ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನದ ಬಳಿಕ, ಬಿಜೆಪಿಗೆ ಬೆಂಬಲ ಕೊಡಬೇಕು ಅನ್ನುವ ಅಭಿಪ್ರಾಯ ಸಾಕಷ್ಟು ದಿನಗಳ ಹಿಂದೆಯೇ ಜೆಡಿಎಸ್ ವಲಯದಲ್ಲಿ ಕೇಳಿ ಬಂದಿತ್ತು.
Get upto 50% off on MEN’S ADIDAS ORIGINALS SOBAKOV SHOES
ಬಾಹ್ಯ ಬೆಂಬಲವನ್ನು ಬಿಜೆಪಿಗೆ ನೀಡುವ ಮೂಲಕ ತಮ್ಮ ಕ್ಷೇತ್ರದ ಕೆಲಗಳನ್ನು ಸುಲಭವಾಗಿ ಮಾಡಿಸಿಕೊಳ್ಳಬೇಕು ಅನ್ನುವುದು ಇದರ ಬಿಂದಿನ ರಹಸ್ಯ. ಆದರೆ ಜೆಡಿಎಸ್ ವರಿಷ್ಟರು ಇದಕ್ಕೆ ಸಮ್ಮತಿಸಿಲ್ಲ.
ಈ ನಡುವೆ ಕೆಲ ಜೆಡಿಎಸ್ ಶಾಸಕರು ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ ಅನ್ನುವುದಕ್ಕೆ ಪುಷ್ಟಿ ನೀಡುವ ಘಟನೆಯೊಂದು ಇಂದು ವಿಧಾನಸಭೆಯಲ್ಲಿ ನಡೆಯಿತು.
Get upto 50% off on MEN’S ADIDAS RUNNING CYBERG SHOES
ಬಿಎಸ್ ಯಡಿಯೂರಪ್ಪ ವಿಶ್ವಾಸ ಮತ ಗೆದ್ದುಕೊಂಡ ಬೆನ್ನಲ್ಲೇ ಧನ ವಿಧೇಯಕ ಮಂಡಿಸಿ ಅದಕ್ಕೆ ಒಪ್ಪಿಗೆ ಪಡೆದುಕೊಂಡರು. ನಂತರ ಪೂರಕ ಬಜೆಟ್ ಮಂಡಿಸಿದ ಯಡಿಯೂರಪ್ಪ ಅನುಮೋದನೆ ನೀಡುವಂತೆ ಸದನಕ್ಕೆ ಮನವಿ ಮಾಡಿದರು.

ಆದರೆ ಸಿದ್ದರಾಮಯ್ಯ ಪೂರಕ ಬಜೆಟ್ ಅನ್ನು ಚರ್ಚೆಯಿಲ್ಲದೇ ಅಂಗೀಕರಿಸಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದರು. ಸಾವಿರಾರು ಕೋಟಿ ರೂಪಾಯಿ ಮೊತ್ತಕ್ಕೆ ಚರ್ಚೆಯಿಲ್ಲದೆ ಸಮ್ಮತಿಸುವುದು ಸರಿಯಾದ ಕ್ರಮವಲ್ಲ ಅಂದರು.
ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಇದು ನಿಮ್ಮ ಸರ್ಕಾರವೇ ಮಂಡಿಸಿದ ಪೂರಕ ಬಜೆಟ್. ನೀವೇ ಮಂಡಿಸಿದ ಬಜೆಟ್ ಮೇಲೆ ಚರ್ಚೆ ನಡೆಸಲು ಏನಿದೆ ಎಂದರು. ಇದಕ್ಕೆ ಸಿದ್ದರಾಮಯ್ಯ ನೀವು ಏನು ಬದಲಾವಣೆ ಮಾಡಿದ್ದೀರಿ ಅನ್ನುವುದು ಗೊತ್ತಿಲ್ಲ. ನಾನು ಪೂರಕ ಬಜೆಟ್ ಅನ್ನು ಓದಿಲ್ಲ. ನಮ್ಮ ಸರ್ಕಾರವೇ ಮಂಡಿಸಿದ ಬಜೆಟ್ ಆಗಿದ್ದರೂ, ಅದರೊಳಗೆ ಏನಿದೆ ಅನ್ನುವುದು ಗೊತ್ತಿಲ್ಲ ಅಂದರು.
ಈ ಸಂದರ್ಭದಲ್ಲಿ ಬಿಜೆಪಿಯ ಮಾಧುಸ್ವಾಮಿ ಮಧ್ಯ ಪ್ರವೇಶಿಸಿಕೇಂದ್ರದಿಂದ ಎನ್‍ಡಿಆರ್‍ಎಫ್ ನಿಧಿ ಬಂದಿದೆ. ಅದನ್ನು ಬಳಸಬೇಕಾದರೆ ಸದನದ ಅನುಮತಿ ಬೇಕು. ರಾಜ್ಯದಲ್ಲಿ ಬರ ಇದೆ. ಕೊಳವೆ ಬಾವಿ ಕೊರೆಸಬೇಕಾಗಿದೆ. ಹೀಗಾಗಿ ಬಂದಿರುವ ಹಣ ಬಳಸದೇ ಇದ್ದರೆ ಎಷ್ಟು ಸರಿಯಾಗುತ್ತದೆ. ನೀವು ಬೇಡ ಅನ್ನುವುದಾದರೆ ಬೇಡ ಅಂದರು.
ಈ ಬಗ್ಗೆ ಸಿದ್ದರಾಮಯ್ಯ ಮತ್ತು ಮಾಧು ಸ್ವಾಮಿ ನಡುವೆ ಚರ್ಚೆ ನಡೆಯುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರು, ನಾವೇ ಮಂಡನೆ ಮಾಡಿರುವ ಬಜೆಟ್ ಅಲ್ವ . ನಾವ್ಯಾಕೆ ಅಡ್ಡಿಯಾಗೋಣ. ಮಾಡ್ಲೀ ಬಿಡ್ರೀ ಅಂದರು.
ತಕ್ಷಣ ಯಡಿಯೂರಪ್ಪನವರು ನಿಮ್ಮ ಸರ್ಕಾರದ ಜಿಟಿ ದೇವೇಗೌಡರೇ ಹೇಳಿದ ಮೇಲೆ ಮತ್ತೆ ಏನು ಎಂದು ಪ್ರಶ್ನಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಚರ್ಚೆಯಾಗದೇ ಪೂರಕ ಬಜೆಟ್ ಮಂಡಿಸುವುದು ಸರಿಯಲ್ಲ. ಇದು ಒಳ್ಳೆಯ ಸಂಪ್ರದಾಯ ಮಾತ್ರ ಅಲ್ಲ ಎಂದು ಪಟ್ಟು ಹಿಡಿದರು.
ಅಷ್ಟು ಹೊತ್ತಿಗೆ ಮೈತ್ರಿ ನಾಯಕರು ಪೂರಕ ಬಜೆಟ್ ಗೆ ಅನುಮೋದನೆ ಕೊಡುವ ನಿರ್ಧಾರಕ್ಕೆ ಬಂದಾಗಿತ್ತು. ಈ ವೇಳೆ ಸ್ಪೀಕರ್ ರಮೇಶ್ ಕುಮಾರ್, ಸರಿ ಈಗ ಏನು ಮಾಡೋಣ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದಾಗ. ಅಷ್ಟು ಹೊತ್ತು ಪೂರಕ ಬಜೆಟ್ ಅನ್ನು ವಿರೋಧಿಸಿದ್ದ ಸಿದ್ದರಾಮಯ್ಯ, ಎಲ್ಲರ ಒಪ್ಪಿಗೆ ಇದೆ ಅಂದರೆ ನನ್ನ ಅಭ್ಯಂತರ ಇಲ್ಲ, ಪಾಸ್ ಮಾಡಿ ಅಂದರು.
ಅಲ್ಲಿಗೆ ಸದನದಲ್ಲಿ ಸಿದ್ದರಾಮಯ್ಯ ಅವರು ಒಂಟಿಯಾಗಿದ್ದು ಮಾತ್ರ ಸತ್ಯ.
Discussion about this post