ಬೆಂಗಳೂರು : ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಪ್ರಸ್ತುತ BCCI ಅಧ್ಯಕ್ಷರಾಗಿರುವ ಸೌರವ್ ಗಂಗೂಲಿಯವರ ಜೀವನಾಧಾರಿತ ಬಾಲಿವುಡ್ ಸಿನಿಮಾ ತೆರೆ ಮೇಲೆ ಬರುವುದು ಖಚಿತವಾಗಿದೆ.ಸೌರವ್ ಗಂಗೂಲಿ ಅವರ ಬಯೋಪಿಕ್ ಮಾಡಲು ಸಿದ್ಧತೆ ನಡೆಯುತ್ತಿದೆ ಅನ್ನುವ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿತ್ತು. ಈಗ ಅದು ಅಧಿಕೃತವಾಗಿದೆ.
ಈ ಬಗ್ಗೆ ಗಂಗೂಲಿಯವರು ಕೂಡಾ ಸ್ಪಷ್ಟನೆ ಕೊಟ್ಟಿದ್ದು , ನನ್ನ ಬಯೋಪಿಕ್ ಮಾಡಲು ಅನುಮತಿ ನೀಡಿದ್ದೇನೆ. ಹಿಂದಿ ಭಾಷೆಯಲ್ಲಿ ಸಿನಿಮಾ ಮೂಡಿಬರಲಿದೆ ಅಂದಿದ್ದಾರೆ. ಆದರೆ ನಿರ್ದೇಶಕರು ಯಾರು, ನಿರ್ಮಾಪಕರು ಯಾರು ಅನ್ನುವ ಗುಟ್ಟನ್ನು ಗಂಗೂಲಿ ಬಿಟ್ಟು ಕೊಟ್ಟಿಲ್ಲ. ಆದರೆ ಗಂಗೂಲಿಯವರ ಪಾತ್ರದಲ್ಲಿ ರಣಬೀರ್ ಕಪೂರ್ ನಟಿಸೋದು ಖಚಿತವಾಗಿದೆ.
ಮಾಹಿತಿಗಳ ಪ್ರಕಾರ ದೊಡ್ಡ ನಿರ್ಮಾಣ ಸಂಸ್ಥೆಯೊಂದು ಚಿತ್ರಕ್ಕೆ ಬಂಡವಾಳ ಹೂಡಲಿದ್ದು 200ರಿಂದ 250 ಕೋಟಿ ರೂಪಾಯಿ ವೆಚ್ಚದಲ್ಲಿ ಚಿತ್ರ ಮೂಡಿ ಬರಲಿದೆ, ಈ ಚಿತ್ರದಲ್ಲಿ ಗಂಗೂಲಿ ಅವರ ಆರಂಭದ ಜೀವನದಿಂದ ಹಿಡಿದು ಬಿಸಿಸಿಐ ಅಧ್ಯಕ್ಷರಾಗುವವರೆಗಿನ ಜರ್ನಿಯ ವಿವರಗಳು ಇರಲಿದೆಯಂತೆ.
ಈಗಾಗಲೇ ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ’, ಅಜರುದ್ದೀನ್ ಜೀವನಾಧಾರಿತ ಸಿನಿಮಾ, ಸಚಿನ್ ಜೀವನದ ಕುರಿತು ‘ಸಚಿನ್: ಎ ಬಿಲಿಯನ್ ಡ್ರೀಮ್ಸ್ ಮೂಡಿ ಬಂದಿತ್ತು.
Discussion about this post