ಬೆಂಗಳೂರು : ಕೊರೋನಾ ಸೋಂಕಿನ ಎರಡನೆ ಅಲೆಗೆ ಸೆಲೆಬ್ರೆಟಿಗಳು ತುತ್ತಾಗುತ್ತಿದ್ದಾರೆ. ಫಿಲ್ಮಂ, ಧಾರಾವಾಹಿ, ರಿಯಾಲಿಟಿ ಶೋ ಗಳಲ್ಲಿ ಇವರು ಪಾಲ್ಗೊಳ್ಳುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಈ ನಡುವೆ ನಟಿ ಶ್ವೇತಾ ಚೆಂಗಪ್ಪ ಅವರಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಈ ಬಗ್ಗೆ ಅವರೇ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದು, ಎಲ್ಲಾ ರೀತಿಯ ಮುಂಜಾಗ್ರತ ಕ್ರಮಗಳನ್ನು ಕೈಗೊಂಡರೂ ನಾನು ಕೊರೋನಾ ಸೋಂಕಿಗೆ ತುತ್ತಾಗಿದ್ದೇನೆ.
ಕೊರೋನಾ ದೃಢಪಟ್ಟಿರುವ ಹಿನ್ನಲೆಯಲ್ಲಿ ವೈದ್ಯರ ಸಲಹೆಯಂತೆ ಮದ್ದು ತೆಗೆದುಕೊಳ್ಳುತ್ತಿದ್ದೇನೆ. ಜೊತೆಗೆ ಎಲ್ಲಾ ರೀತಿಯ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದೇನೆ ಅಂದಿದ್ದಾರೆ. ಜೊತೆಗೆ ನನ್ನ ಸಂಪರ್ಕ ಬಂದವರೆಲ್ಲಾ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ನಿನ್ನೆಯಷ್ಟೇ ಶ್ವೇತಾ ಅವರ ತಂದೆ ತಾಯಿ ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದರು. ಅಮ್ಮ ಬೆಂಗಳೂರು ಹಾಗೂ ಅಪ್ಪ ಕೊಡಗಿನಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಶ್ವೇತಾ ಅವರೇ ತಿಳಿಸಿದ್ದರು.
Discussion about this post