Thursday, March 4, 2021

ಖಾವಂದರ ಸಮ್ಮುಖದಲ್ಲಿ ನಡೆಯೋ ಧರ್ಮಸ್ಥಳದ ಸಾಮೂಹಿಕ ವಿವಾಹ ಕಾರ್ಯದಲ್ಲಿ ಮದುವೆಯಾಗೋದು ಹೇಗೆ ಗೊತ್ತಾ..?

Must read

- Advertisement -
- Advertisement -

ಮಂಗಳೂರು : ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿ ವರ್ಷ ಆಯೋಜಿಸುವ ಸಾಮೂಹಿಕ ವಿವಾಹ ಕಾರ್ಯಕ್ರಮ ಈ ಬಾರಿ ಎಪ್ರಿಲ್ 29 ರಂದು ಸಂಜೆ 6.48ಕ್ಕೆ ನೆರವೇರಲಿದೆ.

49ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾಗಲು ಬಯಸುವವರು ಎಪ್ರಿಲ್ 15 ರ ಒಳಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಿ ಹೆಸರು ನೋಂದಣಿ ಮಾಡಿಕೊಳ್ಳಬೇಕಿದೆ.

ಕ್ಷೇತ್ರದಲ್ಲಿ ವಿವಾಹವಾಗುವ ವರನಿಗೆ ಧೋತಿ, ಶಾಲು ಹಾಗೂ ವಧುವಿಗೆ ಸೀರೆ, ರವಿಕೆ ಕಣ ಮತ್ತು ಮಂಗಳ ಸೂತ್ರ ಮತ್ತು ಹೂವಿನ ಹಾರ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ 08256 – 266644 ಹಾಗೂ ವಾಟ್ಸಾಪ್ ಸಂಖ್ಯೆ 8147263422, 9663464648 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

1972 ರಲ್ಲಿ ವರದಕ್ಷಿಣಿ ಹಾಗೂ ಮದುವೆ ಹೆಸರಿನಲ್ಲಿ ನಡೆಯುವ ದುಂದು ವೆಚ್ಚವನ್ನು ತಡೆಯುವ ನಿಟ್ಟಿನಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಈ ಕಾರ್ಯಕ್ರಮ ಪ್ರಾರಂಭಿಸಿದ್ದರು.

ಕಳೆದ ವರ್ಷ ಕೊರೋನಾ ಕಾರಣದಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ರದ್ದುಗೊಂಡಿತ್ತು.

- Advertisement -
- Advertisement -
- Advertisement -

Latest article