ಚೀನಾದಲ್ಲಿ ಅಬ್ಬರಿಸುತ್ತಿರುವ ಕೊರೋನಾ ವೈರಸ್ ನಿಂದ ಭಾರತೀಯರನ್ನು ರಕ್ಷಿಸುವ ಸಲುವಾಗಿ ಕೇಂದ್ರ ಸರ್ಕಾರ ಈಗಾಗಲೇ ಕ್ರಮಗಳನ್ನು ಕೈಗೊಂಡಿದೆ. ವುಹಾನ್ ನಗರಕ್ಕೆ ಎರಡು ವಿಶೇಷ ವಿಮಾನಗಳನ್ನು ಕಳುಹಿಸಿ 649ಕ್ಕೂ ಹೆಚ್ಚು ಭಾರತೀಯರನ್ನು ಕರೆ ತರಲಾಗಿದೆ.
ಆದರೆ ಮತ್ತಷ್ಟು ಭಾರತೀಯರು ಇದೀಗ ವುಹಾನ್ ನಗರದಲ್ಲಿದ್ದು ಅವರ ರಕ್ಷಣೆಗೂ ಕಾರ್ಯ ತಂತ್ರಗಳನ್ನು ರೂಪಿಸಲಾಗಿದೆ.
ಈ ನಡುವೆ ಶನಿವಾರ ವುಹಾನ್ ನಿಂದ ದೆಹಲಿಗೆ ಮೊದಲ ತಂಡದಲ್ಲಿ ಪ್ರಯಾಣಿಸಬೇಕಾಗಿದ್ದ 6 ಮಂದಿ ಭಾರತೀಯನ್ನು ಚೀನಾ ಅಧಿಕಾರಿಗಳು ತಡೆ ಹಿಡಿದ್ದಾರೆ.
ಮೊದಲ ತಂಡದಲ್ಲಿ 330 ಮಂದಿ ಪ್ರಯಾಣ ಬೆಳೆಸಬೇಕಾಗಿತ್ತು. ಆದರೆ 6 ಮಂದಿಯಲ್ಲಿ ತೀವ್ರ ತರದ ಜ್ವರದ ಲಕ್ಷಣ ಕಂಡು ಬಂದ ಹಿನ್ನಲೆಯಲ್ಲಿ ಅವರನ್ನು ಚಿಕಿತ್ಸಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಇದೀಗ ಇಮಿಗ್ರೇಷನ್ ಅಧಿಕಾರಿಗಳು 6 ಮಂದಿಯ ವೈದ್ಯಕೀಯ ವರದಿಯನ್ನು ಎದುರು ನೋಡುತ್ತಿದ್ದಾರೆ.
ಒಂದು ವೇಳೆ ಇವರಲ್ಲಿ ಯಾವುದೇ ಕೊರೋನಾ ವೈರಸ್ ಲಕ್ಷಣಗಳು ಕಂಡು ಬಂದಿಲ್ಲ ಅಂದ್ರೆ ಅವರನ್ನು ಭಾರತಕ್ಕೆ ಕಳುಹಿಸಿಕೊಡಲಾಗುತ್ತದೆ.
ಒಂದು ವೇಳೆ ಕೊರೋನಾ ವೈರಸ್ ಲಕ್ಷಣಗಳಿದ್ದರೆ ಅಲ್ಲೇ ಚಿಕಿತ್ಸೆ ಮುಂದುವರಿಸಲಾಗುತ್ತದೆ.
Discussion about this post