ಬೆಂಗಳೂರು : ಕೆಲ ದಿನಗಳ ಹಿಂದೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕ ಮಧು ಬಂಗಾರಪ್ಪ ಅಕ್ಕ ಗೀತಾ ಶಿವರಾಜ್ ಕುಮಾರ್ ಕೂಡಾ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಅಂದಿದ್ದರು.
ಅಲ್ಲಿಗೆ ಸಹೋದರ ಕುಮಾರ್ ಬಂಗಾರಪ್ಪರನ್ನು ಮಣಿಸಲು ಅಕ್ಕ ತಂಗಿ ಜೊತೆಯಾಗುತ್ತಿದ್ದಾರೆ ಅನ್ನುವುದು ಪಕ್ಕಾ ಆಗಿತ್ತು.
ಆದರೆ ಈ ನಡುವೆ ಮತ್ತೊಂದು ಕುತೂಹಲಕಾರಿ ಬೆಳವಣಿಗೆ ನಡೆದಿದ್ದು, ನಟ ಶಿವರಾಜ್ ಕುಮಾರ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ಕೊಟ್ಟು ಮಾತುಕತೆ ನಡೆಸಿದ್ದಾರೆ.
ಸೋಮವಾರ ಬೆಳಗ್ಗೆ ಸದಾಶಿವನಗರದಲ್ಲಿ ಇಬ್ಬರ ಭೇಟಿ ನಡೆದಿದ್ದು, ಇದೊಂದು ಸೌಜನ್ಯದ ಭೇಟಿ, ವೈಯುಕ್ತಿಕ ವಿಚಾರಗಳ ಬಗ್ಗೆ ಚರ್ಚಿಸಲು ಶಿವಕುಮಾರ್ ನಿವಾಸಕ್ಕೆ ಬಂದೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
ಇನ್ನು ಶಿವಕುಮಾರ್ ಕೂಡಾ ಈ ಭೇಟಿ ಬಗ್ಗೆ ಮಾತನಾಡಿದ್ದು, ಶಿವರಾಜ್ ಅವರ ಕುಟುಂಬ ಇಡೀ ದೇಶದ ಆಸ್ತಿ, ಶಿವರಾಜ್ ಕುಮಾರ್ ನಮ್ಮ ಆತ್ಮೀಯರು, ನಮಗೂ ಅವರಿಗೂ ವೈಯುಕ್ತಿಕ ಸಂಬಂಧಗಳಿವೆ.
ಮಧು ಬಂಗಾರಪ್ಪ ಅವರಿಗೆ ಮಾತನಾಡುವ ಹಕ್ಕಿದೆ. ಈ ಬಗ್ಗೆ ಸಮಯ ಬಂದಾಗ ಗೀತಾ ಶಿವರಾಜ್ ಕುಮಾರ್ ಅವರೇ ಮಾತನಾಡುತ್ತಾರೆ ಅಂದಿದ್ದಾರೆ.
ಆದರೆ ಮಾಹಿತಿಗಳ ಪ್ರಕಾರ ಗೀತಾ ಅವರು ಕಾಂಗ್ರೆಸ್ ಪಕ್ಷ ಸೇರುವುದು ಖಚಿತವಾಗಿದೆ. ಆದರೆ ಅವರು ಶಿವಮೊಗ್ಗದಲ್ಲಿ ರಾಜಕೀಯ ಮಾಡಲು ಬಯಸುತ್ತಿಲ್ಲ ಅನ್ನಲಾಗಿದೆ.
ಶಿವಮೊಗ್ಗದಲ್ಲಿ ಯಡಿಯೂರಪ್ಪ ಕುಟುಂಬದ ವಿರುದ್ಧ ರಾಜಕೀಯ ಪೈಪೋಟಿಗೆ ಮುಂದಾದರೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಜೊತೆಗೆ ಕುಮಾರ್ ಬಂಗಾರಪ್ಪ ಅವರಿಗೆ ಒಳ್ಳೆ ಹೆಸರು ಕೂಡಾ ಇದೆ. ಇದು ಕೂಡಾ ಮುಂದೆ ಸಮಸ್ಯೆಯಾಗಬಹುದು.
ಈ ಕಾರಣದಿಂದ ಗೀತಾ ಅವರು ಬೇರೆ ಕ್ಷೇತ್ರಗಳ ಬಗ್ಗೆ ಒಲವು ಹೊಂದಿದ್ದಾರೆ ಅನ್ನಲಾಗಿದೆ.
ಈ ಹಿಂದೆ 2014ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಗೀತಾ ಅರು ಬಿಜೆಪಿ ವಿರುದ್ಧ ಸೋಲು ಕಂಡಿದ್ದರು.
Discussion about this post