ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಇಂದು ತಮ್ಮ ಚೊಚ್ಚಲ ಭಾಷಣ ಮಾಡಿದ್ದಾರೆ.
ಕನ್ನಡದಲ್ಲೇ ಭಾಷಣ ಪ್ರಾರಂಭಿಸಿದ ಸುಮಲತಾ,ಮೊದಲನೇಯದ್ದಾಗಿ ನನ್ನ ಹೆಮ್ಮೆಯ ಕ್ಷೇತ್ರವಾದ ಮಂಡ್ಯದ ಸಮಸ್ತ ಸ್ವಾಭಿಮಾನಿ ಜನತೆಗೆ ಈ ಮೂಲಕ ಧನ್ಯವಾದ ಸಲ್ಲಿಸುತ್ತೇನೆ ಎಂದರು.ಈ ಮೂಲಕ ಸ್ವಾಭಿಮಾನದ ಮಾತಿಗೆ ಮನ್ನಣೆ ಕೊಟ್ಟು ಗೆಲ್ಲಿಸಿದ ಸ್ವಾಭಿಮಾನಿ ಮಂಡ್ಯದ ಮಂದಿಗೆ ವಂದಿಸಿದರು.
ಬಳಿಕ ಕರ್ನಾಟಕ ಮತ್ತು ಮಂಡ್ಯದ ರೈತರ ಸಂಕಷ್ಟಕ್ಕೆ ಬೆಳಕು ಚೆಲ್ಲಿದ ಸುಮಲತಾ ಅವರು ಮಳೆಯಿಲ್ಲದೇ ರಾಜ್ಯದಲ್ಲಿ ನೀರಿನ ಸಮಸ್ಯೆ ಹಾಗೂ ರಾಜ್ಯದಲ್ಲಿ ಬರ ತೀವ್ರವಾಗಿದ್ದು, ರೈತರು ಮಾಡಿದ ಬ್ಯಾಂಕ್ ಸಾಲ ತೀರಿಸಲಾಗದ ಪರಿಸ್ಥಿತಿಯಲ್ಲಿದ್ದಾರೆ. ಇದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಗೋವುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ, ಹೀಗಾಗಿ ಪ್ರಧಾನ ಮಂತ್ರಿ ಮತ್ತು ಕೇಂದ್ರ ಕೃಷಿ ಸಚಿವರು ಸಂಬಂಧ ಗಮನ ಹರಿಸಿ ಬರ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ನಾವು ಅನ್ನದಾತನನ್ನು ರಕ್ಷಣೆ ಮಾಡುವ ಅವಶ್ಯಕತೆಯಿದೆ, ಮಾನ್ಸೂನ್ ವೈಫಲ್ಯವಲ್ಲ, ಅವರಿಗೆ ಸೂಕ್ತ ಪರಿಹಾರ ಒದಗಿಸದಿದ್ದರೇ ನಮ್ಮ ವೈಫಲ್ಯವೂ ಕಾರಣವಾಗುತ್ತದೆ.
ಹೀಗಾಗಿ ತಕ್ಷಣ ಪ್ರಧಾನಮಂತ್ರಿ ಮತ್ತು ಜಲ ಸಂಪನ್ಮೂಲ ಸಚಿವರು ಮಧ್ಯ ಪ್ರವೇಶಿಸಿ ಕರ್ನಾಟಕದ ಅನ್ನದಾತರ ಸಹಾಯಕ್ಕೆ ಧಾವಿಸಿ ಎಂದು ಮನವಿ ಮಾಡಿದರು.
ಇನ್ನು ಜೈ ಜವಾನ್, ಜೈ ಕಿಸಾನ್, ಜೈ ಹಿಂದ್, ಜೈ ಕರ್ನಾಟಕ ಎಂಬ ಘೋಷಣೆಯೊಂದಿಗೆ ತಮ್ಮ ಚೊಚ್ಚಲ ಭಾಷಣವನ್ನೂ ಮುಗಿಸಿದ್ದಾರೆ.
ಮೊದಲ ಬಾರಿಗೆ ಸುಮಲತಾ ಅವರು ಮಾತನಾಡಿದ ಶೈಲಿ ನೋಡಿದ್ರೆ ಮುಂದಿನ ದಿನಗಳಲ್ಲಿ ಮಂಡ್ಯ ಕ್ಷೇತ್ರವನ್ನು ಅದ್ಭುತವಾಗಿ ಪ್ರತಿನಿಧಿಸುವ ಸಾಧ್ಯತೆಗಳಿದೆ. ಅಯ್ಯೋ ಮತ ಕೊಟ್ಟು ತಪ್ಪು ಮಾಡಿದೆವು ಎಂದು ಸ್ವಾಭಿಮಾನಿ ಮತದಾರರು ಚಿಂತಿಸುವ ಅಗತ್ಯವೂ ಇಲ್ಲ. ಮಂಡ್ಯದ ಮತದಾರರ ಆಯ್ಕೆ ಸರಿಯಾಗಿಯೇ ಇದೆ.
ಸುಮಲತಾ ಅವರು ಮಾಡಿದ್ದು ಕೆಲವೇ ನಿಮಿಷಗಳ ಭಾಷಣವಾದರೂ, ಮೊದಲ ಬಾರಿಗೆ ಸಂಸದೆಯಾಗಿ ಮಾಡಿದ ಚೊಚ್ಚಲ ಭಾಷಣದಲ್ಲಿ ದೇಶ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
Discussion about this post