ಜನ ನೋಟ್ ಬ್ಯಾನ್ ಆದ ವೇಳೆ ಬಾಯಿಗೆ ಬಂದಂತೆ ಟೀಕಿಸಿದರು. ಎಟಿಎಂ ಮುಂದೆ ನಿಂತು ಕಾಲು ನೋವು ಎಂದು ಕಣ್ಣೀರು ಹಾಕಿದರು.
ಆದರೆ ಮಲ್ಲೇಶ್ವರಂನಲ್ಲಿ ಕಾಲು ಕೆಜಿ ಸ್ವೀಟ್ ಗಾಗಿ ಜನ ಕ್ಯೂ ನಿಂತ ಪರಿ ಇದೆಯಲ್ಲ ಅದ್ಭುತ.
ಮಲ್ಲೇಶ್ವರಂ ಸಿಟಿಆರ್ ಬಳಿ ಇರುವ ಶ್ರೀಕೃಷ್ಣ ಸ್ವೀಟ್ಸ್ ಅಂಗಡಿಯವರು ಮೈಸೂರು ಪಾ ಅನ್ನುವ ಸ್ವೀಟ್ ಅನ್ನು ರಿಯಾಯತಿ ದರ ಕೊಡ್ತೀನಿ ಎಂದು ನೋಟೀಸ್ ಅಂಟಿಸಿದ್ದೇ ತಡ, ಜನ ಎಲ್ಲಿದ್ದರೋ ಗೊತ್ತಿಲ್ಲ, ಟೋಕನ್ ಪಡೆದು ಕ್ಯೂ ನಿಂತರು. ಮಳೆಯನ್ನು ಲೆಕ್ಕಿಸದೆ ಕ್ಯೂ ನಿಂತ ಶೈಲಿ ನೋಡಿದರೆ ಅಮೃತವೇ ಸಿಗುತ್ತದೆ ಅಂದುಕೊಳ್ಳಬೇಕು.
ಹಾಗಂತ ಮೈಸೂರು ಪಾ ವನ್ನು ಕೇವಲ ಒಬ್ಬನಿಗೆ ಅರ್ಧ ಅಥವಾ ಕಾಲು ಕೆ.ಜಿ. ಮಾತ್ರ ಕೊಡ್ತಾ ಇದ್ರು. ಇನ್ನು ಅಂಗಡಿ ಒಳಗೆ ಹೊಡೆದಾಟ ಆಯ್ತು ಎಂದು ನೂಕು ನುಗ್ಗಲು ಹೆಚ್ಚಾಗಿ ಕೊನೆಗೆ ಪೊಲೀಸರು ಬಂದು ಅಂಗಡಿ ಬಾಗಿಲು ಕೂಡಾ ಮುಚ್ಚಿಸಿದ್ದರು.
ಅಂಗಡಿ ಮುಚ್ಚಿದ ಮೇಲೂ ಜನ ಚದುರಿದ್ರ ಖಂಡಿತಾ ಇಲ್ಲ, ಈಗಲ್ಲ ಮತ್ತೆ ಅಂಗಡಿ ತೆರೆಯುತ್ತಾರೆ ಎಂದು ಕಾದು ಕೂತಿದ್ದರು.
ಇವೆಲ್ಲಾ ನಡೆದದ್ದು ನಿನ್ನೆ.
( ಫೋಟೋ ಕೃಪೆ – Suneel Krishna Sonnappanahali)
Discussion about this post