ನವದೆಹಲಿ : ಕೊರೋನಾ ಮಣಿಸುವ ಸಲುವಾಗಿ ನೀಡಲಾಗುತ್ತಿರುವ ಲಸಿಕೆ ಪಡೆಯಲು ಹಲವು ಕಡೆಗಳಲ್ಲಿ ಜನ ಹಿಂದೆ ಮುಂದೆ ಯೋಚಿಸುತ್ತಿದ್ದಾರೆ.
ಕೆಲವರು ಎಲ್ಲಾ ಗಾಸಿಪ್ ಗಳನ್ನು ಬದಿಗೊತ್ತಿ ಲಸಿಕೆ ಪಡೆದು ನೆಮ್ಮದಿಯಾಗಿದ್ದಾರೆ.
ಈ ನಡುವೆ ಸಿಂಗಾಪುರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಯಡವಟ್ಟು ಮಾಡಿದ್ದು, ಫೈಜರ್ ಕೊರೋನಾ ಲಸಿಕೆಯ 5 ಡೋಸ್ ಗಳನ್ನು ನೀಡಿದ್ದಾರೆ.
ಹೇಳಿ ಕೇಳಿ ಅದು ಅಮೆರಿಕಾದ ಫೈಜರ್ ಲಸಿಕೆ, ಮೊದಲೇ ಸಾಕಷ್ಟು ಯಡವಟ್ಟುಗಳನ್ನು ಮಾಡಿಕೊಂಡಿರುವ ಲಸಿಕೆಯದು.
ಆಗಿರೋದು ಇಷ್ಟು, ಫೆ 6 ರಂದು ಆರೋಗ್ಯ ಇಲಾಖೆಯ ನೌಕರನೊಬ್ಬ ಲಸಿಕೆ ಪಡೆಯಲು ಬಂದಿದ್ದಾರೆ. ಲಸಿಕೆ ನೀಡಲು ಎಲ್ಲಾ ಸಿದ್ದತೆ ಮಾಡಿಕೊಂಡ ಸಿಬ್ಬಂದಿ ಲಸಿಕೆಯನ್ನು ಸೀರಿಂಜ್ ಗೆ ತುಂಬಿಸಿ ಇನ್ನೇನು ಲಸಿಕೆ ನೀಡಬೇಕು ಅನ್ನುವಷ್ಟರಲ್ಲಿ ಬೇರೆ ಕಡೆ ತೆರಳಿದ್ದಾರೆ.
ಅವರು ಆ ಕಡೆ ಹೋಗುತ್ತಿದ್ದಂತೆ ಮತ್ತೊಬ್ಬ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ನೀಡಲು ಬಂದಿದ್ದಾರೆ. ಆದರೆ ಈ ಹಿಂದಿನ ಸಿಬ್ಬಂದಿ ಲಸಿಕೆಯನ್ನು ದುರ್ಬಲಗೊಳಿಸಿದ್ದಾರೆಯೇ ಇಲ್ಲವೋ ಅನ್ನುವುದನ್ನು ಪರಿಶೀಲನೆ ನಡೆಸದೆ ಹಾಗೇ ಚುಚ್ಚಿದ್ದಾರೆ.
ನಿಯಮಗಳ ಪ್ರಕಾರ ಫೈಜರ್ ಲಸಿಕೆಯ ಒಂದು ಸೀಸೆಯಿಂದ 5 ಜನರಿಗೆ ಲಸಿಕೆ ನೀಡಬೇಕು, ಆದರೆ ಈ ಸಿಬ್ಬಂದಿ ಒಂದೇ ವ್ಯಕ್ತಿಗೆ 5 ಜನರಿಗೆ ಕೊಡಬಹುದಾದ ಲಸಿಕೆಯನ್ನು ಒಂದೇ ವ್ಯಕ್ತಿಗೆ ಕೊಟ್ಟಿದ್ದಾರೆ.
ಬಳಿಕ ಲಸಿಕೆಯ ಲೆಕ್ಕ ತಪ್ಪಿದೆ ಅನ್ನುವುದು ಗಮನಕ್ಕೆ ಬಂದಾಗ ಯಡವಟ್ಟು ಗೊತ್ತಾಗಿದೆ. ಅದೃಷ್ಟ ಅಂದ್ರೆ ಲಸಿಕೆ ಪಡೆದ ಆರೋಗ್ಯವಾಗಿದ್ದಾರಂತೆ. ಹಾಗಿದ್ದರೂ ಆರೋಗ್ಯ ಇಲಾಖೆ ಹೆಚ್ಚು ಡೋಸ್ ಪಡೆದ ವ್ಯಕ್ತಿಯ ಆರೋಗ್ಯದ ಮೇಲೆ ತೀವ್ರ ನಿಗಾ ಇಟ್ಟಿದೆ.
Discussion about this post