರಥಮ್ :ಒಳ್ಳೆ ಹುಡುಗನ ಕಂಡು ಮಾಜಿ ಪಿಎಂ ಹೇಳಿದ್ದೇನು..?

ಕನ್ನಡ ಕಿರುತೆರೆಯ ಮಹಾಮನೆಯಲ್ಲಿ ಕ್ರಾಂತಿ ಎಬ್ಬಿಸಿ ಬಂದ ಒಳ್ಳೆ ಹುಡುಗ, ಸ್ವಯಂ ಘೋಷಿತ ಕರ್ನಾಟಕದ ಆಸ್ತಿ ಪ್ರಥಮ್ ಇದೀಗ ರಾಜಕಾರಣಿಗಳ ಸುತ್ತ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬ್ಯುಸಿಯ ನಡುವೆಯೂ ಪ್ರಥಮ್ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಬಂದಿದ್ದಾರೆ. ದೆಹಲಿಯಿಂದ ಶುಕ್ರವಾರವಷ್ಟೇ ವಾಪಾಸ್ಸಾಗಿದ್ದ ದೇವೇಗೌಡರಿಗೆ ಶನಿವಾರ ಸ್ನಾಯು ಸೆಳೆತ ಉಂಟಾಗಿ ಕಾಲು ನೋವು ಕಾಣಿಸಿಕೊಂಡಿತ್ತು. ಶನಿವಾರ ಬೆಳಗ್ಗೆ ಕೊಠಡಿ ಬಳಿ…

ಅಯ್ಯೋಯ್ಯೋ…ಜೆಡಿಎಸ್ ನಲ್ಲಿ ಎನೋ ರಾಂಗ್ ಆಗಿದೆ…

ರಾತ್ರಿ ವೇಳೆ ಜೆಡಿಎಸ್​ ನಾಯಕಿಯರಿಗೆ ಹಾಗೂ ಕಾರ್ಯಕರ್ತೆಯರಿಗೆ ದೂರವಾಣಿ ಕರೆ ಮಾಡದಂತೆ ರಾಜ್ಯ ಜೆಡಿಎಸ್​ ಖಡಕ್ ಎಚ್ಚರಿಕೆ ನೀಡಿದೆ. ಇಂತಹುದೊಂದು ಒಕ್ಕಣೆಯ ಕರಪತ್ರ ಜೆಡಿಎಸ್ ಕಚೇರಿಯ ನೊಟೀಸ್ ಬೋರ್ಡ್ ನಲ್ಲಿ ರಾರಾಜಿಸುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಜೆಡಿಎಸ್​, ತಮ್ಮ ಪಕ್ಷದಿಂದ ಯಾವುದೇ ಲೋಪವಾಗದಂತೆ ಜಾಗರೂಕತೆಯಿಂದ ಹೆಜ್ಜೆ ಇಡುತ್ತಿದೆ. ಒಂದು ವೇಳೆ ಪಕ್ಷಕ್ಕೆ ಯಾವುದೇ ರೀತಿಯಿಂದ ಕೆಟ್ಟ ಹೆಸರು ಬಂದರೆ,…

ರಾಷ್ಟ್ರೀಯ ಮಟ್ಟದಲ್ಲಿ ಸಿಎಂ ಮಾನ ಹರಾಜು ಹಾಕಿದ ಸೂಪರ್ ಸಿಂ

ನಿಮಗೆ ಆಗದವರು ಯಾರಾದರೂ ಇದ್ದಾರೆ ರಾಜಕಾರಣಿಗಳಿಗೆ ಹೇಳಿ…ಅದ್ಭುತವಾಗಿ ನಿಮ್ಮ ಶತ್ರುವಿನ ಮಾನ ಹರಾಜು ಹಾಕುತ್ತಾರೆ. ಎಲ್ಲಿ ಹೇಗಿರಬೇಕು ಅನ್ನುವ ಜ್ಞಾನವಿಲ್ಲದೆ ವರ್ತಿಸುವ ಇವರು, ದರ್ಪ, ದೌಲತ್ತುಗಳಲ್ಲೇ ಮುಳುಗಿ ಹೋಗಿರುತ್ತಾರೆ. ನಿನ್ನೆ ರಾತ್ರಿ ಮಾಜಿ ಪ್ರಧಾನಿ ದೇವೇಗೌಡರ ಹಿರಿಯ ಪುತ್ರ, ರಾಜ್ಯದ ಸಿಎಂ ಅವರ ಸಹೋದರ, ಲೋಕೋಪಯೋಗಿ ಸಚಿವರೂ ಆಗಿರುವ ಹೆಚ್.ಡಿ. ರೇವಣ್ಣ ಆಡಿದ್ದು ಕೂಡಾ ಹೀಗೆ. ನೆರೆಯಿಂದ ಸಂತ್ರಸ್ಥರಾಗಿರುವ ಜನರಿಗೆ ಸಾಂತ್ವಾನ…

ಮೂರೇ ಮೂರು ಪ್ರಶ್ನೆಗೆ ಉತ್ತರಿಸಿ ದೇವೇಗೌಡರೇ…

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿಚಾರ ಕುರಿತಂತೆ ರಾಜಕೀಯ ಮೇಲಾಟ ಮುಂದುವರಿದಿದೆ. ಪ್ರತ್ಯೇಕದ ರಾಜ್ಯದ ಪರ ಹೇಳಿಕೆ ಕೊಟ್ಟು ಮತ ಪಡೆಯಬಹುದು ಅನ್ನುವ ಪಕ್ಷಗಳ ಲೆಕ್ಕಚಾರ ಉಲ್ಟಾ ಹೊಡೆದಿದ್ದು, ಹೀಗಾಗಿ ಒಗ್ಗಟ್ಟಿನ ಮಂತ್ರದ ರಣತಂತ್ರ ರೂಪುಗೊಂಡಿದೆ. ಅದರಲ್ಲೂ ಬಿಜೆಪಿಗೆ ಇದೀಗ ಕಾಂಗ್ರೆಸ್ ದೊಡ್ಡ ಎದುರಾಳಿಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ಜೆಡಿಎಸ್ ದೊಡ್ಡ ಶತ್ರುವಾಗಿದೆ. ಈ ಹಿಂದೆ ವಿಧಾನಸಭೆಯಲ್ಲಿ ಯಡಿಯೂರಪ್ಪ ಘೋಷಿಸಿದಂತೆ ಜೆಡಿಎಸ್ ವಿರುದ್ಧ…