Advertisements

Tag: ಕಾರು

ಕಾರಿಗೆ ಬೆಂಕಿ : ಬೆಂಗಳೂರಿನ ಒಂದೇ ಕುಟುಂಬದ ಐವರ ಸಜೀವ ದಹನ

ತಿರುಪತಿ ವೆಂಕಟೇಶ್ವರನ ದರ್ಶನ ಮುಗಿಸಿ ಬೆಂಗಳೂರಿಗೆ ಹಿಂತಿರುಗುತ್ತಿದ್ದ ಕಾರೊಂದು ಪಲ್ಟಿಯಾಗಿ ಬೆಂಕಿ ಹತ್ತಿಕೊಂಡು ಒಂದೇ ಕುಟುಂಬ ಐವರು ಸಜೀವ ದಹನವಾಗಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಅಂಧ್ರ ಪ್ರದೇಶದ  ಚಿತ್ತೂರು ಜಿಲ್ಲೆಯ  ಪಲಮನೇರು ಮಂಡಲಂನ ಗಂಗಾವರಂ ಎಂಬ ಸ್ಥಳದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಬೆಂಗಳೂರು ಮೂಲದವರು ಎಂದು ಗುರುತಿಸಲಾಗಿದೆ. ಚಾಹ್ನವಿ, ಕಲಾ, ಪವನ್, ರಾಮ್ ಹಾಗೂ ಸಾಯಿ ಅಶ್ರಿತ ಮೃತರಾಗಿದ್ದು,…

Advertisements

ಜಿಪ್ಸಿಯ ಉತ್ತರಾಧಿಕಾರಿಯಾಗಿ ಬರುತ್ತಿದ್ದಾನೆ ಜಿಮ್ನಿ…

ಈಗ್ಲೂ ಕಾರು ಪ್ರಿಯರ ಹಾಟ್ ಫೇವರಿಟ್ ಆಗಿರುವ ಜಿಪ್ಸಿ ಕಾರಿನ ಉತ್ತರಾಧಿಕಾರಿ ಬರಲೇ ಇಲ್ಲ ಅನ್ನುವ ಕೊರಗು ಎಲ್ಲರನ್ನೂ ಕಾಡುತ್ತಿತ್ತು. ಇದೀಗ ಇದನ್ನು ಮನಗಂಡಿರುವ ಸುಜುಕಿ ಸಂಸ್ಥೆ ಜಿಪ್ಸಿ ಜಾಗಕ್ಕೆ ಜಿಮ್ನಿಯನ್ನು ಪರಿಚಯಿಸಲು ಮುಂದಾಗಿದೆ. ಜಿಮ್ನಿ ಕಾರು 1970ರ ಸಾಲಿನಲ್ಲಿ ಮೊದಲ ಹಗುರ ಜೀಪ್ ಮಾದರಿ ಎಲ್‌ಜೆ10ರ ಹೊಸ ತಲೆಮಾರಿನ ಅವೃತ್ತಿಯಾಗಿದೆ. ಜಿಮ್ನಿ ಎರಡನೇ ತಲೆಮಾರಿನ ಆವೃತ್ತಿಯಾಗಿರುವ ಜಿಪ್ಸಿ 1981 ರಿಂದ…

ಹೊಸ ಕಾರು ಉತ್ಪಾದನೆ ನಿಲ್ಲಿಸಿದ ಮಹೇಂದ್ರ ಮತ್ತು ಮಾರುತಿ ಸುಜುಕಿ

ಹೊಸ ವಾಹನಗಳ ಮಾರಾಟ ಪ್ರಮಾಣವು ಕಳೆದ ಹಲವು ತಿಂಗಳಿನಿಂದ ಕುಸಿತ ಕಂಡಿದೆ. ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಕರಿ ನೆರಳ ಛಾಯೆ ಬಿದ್ದಿರುವುದೇ ಇದಕ್ಕೆ ಕಾರಣ. ಹೀಗಾಗಿ ಅಟೋಮೊಬೈಲ್ ಕ್ಷೇತ್ರ ಆತಂಕದಲ್ಲಿದೆ. ಕನಿಷ್ಠ ಪ್ರಮಾಣದ ವಾಹನಗಳನ್ನು ಮಾರಾಟ ಮಾಡಲು ಸಂಸ್ಥೆಗಳು ಪರದಾಡುತ್ತಿದ್ದು, ಹೀಗಾಗಿ ಹೊಸ ವಾಹನಗಳ ಉತ್ಪಾದನೆಯನ್ನು ನಿಲ್ಲಿಸಲು ಹಲವು ಸಂಸ್ಥೆಗಳು ನಿರ್ಧರಿಸಿದೆ. ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಆರ್ಥಿಕವಾಗಿ ಹೊರೆಯಾಗಿರುವ…

2020ರ ನಂತ್ರ ಮಾರುತಿ ಡೀಸೆಲ್ ಕಾರುಗಳ ಮಾರಾಟ ಸ್ಥಗಿತ…?

2020ರ ಮಾರ್ಚ್ 31ರ ನಂತರ BS4 (ಭಾರತ್ ಸ್ಟೇಜ್ 4) ವಾಹನಗಳ  ಮಾರಾಟ ಮತ್ತು ರಿಜಿಸ್ಟ್ರೇಶನ್ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಆದೇಶಿಸಿದೆ. ಬಿಎಸ್4 ಆದೇಶ ಜಾರಿಗೊಂಡರೆ 1500ಸಿಸಿಗಿಂತ ಕಡಿಮೆ ಸಾಮರ್ಥ್ಯದ ಡೀಸೆಲ್ ವಾಹನ ಓಡಾಡುವಂತಿಲ್ಲ. ಈ ಕಾರಣದಿಂದ 2020ರ ಏಪ್ರಿಲ್ ನಿಂದ ಮಾರುತಿ ಡೀಸೆಲ್ ಕಾರುಗಳ ಮಾರಾಟ ಸ್ಥಗಿತಗೊಳಿಸುವುದಾಗಿ ಭಾರತದ ಅತೀ ದೊಡ್ಡ ಕಾರು ತಯಾರಿಕಾ ಕಂಪನಿಯಾದ ಮಾರುತಿ ಸುಜುಕಿ…