ಹಿಂದಿ ಕಿರುತೆರೆಯ ಮೆಗಾ ಧಾರಾವಾಹಿ ‘ಬಾಲಿಕಾ ವಧು’ ಖ್ಯಾತಿಯ ನಟ ಸಿದ್ಧಾರ್ಥ್ ಶುಕ್ಲಾ ಅವರು ಹೃದಯಘಾತದಿಂದ ನಿಧನ ಹೊಂದಿದ್ದಾರೆ. 40 ವರ್ಷದ ಶುಕ್ಲಾ ಅವರ ಸಾವು ಇದೀಗ ಆತಂಕ ಮೂಡಿಸಿದೆ. ಸಿದ್ಧಾರ್ಥ್ ಶುಕ್ಲಾ ನಿಧನರಾಗಿರುವ ಸುದ್ದಿಯನ್ನು ಮುಂಬೈನ ಕೂಪರ್ ಅಸ್ಪತ್ರೆಯ ವೈದ್ಯರು ಎಎನ್ಐಗೆ ಖಚಿತಪಡಿಸಿದ್ದಾರೆ. ಸಿದ್ಧಾರ್ಥ್ ಶುಕ್ಲಾಗೆ ಮುಂಜಾನೆ ಹೃದಯಾಘಾತ ಸಂಭವಿಸಿದೆ. ಕೂಡಲೇ ಅವರನ್ನು ಮುಂಬೈನ ಆಸ್ಪತ್ರೆಗೆ ರವಾನಿಸಲಾಗಿತ್ತು ಎಂದು ಗೊತ್ತಾಗಿದೆ.
ಜುಲೈ ತಿಂಗಳಲ್ಲಿ ಶುಕ್ಲಾ ಅವರ ಬಿಎಂಡಬ್ಲ್ಯು ಎಕ್ಸ್ 5 ಕಾರು ಅಪಘಾತಕ್ಕೆ ಒಳಗಾಗಿತ್ತು.
ಬಾಲಿಕಾ ವಧು ಮತ್ತು ಬಬುಲ್ ಕಾ ಆಂಗನ್ ಚುಟ್ಟೆ ನಾ ಟೆಲಿವಿಷನ್ ಧಾರಾವಾಹಿಗಳಲ್ಲಿನ ಪಾತ್ರಗಳ ಮೂಲಕ ಜನಪ್ರಿಯತೆ ಗಳಿಸಿರುವ ಶುಕ್ಲಾ ಅವರು 2008ರಿಂದ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿದ್ದಾರೆ.ಹಂಟಿ ಶರ್ಮಾ ಕಿ ದುಲ್ಹನಿಯ ಮತ್ತು ಸೂರ್ಮಾ ಚಿತ್ರದಲ್ಲೂ ನಟಿಸಿದ್ದರು. 2014ರಲ್ಲಿ ಸಿದ್ದಾರ್ಥ್ ಅವರು ಇದೇ ರೀತಿ ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿ ಅಪಘಾತ ಮಾಡಿದ್ದರು.
Discussion about this post