ಸೌರ ಮಧ್ವ ನವಮಿಯ ಪ್ರಯುಕ್ತ ಶ್ರೀಮಧ್ವಾಚಾರ್ಯರು ಪ್ರತಿ ನಿತ್ಯ ಮಧ್ಯಾಹ್ನ ಪೂಜೆ ಮಾಡುತ್ತಿದ್ದ ಸ್ಥಳ ಶ್ರೀಮಧ್ಯವಾಟ ಮಠದಲ್ಲಿ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ವಿಶೇಷ ಪೂಜೆ ನಡೆಸಿದರು.
ಶ್ರೀ ಮಧ್ವಾಚಾರ್ಯ ಕರಾರ್ಚಿತ ವೇದವ್ಯಾಸ (ವ್ಯಾಸಮುಷ್ಟಿ)ದೇವರಿಗೆ , ಶ್ರೀ ಭಾವಿಸಮೀರ ವಾದಿರಾಜರಿಂದ ಪ್ರತಿಷ್ಠಿತ ಶ್ರೀಮುಖ್ಯಪ್ರಾಣ ದೇವರಿಗೆ ಹಾಗೂ ಭೂತರಾಜರಿಗೆ ವಿಶೇಷ ಪೂಜೆ ನಡೆಯಿತು.
Discussion about this post