ಅಮೆರಿಕಾದ ಕೋವೋವ್ಯಾಕ್ಸ್ ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗ ನಡೆಸಲು ಸೀರಂ ಸಂಸ್ಥೆಗೆ ಅನುಮತಿ ನೀಡಬಾರದು ಎಂದು ತಜ್ಞರ ಸಮಿತಿ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಅಮೆರಿಕಾದಲ್ಲಿ ನೋವೋವ್ಯಾಕ್ಸ್ ಹೆಸರಿನಲ್ಲಿ ತಯಾರಿಸಲಾಗಿರುವ ಲಸಿಕೆಯನ್ನು ಭಾರತದಲ್ಲಿ ಕೋವೋವ್ಯಾಕ್ಸ್ ಹೆಸರಿನಲ್ಲಿ ತರಲು ಸೀರಂ ಸಂಸ್ಥೆ ಮುಂದಾಗಿತ್ತು.
ಆದರೆ ಇದೀಗ ಸೀರಂ ಸಂಸ್ಥೆಯ ನಡೆಯ ಬಗ್ಗೆ ಗರಂ ಆಗಿರುವ ತಜ್ಞರು, ಕೋವೋವ್ಯಾಕ್ಸ್ ಲಸಿಕೆಯನ್ನು ದೇಶದ 2 ರಿಂದ 17 ವರ್ಷದೊಳಗಿನ ಮಕ್ಕಳ ಮೇಲೆ 2 ಹಾಗೂ 3ನೇ ಹಂತದ ಪ್ರಯೋಗ ನಡೆಸಬಾರದು ಎಂದು ಸೂಚಿಸಿದ್ದಾರೆ.
ದೇಶದ 10 ಕೇಂದ್ರಗಳಲ್ಲಿ 12 ರಿಂದ 17 ವರ್ಷದ 460 ಮಕ್ಕಳು ಹಾಗೂ 2 ರಿಂದ 11 ವರ್ಷದ 920 ಮಕ್ಕಳ ಮೇಲೆ ಕೋವೋವ್ಯಾಕ್ಸ್ ಲಸಿಕೆ ಪ್ರಯೋಗಕ್ಕೆ ಅವಕಾಶ ಕಲ್ಪಿಸುವಂತೆ ಜೌಷಧ ನಿಯಂತ್ರಣ ಆಯೋಗಕ್ಕೆ ಸೀರಂ ಮನವಿ ಸಲ್ಲಿಸಿತ್ತು.
ಈ ಮನವಿ ಕುರಿತಂತೆ ಪರಿಶೀಲನೆ ನಡೆಸಿರುವ CDSO ( Central Drugs Standard Control Organisation ) ನ SEC ( Subject Expert committee)
ಈ ಲಸಿಕೆಯನ್ನು ಯಾವುದೇ ರಾಷ್ಟ್ರಗಳು ಅನುಮೋದಿಸಿಲ್ಲ. ಜೊತೆಗೆ ಈಗಾಗಲೇ ಈ ಲಸಿಕೆಯ ಪ್ರಯೋಗ ವಯಸ್ಕರ ಮೇಲೆ ನಡೆಯುತ್ತಿದೆ. ಈ ಪ್ರಯೋಗದ ಯಾವುದೇ ಮಾಹಿತಿಯನ್ನು ಸಂಸ್ಥೆ ಕೊಟ್ಟಿಲ್ಲ. ಹೀಗಾಗಿ ಮಕ್ಕಳ ಮೇಲೆ ಕ್ಲಿನಿಕಲ್ ಟ್ರಯಲ್ ನಡೆಸಲು ಅನುಮತಿ ಬೇಡ ಎಂದು ತಜ್ಞರು ಹೇಳಿದ್ದಾರೆ.
Discussion about this post