ಕೆಲವರು ಓಂ ಮತ್ತು
ಗೋವು ಎಂಬ ಶಬ್ದ ಕೇಳಿದ ತಕ್ಷಣ ದೇಶ 16ನೇ ಶತಮಾನಕ್ಕೆ
ಮರಳಿದೆ ಎಂದು ಕಿರುಚುತ್ತಾರೆ. ಇದು ದುರಾದೃಷ್ಟಕರ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ
ಹೇಳಿದ್ದಾರೆ.
ಉತ್ತರ ಪ್ರದೇಶದ ಮಥುರಾದಲ್ಲಿ ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಕೃತಕ ಗರ್ಭಧಾರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು ನಮ್ಮ ದೇಶದಲ್ಲಿ ಗೋವು ಮತ್ತು ಓಂ ಪದಗಳನ್ನು ಕೇಳಿದರೆ ಕೆಲವರಿಗೆ ಆಗುವುದಿಲ್ಲ. ಈ ಪದಗಳನ್ನು ಕೇಳಿದರೆ ಅವರು ನಮ್ಮ ದೇಶ 16ನೇ ಶತಮಾನಕ್ಕೆ ಹೋಗಿದೆ ಎಂದು ಭಾವಿಸುತ್ತಾರೆ. ಇಂಥ ಸಂಕುಚಿತ ಮನೋಭಾವದಿಂದ ದೇಶದ ಪ್ರಗತಿ ಸಾಧ್ಯವಿಲ್ಲ ಎಂದರು.
ಓಂ,ಗೋವು ಪದ ಕೇಳಿದರೆ ಕೆಲವರಿಗೆ ಆಲರ್ಜಿ : ನರೇಂದ್ರ ಮೋದಿ 1
ಗೋವು ಈ ದೇಶದ ಅಮೂಲ್ಯ ಸಂಪತ್ತಾಗಿದ್ದು, ಗ್ರಾಮೀಣ ಭಾಗದ
ಆರ್ಥಿಕ ಪರಿಸ್ಥಿತಿ ಸುಧಾರಣೆಯಲ್ಲಿ ಗೋವುಗಳದ್ದು ಪ್ರಮುಖ ಪಾತ್ರವಹಿಸುತ್ತದೆ. ಗೋಸಂಪತ್ತು
ಇಲ್ಲದೆ ಹೋದರೆ ಈ ದೇಶದ ಆರ್ಥಿಕ ವ್ಯವಸ್ಥೆ, ಗ್ರಾಮೀಣ ಜನ ಜೀವನ ಮುನ್ನಡೆಯಲು ಸಾಧ್ಯವಿಲ್ಲ
ಎಂದರು.
ಹೀಗಾಗಿಯೇ ಗೋ ಸಂಪತ್ತಿನ ಕುರಿತಂತೆ ಕೇಂದ್ರ ಸರ್ಕಾರ ಗಂಭೀರವಾಗಿದ್ದು, ಈ ಸಂಬಂಧ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.
ಓಂ,ಗೋವು ಪದ ಕೇಳಿದರೆ ಕೆಲವರಿಗೆ ಆಲರ್ಜಿ : ನರೇಂದ್ರ ಮೋದಿ 2
ಇದೇ ವೇಳೆ ಆಫ್ರಿಕಾದಲ್ಲಿ ರವಾಂಡಾ ದೇಶದ ಕಥೆಯನ್ನು ಉಲ್ಲೇಖಿಸಿದ ಪ್ರದಾನಿ ನರೇಂದ್ರ ಮೋದಿ “ ನಾನು ಅಲ್ಲಿಗೆ ಹೋಗಿದ್ದೆ. ಒಂದು ಪ್ರಮುಖ ಕಾರ್ಯಕ್ರಮವಿದೆ. ಅದು ಏನೆಂದರೆ ಸರ್ಕಾರವೇ ಜನರಿಗೆ ಹಸುಗಳನ್ನು ನೀಡುತ್ತದೆ. ಆ ಹಸುಗೆ ಜನಿಸುವ ಹೆಣ್ಣು ಕರವನ್ನು ವಾಪಸ್ ಸರ್ಕಾರಕ್ಕೆ ನೀಡುಬೇಕು ಎಂಬ ಷರತ್ತು ವಿಧಿಸಲಾಗುತ್ತದೆ. ಜನರಿಂದ ವಾಪಸ್ ಪಡೆಯುವ ಹೆಣ್ಣು ಕರುವನ್ನು ಹಸು ಇಲ್ಲದವರಿಗೆ ಸರ್ಕಾರ ನೀಡುತ್ತೆ. ಈ ರೀತಿ ಮಾಡುವುದರಿಂದ ರವಾಂಡಾದ ಪ್ರತಿ ಮನೆಯಲ್ಲೂ ಹಸುಗಳು ಇವೆ. ಪ್ರತಿ ಮನೆಯಲ್ಲೂ ಹಾಲು ಉತ್ಪಾದನೆ ಮತ್ತು ಪ್ರಾಣಿಗಳ ಪಾಲನೆ ಇದ್ದು, ಅವರ ಆರ್ಥಿಕತೆಯನ್ನು ಸದೃಢಗೊಳಿಸಿದೆ ಎಂದು ಪ್ರಧಾನಿ ಹೇಳಿದರು.
Discussion about this post