ಕಲರ್ಸ್ ಕನ್ನಡ ಮತ್ತು ಝೀ ವಾಹಿನಿಯ ಅಬ್ಬರದ ನಡುವೆ ಟಿ.ಆರ್.ಪಿ ಗಿಟ್ಟಿಸಿಕೊಳ್ಳಲು ಒದ್ದಾಡುತ್ತಿರುವ ಸ್ಟಾರ್ ಸುವರ್ಣ ವಾಹಿನಿ ಹೊಸ ಹೊಸ ಕಾರ್ಯಕ್ರಮಗಳನ್ನು ಪರಿಚಯಿಸುತ್ತಿದೆ.
ಧಾರಾವಾಹಿಗಳು ವಾಹಿನಿಗೆ ದೊಡ್ಡ ಮಟ್ಟದಲ್ಲಿ TRP ತಂದುಕೊಡುತ್ತಿಲ್ಲ ಅನ್ನುವ ಕಾರಣಕ್ಕಾಗಿ ಇದೀಗ ರಿಯಾಲಿಟಿ ಶೋಗಳತ್ತ ಮುಖ ಮಾಡಲಾಗಿದೆ.
ಇದೇ ಹಿನ್ನಲೆಯಲ್ಲಿ ಪ್ರೇಮಿಗಳ ದಿನದಂದು ಸುವರ್ಣ ಪ್ರೇಮೋತ್ಸವ ಅನ್ನುವ ವಿಭಿನ್ನ ಕಾರ್ಯಕ್ರಮವೊಂದು ಪ್ರಸಾರವಾಗಲಿದೆ.
ಪಡ್ಡೆ ಹುಡುಗರ ನಿದ್ದೆಗೆಡಿಸುವ, ಕುಟುಂಬ ಸದಸ್ಯರೆಲ್ಲಾ ಒಟ್ಟಿಗೆ ಕೂತು ನೋಡಲು ಅಸಾಧ್ಯ ಅನ್ನುವ ಕಾರ್ಯಕ್ರಮ ಪ್ರೋಮೋವನ್ನು ವಾಹಿನಿ ಇದೀಗ ಬಿಡುಗಡೆ ಮಾಡಿದ್ದು, ನಿರೂಪಕಿ ಶಾಲಿನಿ ಅದನ್ನು ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ಕಿಶನ್ ಅವರ ಡ್ಯಾನ್ಸ್ ತುಣುಕು ಕೂಡಾ ಇದರಲ್ಲಿ ಸೇರಿದ್ದು, ಹಾಟ್ ಹಾಟ್ ಅನ್ನಿಸುವಂತಿದೆ. ಇನ್ನು ಶಾಲಿನಿ ಈ ಕಾರ್ಯಕ್ರಮ ನಿರೂಪಕಿಯಾಗಿದ್ದು, ಅವರಿದ್ದಾರೆ ಅಂದರೆ ಕೇಳಬೇಕಾ….ಕಿಶನ್ ಹಾಟ್ ಡ್ಯಾನ್ಸ್ ನೋಡಿದರೆ ಅವರು ಸುಮ್ಮನಿರುತ್ತಾರೆಯೇ…?
Discussion about this post