ಮೈಸೂರು : ಅಮೆರಿಕಾ ಚುನಾವಣೆಯಲ್ಲಿ ಸೋತ ಟ್ರಂಪ್ ಕೂಡಾ ಸೋಲು ಒಪ್ಪಿಕೊಳ್ಳಲೇ ಇಲ್ಲ.
ಹಾಗೇ ನಮ್ಮ ಸಿದ್ದರಾಮಯ್ಯ ಸೋಲನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಅಲ್ಲಿ ಟ್ರಂಪಾಯಣ ನಡೆಯುತ್ತಿದ್ರೆ ಇಲ್ಲಿ ಸಿದ್ದರಾಮಯಾಣ ನಡೆಯುತ್ತಿದೆ ಎಂದು ಸಿದ್ದರಾಮಯ್ಯ ಅವರನ್ನು ಕರ್ನಾಟಕದ ಟ್ರಂಪ್ ಗೆ ಹೋಲಿಸಿದ್ದಾರೆ.
ಇದೇ ವೇಳೆ ಕುರುಬ ಹೋರಾಟಕ್ಕೆ ಸಿದ್ದರಾಮಯ್ಯ ಗೈರು ಹಾಜರಾಗಿರುವುದನ್ನು ಖಂಡಿಸಿದ ವಿಶ್ವನಾಥ್, ತಾನು ಇಲ್ಲದಿದ್ರೆ ಹೋರಾಟ ನಡೆಯುತ್ತಿಲ್ಲ ಅಂದುಕೊಂಡಿದ್ದರು. ಆದರೆ ಅದು ಸುಳ್ಳಾಗಿದೆ.

ಹೀಗಾಗಿ ಸಮುದಾಯ ತನ್ನ ಜೊತೆಗಿಲ್ಲ ಅನ್ನುವ ಅರಿವು ಸಿದ್ದರಾಮಯ್ಯ ಅವರಿಗಾಗುತ್ತಿದೆ. ಹೀಗಾಗಿ ಹಿಂದ, ಅಹಿಂದ ಅನ್ನುತ್ತಿದ್ದಾರೆ.
ಕಾಂಗ್ರೆಸ್ ನಲ್ಲಿ ಡಿಕೆ ಶಿವಕುಮಾರ್ ನಾಯಕತ್ವ ಪ್ರಬಲವಾಗುತ್ತಿದೆ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ಅಭದ್ರತೆ ಕಾಡುತ್ತಿದೆ. ಈ ಕಾರಣದಿಂದ ಜಾತಿ ಸಮಾವೇಶ ನಡೆಸಲು ಅವರು ಹೊರಟಿದ್ದಾರೆ ಎಂದು ವಿಶ್ವನಾಥ್ ಹೇಳಿದ್ದಾರೆ.
Discussion about this post