ಕುರಿಗಾಹಿಯ ಕೊಕ್ಕೆ ಕುಡುಗೋಲು ತಾಕಿ ಇಂಜಿನಿಯರ್ ವಿದ್ಯಾರ್ಥಿನಿಯೊಬ್ಬಳು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಕಲಬುರಗಿ ಜಿಲ್ಲೆಯ ರಾಮಮಂದಿರ ರಿಂಗ್ ರೋಡ್ನಲ್ಲಿ ಶುಕ್ರವಾರ ನಡೆದಿದೆ.
ಮೇಘಾ(20) ಮೃತ ವಿದ್ಯಾರ್ಥಿನಿ. ಕರುಣೇಶ್ವರ ಕಾಲನಿಯ ನಿವಾಸಿಯಾಗಿದ್ದ ಮೇಘಾ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಎಂದಿನಂತೆ ಶುಕ್ರವಾರ ಸ್ಕೂಟರ್ ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ವೇಳೆ ಎದುರುಗಡೆಯಿಂದ ಕುರಿಗಾಹಿಯೊಬ್ಬ ಹರಿತವಾದ ಕೊಕ್ಕೆ ಕುಡುಗೋಲನ್ನು ಕಟ್ಟಿಕೊಂಡು ಸೈಕಲ್ ಮೇಲೆ ಬರುತ್ತಿದ್ದ.
ಈ ವೇಳೆ ಕುಡುಗೋಲು ವಿದ್ಯಾರ್ಥಿಯ ಕುತ್ತಿಗೆಗೆ ತಾಕಿ ಕತ್ತು ಸೀಳಿದೆ. ಹರಿತವಾಗಿದ್ದ ಕುಡುಗೋಲು ಮೇಘನಾಳ ಕತ್ತು ಸೀಳಿದೆ. ಇದರಿಂದ ರಕ್ತಸ್ರಾವವಾಗಿ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತತಪಟ್ಟಿದ್ದಾಳೆ.
ಕುರಿಗಾಹಿ ಸ್ಥಳದಲ್ಲೇ ಕುಡುಗೋಲು ಬಿಟ್ಟು ಪರಾರಿಯಾಗಿದ್ದು, ವಿವಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Discussion about this post